80+ ಕಿ.ಮೀ ಮೈಲೇಜ್.. ಈ 5 ಬೈಕ್‌ಗಳಿಂದ ಪೆಟ್ರೋಲ್‌ಗೆ ವ್ಯಯಿಸುವ ಹಣ ಉಳಿಸಿ! ಆಫೀಸ್‌ಗೆ ಹೋಗಲು ಬೆಸ್ಟ್
ಬೆಂಗಳೂರು, ಮುಂಬೈ, ನವದೆಹಲಿ, ಹೈದರಾಬಾದ್ ಹಾಗೂ ಚೆನ್ನೈನಂತಹ ಮಹಾನಗರಗಳಲ್ಲಿ ಕಚೇರಿ ಕೆಲಸಕ್ಕೆ ತೆರಳಲು ಬೈಕ್‌ಗಳು ತೀರಾ ಅನಿವಾರ್ಯವಾಗಿವೆ. ನೀವು ಬಜೆಟ್ ಬೆಲೆಗೆ ಗರಿಷ್ಠ ಮೈಲೇಜ್ ನೀಡಬಲ್ಲ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಟಿವಿಎಸ್ ರೇಡಿಯನ್, ಯಮಹಾ ಎಫ್‌ಝಡ್‌ಎಸ್ ಎಫ್‌ಐ ವಿ4, ಹೀರೋ ಎಕ್ಸ್‌ಟ್ರೀಮ್ 125ಆರ್, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಹಾಗೂ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳು ಅತ್ಯುತ್ತಮವಾದ ಆಯ್ಕೆಯಾಗಿವೆ. ನಾವಿಲ್ಲಿ ಈ ಬೈಕ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಯೋಣ.
ಟಿವಿಎಸ್ ರೇಡಿಯನ್ (Tvs Radeon):
ಇದು ಜನಪ್ರಿಯ ಮೋಟಾರ್‌ಸೈಕಲ್ ಆಗಿದ್ದು, ಅಗ್ಗದ ದರದಲ್ಲೂ ಗ್ರಾಹಕರ ಖರೀದಿಗೆ ಲಭ್ಯವಿದೆ. ಕನಿಷ್ಠ ರೂ.86,894 ರಿಂದ ಗರಿಷ್ಠ ರೂ.1 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಮೆಟಲ್ ಬ್ಲ್ಯಾಕ್, ಆಲ್ ಬ್ಲ್ಯಾಕ್, ಟೈಟಾನಿಯಂ ಗ್ರೇ, ರಾಯಲ್ ಪರ್ಪಲ್ ಮತ್ತು ಸ್ಟಾರ್‌ಲೈಟ್ ಬ್ಲ್ಯೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ 'ರೇಡಿಯನ್' 109.7 ಸಿಸಿ ಪೆಟ್ರೋಲ್ ಎಂಜಿನ್ ಮತ್ತು 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 73 ಕಿಲೋಮೀಟರ್‌ಗೂ ಅಧಿಕ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸೆಲ್ಫ್-ಸ್ಟಾರ್ಟ್ ಹಾಗೂ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) 5-ಸ್ಟೆಪ್ ಪ್ರಿ-ಲೋಡ್ ಅಡ್ಜಸ್ಟೇಬಲ್ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.
ಯಮಹಾ ಎಫ್‌ಝಡ್‌ಎಸ್ ಎಫ್‌ಐ ವಿ4 (Yamaha FZS-FI V4):
ಈ ಬೈಕ್ ರೂ.1.51ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಐಸ್ ಫ್ಲೂ ವರ್ಮಿಲಿಯನ್, ಸಯಾನ್ ಮೆಟಾಲಿಕ್ ಗ್ರೇ, ರೇಸಿಂಗ್ ಬ್ಲೂ, ಸೈಬರ್ ಗ್ರೀನ್ ಮತ್ತು ಮೆಟಾಲಿಕ್ ಗ್ರೇ ಎಂಬ 4 ಬಣ್ಣಗಳೊಂದಿಗೂ ದೊರೆಯುತ್ತದೆ.

ಹೊಸ 'ಯಮಹಾ ಎಫ್‌ಝಡ್‌ಎಸ್ ಎಫ್‌ಐ ವಿ4' ಮೋಟಾರ್‌ಸೈಕಲ್, 149 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕಿಲೋಮೀಟರ್‌ಗೂ ಮೈಲೇಜ್ ಕೊಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಹೀರೋ ಎಕ್ಸ್‌ಟ್ರೀಮ್ 125ಆರ್ (Hero Xtreme 125R):
ಇದು ಪ್ರಮುಖ ಮೋಟಾರ್‌ಸೈಕಲ್ ಆಗಿದೆ. ಕನಿಷ್ಠ ರೂ.1.13 ಲಕ್ಷ ಮತ್ತು ಗರಿಷ್ಠ ರೂ.1.23 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಸ್ಟಾಲಿಯನ್ ಬ್ಲ್ಯಾಕ್, ಅಬ್ರಾಕ್ಸ್ ಆರೆಂಜ್, ಫೈರ್‌ಸ್ಟಾರ್ಮ್ ರೆಡ್ & ಕೋಬಾಲ್ಟ್ ಬ್ಲ್ಯೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 124.7 ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 81 ಕಿಲೋಮೀಟರ್‌ಗೂ ಮೈಲೇಜ್ ನೀಡುತ್ತದೆ. ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus):
ಈ ಬೈಕ್ ರೂ.88,485 ರಿಂದ ರೂ.92,633 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಬ್ಲ್ಯಾಕ್ ರೆಡ್, ಬ್ಲ್ಯಾಕ್ ಬ್ಲೂ, ಬ್ಲ್ಯಾಕ್ ಗ್ರೀನ್, ಗ್ರೇ ಬ್ಲ್ಯಾಕ್, ಬ್ಲ್ಯೂ ಸಿಲ್ವರ್ ಹಾಗೂ ರೆಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 109.7 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 83 ಕಿಲೋಮೀಟರ್‌ಗೂ ಮೈಲೇಜ್ ಕೊಡುತ್ತದೆ. ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus):
ಇದು ಪ್ರಖ್ಯಾತ ಮೋಟಾರ್‌ಸೈಕಲ್ ಆಗಿದೆ. ಕನಿಷ್ಠ ರೂ. 88,723 ರಿಂದ ಗರಿಷ್ಠ ರೂ.94,874 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಉತ್ತಮವಾದ ವಿನ್ಯಾಸವನ್ನು ಹೊಂದಿದೆ. ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್, ಬ್ಲ್ಯಾಕ್ ರೆಡ್ ಪರ್ಪಲ್ ಮತ್ತು ಫೋರ್ಸ್ ಸಿಲ್ವರ್ ಸೇರಿದಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ. 83 ಕಿಲೋಮೀಟರ್‌ಗೂ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.


Click it and Unblock the Notifications








