ಶ್ರಮಿಕರ ಬಂಡಿಗಳು.. 1 ಲೀ.ಗೆ 70 Km ಮೈಲೇಜ್.. ವರ್ಷಗಟ್ಟಲೇ ಈ ಬೈಕ್‌ಗಳನ್ನು ಬಳಸಬಹುದು, ಬೆಲೆಯೂ ಅಗ್ಗ!

ದೇಶದಲ್ಲಿ ದುಡಿಯುವ ವರ್ಗದ ಜನರ ಸಂಖ್ಯೆ ಹೆಚ್ಚಿದ್ದು, ಕೆಲಸಕ್ಕೆ ಹೋಗಲು ಬೈಕ್‌ಗಳು ಬೇಕೇ ಬೇಕು. ಆದರೆ, ಹಲವರಿಗೆ ಯಾವ ಮೋಟಾರ್‌ಸೈಕಲ್ ಹೆಚ್ಚು ಆಕರ್ಷಕವಾಗಿರುತ್ತದೆ.. ದೀರ್ಘಕಾಲ ಬಾಳಿಕೆ ಬರುತ್ತಿದೆಯೇ.. ಕೈಗೆಟುಳುವ ಬೆಲೆಯಲ್ಲಿ ಸಿಗುತ್ತಾ ಎಂಬ ನಾನಾ ಬಗೆಯ ಗೊಂದಲವಿರುತ್ತದೆ. ಅಂತಹ ಗ್ರಾಹಕರಿಗೆ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಬಜಾಜ್ ಪ್ಲಾಟಿನಾ 110, ಹೋಂಡಾ ಲಿವೋ ಹಾಗೂ ಹೀರೋ ಗ್ಲಾಮರ್ ಬೈಕ್‌ಗಳು ಹೆಚ್ಚು ಸೂಕ್ತವಾಗಲಿವೆ. ಬನ್ನಿ.. ಈ ಮೋಟಾರ್‌ಸೈಕಲ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರವನ್ನು ತಿಳಿಸಿಕೊಟ್ಟಿದ್ದೇವೆ.

ಮೊದಲಿಗೆ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus) ಬೈಕ್ ಬಗ್ಗೆ ಮಾತನಾಡೋಣ. ಇದು ರೂ.72,541 ರಿಂದ ರೂ.76,541 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 109 ಸಿಸಿ ಏರ್-ಕೋಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.08 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 8.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

Best Bikes For Working People 70 Km Mileage Rs 70 000 Starting Price Star City Platina to Glamou

ಈ ಬೈಕ್ 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಜೊತೆಗೆ 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ನೂತನ ಮೋಟಾರ್‌ಸೈಕಲ್‌, 115 ಕೆಜಿ ತೂಕವಿದ್ದು, 10-ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಬಜಾಜ್ ಪ್ಲಾಟಿನಾ 110 (Bajaj Platina 110) ಕುರಿತಂತೆ ಹೇಳುವುದಾದರೆ, ಈ ಮೋಟಾರ್‌ಸೈಕಲ್ ರೂ.71,609 (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 115.45 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.6 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 9.81 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

Best Bikes For Working People 70 Km Mileage Rs 70 000 Starting Price Star City Platina to Glamou

ನೂತನ ಬಜಾಜ್ ಪ್ಲಾಟಿನಾ ಬೈಕ್ 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಈ ಮೋಟಾರ್‌ಸೈಕಲ್ 123 ಕೆಜಿ ತೂಕವಿದ್ದು, 10.5 ಲೀ. ನ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೋಂಡಾ ಲಿವೋ (Honda Livo) ಮೋಟಾರ್‌ಸೈಕಲ್ ಕುರಿತಂತೆ ತಿಳಿಯುವುದಾದರೆ, ಇದು ರೂ.82,951 ರಿಂದ 86,951 (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 109.51 ಸಿಸಿ ಪೆಟ್ರೋಲ್ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 70 ಕೆಎಂಪಿಎಲ್‌ವರೆಗೆ ನೀಡುತ್ತದೆ. ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Best Bikes For Working People 70 Km Mileage Rs 70 000 Starting Price Star City Platina to Glamou

ಕಡೆಯದಾಗಿ ಹೀರೋ ಗ್ಲಾಮರ್ (Hero Glamour) ಬಗ್ಗೆ ಮಾತನಾಡುವುದಾದರೆ, ಈ ಬೈಕ್ ರೂ.84,548 ರಿಂದ ರೂ.88,548 (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 125 ಸಿಸಿ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 55 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಫುಲ್-ಡಿಜಿಟಲ್ ಕನ್ಸೋಲ್ & ಬ್ಲೂಟೂತ್ ಕನೆಕ್ಟಿವಿಟಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 25, 2025, 8:30 [IST]
English summary
Best bikes for working people 70 km mileage rs 70000 starting price star city platina to glamour
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+