ಹಳ್ಳಿಗೂ ಓಕೆ.. ಸಿಟಿಗೂ ಓಕೆ.. ಅತಿ ಕಡಿಮೆ ಬೆಲೆಗೆ ಸಿಗುವ 'ಪಂಚ' ಎಲೆಕ್ಟ್ರಿಕ್ ಬೈಕ್‌ಗಳಿವು!
ಹಳ್ಳಿಯೇ ಆಗಿರಲಿ.. ಪಟ್ಟಣವೇ ಆಗಿರಲಿ ದಿನನಿತ್ಯದ ಕೆಲಸಗಳಿಗೆ ದ್ವಿಚಕ್ರ ವಾಹನಗಳು ಬೇಕೇ ಬೇಕು. ಅದರಲ್ಲೂ ಬೈಕ್‌ಗಳು ಎಲ್ಲ ವಯೋಮಾನದವರಿಗೂ ತೀರಾ ಅನಿವಾರ್ಯವಾಗಿವೆ. ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ಗೆ ಹೋಲಿಕೆ ಮಾಡಿದರೆ, ಎಲೆಕ್ಟ್ರಿಕ್ ಬೈಕ್‌ಗಳು (Electric Bikes) ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಬಹುತೇಕ ಗ್ರಾಹಕರು ಅವುಗಳ ಖರೀದಿಯತ್ತ ಮನಸ್ಸು ಮಾಡುತ್ತಿದ್ದಾರೆ. ನಾವಿಲ್ಲಿ ಅತಿ ಅಡಿಮೆ ಬೆಲೆಯಲ್ಲಿ ಸಿಗುವುದರೊಂದಿಗೆ ದಿನಬಳಕೆಗೂ ಹೆಚ್ಚು ಸೂಕ್ತವಾಗಿರುವ ಪ್ರಮುಖ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.
ಓಲಾ ರೋಡ್‌ಸ್ಟರ್ ಎಕ್ಸ್ (Ola Roadster X): ಇದು ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ಎಲೆಕ್ಟ್ರಿಕ್ ಬೈಕ್ ಎಂದೇ ಹೆಸರುವಾಸಿಯಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ಮಧ್ಯಮ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಇಂದಿನಿಂದ ಈ ಮೋಟಾರ್‌ಸೈಕಲ್‌ನ ವಿತರಣೆಯೂ ಶುರುವಾಗಿದೆ.

ಹೊಚ್ಚ ಹೊಸ 'ಓಲಾ ರೋಡ್‌ಸ್ಟರ್ ಎಕ್ಸ್' ಎಲೆಕ್ಟ್ರಿಕ್ ಬೈಕ್, ಕನಿಷ್ಠ ರೂ.84,999 ಮತ್ತು ಗರಿಷ್ಠ ರೂ.1.05 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.5 ಕೆಡಬ್ಲ್ಯೂಹೆಚ್, 3.5 ಕೆಡಬ್ಲ್ಯೂಹೆಚ್ ಮತ್ತು 4.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 117 ರಿಂದ 200 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ. 4.3-ಇಂಚಿನ ಎಲ್‌ಸಿಡಿ ಸೆಗ್ಮೆಂಟ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಒಬೆನ್ ರೋರ್ ಇಝಡ್ (Oben Rorr EZ): ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸಹ ಬಜೆಟ್ ಬೆಲೆಯಲ್ಲಿಯೇ ಖರೀದಿದಾರರಿಗೆ ದೊರೆಯುತ್ತದೆ. ಇದು ರೂ.89,999 ರಿಂದ ರೂ.1.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.6 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 110 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ರಿವೋಲ್ಟ್ ಆರ್‌ವಿ400 (Revolt RV400): ಇದೊಂದು ಪ್ರಮುಖ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ದೊರೆಯುತ್ತದೆ. ರೂ.1.24 ಲಕ್ಷದಿಂದ ರೂ.1.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 3.24 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದ್ದು, ಪೂರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ವರೆಗೂ ಓಡುತ್ತದೆ.
ಈ ರಿವೋಲ್ಟ್ ಆರ್‌ವಿ400 ಎಲೆಕ್ಟ್ರಿಕ್ ಮೋಟಾರ್‌ಸೈಕಲ್, 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಎಲ್‌ಸಿಡಿ ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ಓಟಿಎ ಅಪ್‍ಡೇಟ್‍ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಕಾಸ್ಮಿಕ್ ಬ್ಲ್ಯಾಕ್, ಸ್ಟೆಲ್ತ್ ಬ್ಲ್ಯಾಕ್, ಇಂಡಿಯಾ ಬ್ಲೂ, ಮಿಸ್ಟ್ ಗ್ರೇ ಮತ್ತು ಎಕ್ಲಿಪ್ಸ್ ರೆಡ್ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಮ್ಯಾಟರ್ ಏರಾ (Matter Aera): ಇದು ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್ ಆಗಿದೆ. ಆದರೂ ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಬಳಕೆ ಮಾಡಬಹುದು. ಈ ಮೋಟಾರ್‌ಸೈಕಲ್ ರೂ.1.79 ಲಕ್ಷದಿಂದ ರೂ.1.89 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. 5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 172 ಕಿಲೋಮೀಟರ್ (ರೇಂಜ್) ನೀಡುತ್ತದೆ.
ಕಬೀರಾ ಮೊಬಿಲಿಟಿ ಕೆಎಂ3000 (Kabira Mobility KM3000): ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೂ.1.74 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 4.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 178 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ. 5-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications