ಬಡವರು ಖರೀದಿಸಬಹುದಾದ ಕ್ರೂಸರ್ ಬೈಕ್‌ಗಳು: ಬೆಸ್ಟ್ ಮೈಲೇಜ್... ಫುಲ್ ಡಿಮ್ಯಾಂಡ್!

ಈ ಹಿಂದೆ ಕ್ರೂಸರ್ ಬೈಕ್‌ಗಳೆಂದರೆ ದುಬಾರಿ ಬೆಲೆಯ ವಾಹನಗಳು ಎಂಬ ಮಾತಿತ್ತು. ಆದರೆ ಈಗ ಕ್ರೂಸರ್ ಬೈಕ್‌ಗಳಿಗಾಗಿ ಹೆಚ್ಚಿನ ವೆಚ್ಚವನ್ನು ಮಾಡಬೇಕಾಗಿಲ್ಲ. ಕೇವಲ ರೂ. 1.5 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಬೆಸ್ಟ್ ಕ್ರೂಸರ್ ಬೈಕ್‌ಗಳು ಖರೀದಿಗೆ ಲಭ್ಯವಿದೆ. ಜೊತೆಗೆ ಇವು ಉತ್ತಮ ಡಿಸೈನ್, ಪರ್ಫಾಮೆನ್ಸ್ ಮತ್ತು ಮೈಲೇಜ್ ಕೂಡ ನೀಡುತ್ತವೆ. ಕ್ಲಾಸಿಕ್ ಮೋಟಾರ್‌ಸೈಕಲ್ ಆಗಿರಲಿ ಅಥವಾ ಆಧುನಿಕ ಡಿಸೈನ್ ಆಗಿರಲಿ ನಿಮ್ಮ ಅಭಿರುಚಿಗೆ ತಕ್ಕಂತೆ ಕ್ರೂಸರ್ ಬೈಕ್‌ಗಳು ಅಗ್ಗದ ಬೆಲೆಗೆ ಸಿಗುತ್ತವೆ. ಅಂತಹ ಟಾಪ್‌ ಕ್ರೂಸರ್ ಮೋಟಾರ್‌ಸೈಕಲ್‌ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350: ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ ಅನ್ನು 'ಎ ಬ್ಯೂಟಿ ವಿತ್ ಪವರ್' ಎಂದು ಕರೆಯಲಾಗುತ್ತಿದೆ. ಈ ಬೈಕ್ ಬೆಲೆಯು ಭಾರತದ ಎಕ್ಸ್‌ ಶೋರೂಂ ದರದಂತೆ ರೂ 1.49 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ದೊಡ್ಡ 349 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್‌ ಜೊತೆಗೆ 20.2 ಬಿಹೆಚ್ ಪವರ್ ಹಾಗೂ 27 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

best-cruiser-bikes-under-2-lakh-hunter-avenger-ronin

ಮೈಲೇಜ್ ವಿಷಯಕ್ಕೆ ಬಂದರೆ ಪ್ರತಿ ಲೀಟರ್‌ಗೆ 36 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಅತ್ಯಂತ ಆಕರ್ಷಕ ಕ್ರೂಸರ್ ಬೈಕ್‌ಗಳಲ್ಲಿ, ಆಧುನಿಕ ಕಾರ್ಯಕ್ಷಮತೆಯೊಂದಿಗೆ ವಿಂಟೇಜ್ ಆಕರ್ಷಣೆಯನ್ನು ಹೊಂದಿರುವ ಈ ಬೈಕ್, ದೃಢವಾದ ಎಂಜಿನ್ ಪವರ್ ಮತ್ತು ಉತ್ತಮ ಬ್ರೇಕಿಂಗ್ ಸಾಮರ್ಥ್ಯವನ್ನು ಹೊಂದಿದೆ. ಪವರ್ ಮತ್ತು ಡಿಸೈನ್ ಎರಡನ್ನೂ ಬಯಸುವ ಸವಾರರಿಗೆ ಇದು ಅದ್ಭುತ ಕ್ರೂಸರ್ ಆಗಿದೆ.

ಕವಾಸಕಿ ಡಬ್ಲ್ಯು175: ಸೊಗಸಾದ ವಿನ್ಯಾಸವನ್ನು ಹೊಂದಿರುವ ಕವಾಸಕಿ ಉತ್ಸಾಹಿಗಳಿಗೆ ಉತ್ತಮ ಎಂಟ್ರಿ ಲೆವೆಲ್ ಆಯ್ಕೆಯಾಗಿರುವ ಕವಾಸಕಿ ಡಬ್ಲ್ಯು175 ಬೈಕ್ ಆರಂಭಿಕ ಬೆಲೆಯು 1.22 ಲಕ್ಷ ರೂ. (ಎಕ್ಸ್‌ ಶೋರೂಂ) ಇದೆ. ಇದರ 177 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ 12.8 ಬಿಹೆಚ್ ಪವರ್ ಹಾಗೂ 13.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

best-cruiser-bikes-under-2-lakh-hunter-avenger-ronin

ಮೈಲೇಜ್ ವಿಷಯಕ್ಕೆ ಬಂದರೆ ಕವಾಸಕಿ ಡಬ್ಲ್ಯು175 ಬೈಕ್, ಪ್ರತಿ ಲೀಟರ್‌ಗೆ 45 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಇದು ನಿಮಗೆ ಸ್ಪೋಕ್ಡ್ ರಿಮ್ ಮತ್ತು ಅಲಾಯ್ ವೀಲ್‌ಗಳ ಎರಡು ವೇರಿಯೆಂಟ್‌ಗಳನ್ನು ಹೊಂದಿದೆ. ಸಮತೋಲಿತ ಸಸ್ಪೆಂಷನ್ ಮತ್ತು ವಿಶ್ವಾಸಾರ್ಹ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ.

ಟಿವಿಎಸ್ ರೋನಿನ್: ಪರ್ಫಾಮೆನ್ಸ್ ಜೊತೆಗೆ ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಟಿವಿಎಸ್ ರೋನಿನ್ ಪವರ್‌ಫುಲ್ ಎಂಜಿನ್ ಮತ್ತು ಸುಧಾರಿತ ಸಸ್ಪೆಂಷನ್ ಸೆಟಪ್ ಹೊಂದಿದೆ. ಇದರ ಬೆಲೆಯು 1.35 ಲಕ್ಷದಿಂದ 1.72 ಲಕ್ಷ ರೂ. (ಎಕ್ಸ್‌ ಶೋರೂಂ) ಇದ್ದು, 225.9 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 20.1 ಬಿಹೆಚ್ ಪವರ್ ಹಾಗೂ 19.93 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಲೀಟರ್‌ಗೆ 42.95 ಕಿ.ಮೀ ಮೈಲೇಜ್ ನೀಡುತ್ತದೆ.

best-cruiser-bikes-under-2-lakh-hunter-avenger-ronin

ಬಜಾಜ್ ಅವೆಂಜರ್ 220: ರೆಟ್ರೊ ವಿನ್ಯಾಸದೊಂದಿಗೆ ಕ್ಲಾಸಿಕ್ ಕ್ರೂಸಿಂಗ್ ಅನುಭವವನ್ನು ನೀಡುವ ಆರಾಮದಾಯಕ ಸವಾರಿಗಾಗಿ ಬಜಾಜ್ ಅವೆಂಜರ್ 220 ಖರೀದಿಸಬಹುದು. ಇದರ ಬೆಲೆಯು 1.45 ಲಕ್ಷ ರೂ. (ಎಕ್ಸ್‌ ಶೋರೂಂ) ಇದೆ. 220 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 18.76 ಬಿಹೆಚ್ ಪವರ್ ಹಾಗೂ 17.55 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಲೀಟರ್‌ಗೆ 40 ಕಿ.ಮೀ. ಮೈಲೇಜ್ ನೀಡುತ್ತದೆ.

ಕ್ರೂಸರ್ ಮೋಟಾರ್ ಸೈಕಲ್‌ಗಳು ಭಾರತದಲ್ಲಿ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸುತ್ತಿದ್ದು, ಸುಗಮ ಸವಾರಿ ಮತ್ತು ಸ್ಟೈಲಿಶ್ ಆಕರ್ಷಣೆಯನ್ನು ನೀಡುತ್ತಿವೆ. ಲಭ್ಯವಿರುವ ವೈವಿಧ್ಯತೆಯ ಹೊರತಾಗಿಯೂ, ಹಲವಾರು ಪ್ರಸಿದ್ಧ ಬ್ರಾಂಡ್‌ಗಳು 1.5 ಲಕ್ಷ ರೂ.ಗಿಂತ ಕಡಿಮೆ ಬಜೆಟ್ ಸ್ನೇಹಿ ಕ್ರೂಸರ್ ಬೈಕ್‌ಗಳನ್ನು ನೀಡುತಿದ್ದು, ಮೇಲಿನ ಈ ಬೈಕ್‌ಗಳು ಮಧ್ಯಮ ಹಾಗೂ ಬಡ ವರ್ಗದವರಿಗೆ ಬೆಸ್ಟ್‌ ಆಯ್ಕೆಯಾಗಿವೆ.

Article Published On: Monday, January 13, 2025, 12:59 [IST]
English summary
Best cruiser bikes under rs 2 lakh hunter avenger ronin
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+