ಬಸ್‌ನಲ್ಲಿ ಆಫೀಸ್‌ಗೆ ಹೋಗಲು ಕಷ್ಟವೇ.. ಆರಾಮಾಗಿ ಪ್ರಯಾಣಿಸಲು ಈ 5 ಸ್ಕೂಟರ್‌ಗಳು ತುಂಬಾ ಉತ್ತಮ, ಬೆಲೆ ಎಷ್ಟು?
ಬೆಂಗಳೂರಿನಂತಹ ಮಹಾನಗರಗಳಲ್ಲಿ ಆಫೀಸ್‌ಗೆ ಹೋಗುವುದು ತುಂಬಾ ಪ್ರಯಾಸದ ಕೆಲಸ.. ಅದರಲ್ಲೂ ಹಲವರು ಬಸ್‌ನಲ್ಲಿ ಪ್ರಯಾಣಿಸುವುದಕ್ಕೆ ಸಾಕಷ್ಟು ಕಷ್ಟಪಡುತ್ತಾರೆ. ನೀವು ದಿನನಿತ್ಯ ಆಫೀಸ್‌ಗೆ ತೆರಳುವುದಕ್ಕೆ ಅತ್ಯುತ್ತಮವಾದ ಪರ್ಯಾಯ ವಿಧಾನ ಯಾವುದು ಎಂದು ಆಲೋಚಿಸುತ್ತಿದ್ದೀರಾ.. ಹಾಗಾದರೆ, ಸ್ಕೂಟರ್‌ಗಳು ಹೆಚ್ಚು ಸೂಕ್ತವಾಗಬಲ್ಲವು. ಇವುಗಳನ್ನು ಪುರುಷ ಹಾಗೂ ಮಹಿಳೆಯರಿಬ್ಬರು ಸುಲಭವಾಗಿ ಬಳಕೆ ಮಾಡಬಹುದು. ನಾವಿಲ್ಲಿ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಸಿಗುವ 5 ಜನಪ್ರಿಯ ಸ್ಕೂಟರ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.
ಹೋಂಡಾ ಕ್ಯೂಸಿ1 (Honda QC1)..
ಇದು ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಆಫೀಸ್‌ಗೆ ಹೋಗಲು ಉಪಯೋಗ ಮಾಡಬಹುದಾಗಿದೆ. ಅದಕ್ಕೆ ತಕ್ಕಂತೆ ರೂ.90,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 80 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮವಾದ ವಿನ್ಯಾಸವನ್ನು ಪಡೆದಿದೆ. ಪರ್ಲ್ ಮಿಸ್ಟಿ ವೈಟ್, ಪರ್ಲ್ ಶಾಲೋ ಬ್ಲೂ, ಮ್ಯಾಟ್ ಫಾಗ್ಗಿ ಸಿಲ್ವರ್ ಮೆಟಾಲಿಕ್ ಹಾಗೂ ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಎಲ್‌ಸಿಡಿ ಡಿಸ್‌ಪ್ಲೇ ಹಾಗೂ ಅನಲಾಗ್ ಕೀ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಸುಜುಕಿ ಆಕ್ಸೆಸ್ 125 (Suzuki Access 125)..
ಇದನ್ನು ಕೂಡ ಪ್ರತಿನಿತ್ಯ ಆಫೀಸ್‌ಗೆ ತೆರಳಲು ಬಳಸಬಹುದು. ಈ ಸ್ಕೂಟರ್ ರೂ.87,000 ರಿಂದ ರೂ.98,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬಲಿಷ್ಠವಾದ 125 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. ಸರಿ ಸುಮಾರು 47 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಈ ಸ್ಕೂಟರ್ ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಪರ್ಲ್ ಗ್ರೇಸ್ ವೈಟ್ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಹೀರೋ ಜೂಮ್ 110 (Hero Xoom 110)..
ಇದು ಜನಪ್ರಿಯ ಸ್ಕೂಟರ್ ಆಗಿದ್ದು, ಆಫೀಸ್‌ಗೆ ತೆರಳಲು ಉಪಯೋಗ ಮಾಡಬಹುದು. ಈ ಸ್ಕೂಟರ್ ರೂ.76,500 ರಿಂದ ರೂ.88,500 ವರೆಗೆ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 110.9 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 53 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಹೋಂಡಾ ಆಕ್ಟಿವಾ ಇ (Honda Activa e)..
ಈ ಎಲೆಕ್ಟ್ರಿಕ್ ಸ್ಕೂಟರ್, ಆಫೀಸ್‌ಗೆ ಹೋಗುವಾಗ ಬಳಕೆ ಮಾಡಲು ಹೆಚ್ಚು ಸೂಕ್ತವಾಗಿದೆ. ಅದಕ್ಕೆ ಅನುಗುಣವಾಗಿ ರೂ.1.17 ಲಕ್ಷದಿಂದ ರೂ.1.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 102 ಕಿಲೋಮೀಟರ್ ಓಡುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಿವಿಎಸ್ ಜುಪಿಟರ್ 110 (TVS Jupiter 110)..
ಇದೊಂದು ಪ್ರಖ್ಯಾತ ಸ್ಕೂಟರ್ ಆಗಿದೆ. ಆಫೀಸ್‌ಗೆ ಕೆಲಸಕ್ಕೆ ಹೋಗಲು ಉಪಯೋಗಿಸಬಹುದು. ಈ ಸ್ಕೂಟರ್ ರೂ.81,000 ರಿಂದ ರೂ.93,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 113 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 53 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications