Best EV scooters: ಎಲೆಕ್ಟ್ರಿಕ್ ಆಕ್ಟೀವಾ ಸೇರಿದಂತೆ ಭಾರತದ ಅಗ್ಗದ ಬೆಸ್ಟ್ ಇವಿ ಸ್ಕೂಟರ್‌ಗಳು
ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯು ತ್ವರಿತವಾಗಿ ಬೆಳಯುತ್ತಿದೆ, ಬಜಾಜ್, ಟಿವಿಎಸ್ ಮತ್ತು ಓಲಾದಂತಹ ಕಂಪನಿಗಳು ಹೊಸ ಕೈಗೆಟುಕುವ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತಿರುವುದರಿಂದ ಇವಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೈ ಪರ್ಫಾಮೆನ್ಸ್ ಮತ್ತು ಉತ್ತಮ ಫೀಚರ್‌ಗಳನ್ನು ಬಜೆಟ್ ಬೆಲೆಯಲ್ಲಿ ನೀಡುತ್ತಿರುವುದರಿಂದ ಈ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನೀವು ಕೂಡ ಒಂದು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ನೋಡುತ್ತಿದ್ದರೆ ನಿಮಗಾಗಿ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ (Best EV scooters) ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಬಜಾಜ್ ಚೇತಕ್ 2903: ಬಜಾಜ್ ಚೇತಕ್ 2903 ಇವಿ ಸ್ಕೂಟರ್ 2.9 ಕಿಲೋವ್ಯಾಟ್ ಬ್ಯಾಟರಿ ಹೊಂದಿದ್ದು, ಇದನ್ನು 4 ಗಂಟೆಗಳಲ್ಲಿ ಶೇಕಡಾ 80% ವರೆಗೆ ಚಾರ್ಜ್ ಮಾಡಬಹುದು. ಹೊಸ ಬಜಾಜ್ ಚೇತಕ್ 2903 ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.98,498 ಗಳಾಗಿದೆ.

ಹೊಸ ಬಜಾಜ್ ಚೇತಕ್ 2903 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 123 ಕಿ.ಮೀ ಓಡಿಸಬಹುದು. ಗಂಟೆಗೆ 63 ಕಿ.ಮೀ ಗರಿಷ್ಠ ವೇಗವನ್ನು ಹೊಂದಿರುವ ಈ ಸ್ಕೂಟರ್, ಹಿಲ್ ಹೋಲ್ಡ್, ಎರಡು ರೈಡ್ ಮೋಡ್‌ಗಳು (ಸ್ಪೋರ್ಟ್ ಮತ್ತು ಇಕೋ), ಸೀಕ್ವೆನ್ಷಿಯಲ್ ಬ್ಲಿಂಕರ್ಸ್, ಸ್ಮಾರ್ಟ್ಫೋನ್ ಕನೆಕ್ಷನ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.
ಟಿವಿಎಸ್ ಐಕ್ಯೂಬ್: ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ದರದಂತೆ 89,999 ರೂ.ಗೆ ಖರೀದಿಗೆ ಲಭ್ಯವಿದೆ. 2.2 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ 75 ಕಿಲೋಮೀಟರ್ ಓಡಿಸಬಹುದು. 2 ಗಂಟೆ 45 ನಿಮಿಷಗಳಲ್ಲಿ ಶೇಕಡಾ 80% ವರೆಗೆ ಚಾರ್ಜ್ ಆಗುತ್ತದೆ.

ಓಲಾ ಎಸ್1 ಎಕ್ಸ್: ಓಲಾ ಎಸ್ 1 ಎಕ್ಸ್ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.64,999 ರಿಂದ ರೂ.97,499ಗಳಾಗಿದೆ. ಹಾಗೆಯೇ ಓಲಾ ರೋಡ್ ಸ್ಟರ್ ಎಕ್ಸ್ ಬೈಕ್ ಕೂಡ ಇದ್ದು ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.84,999ಗಳಾಗಿದೆ. ಈ ಮೋಟಾರ್ ಸೈಕಲ್ ಡೆಲಿವರಿಗಳು ಶೀಘ್ರದಲ್ಲೆ ಆರಂಭವಾಗಲಿದೆ.
ಈ ಬೈಕ್ ಒಂದೇ ಪೂರ್ಣ ಚಾರ್ಜ್‌ನಲ್ಲಿ, 140 ಕಿಲೋಮೀಟರ್ ಓಡಿಸಬಹುದು. 94,999 ರೂ.ಗಳಿಗೆ (ಎಕ್ಸ್ ಶೋರೂಂ), ನೀವು 3.5 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ ಓಲಾ ರೋಡ್ ಸ್ಟರ್ ಎಕ್ಸ್ ಟಾಪ್ ವೇರಿಯೆಂಟ್ ಕೂಡ ಖರೀದಿಸಬಹುದು. ಈ ಮಾದರಿಯು 196 ಕಿಲೋಮೀಟರ್ ಹೆಚ್ಚಿನ ಪ್ರಮಾಣೀಕೃತ ರೇಂಜ್ ನೀಡುತ್ತದೆ.

ಹೋಂಡಾ QC1: ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಪೂರ್ಣ ಚಾರ್ಜ್‌ನಲ್ಲಿ 80 ಕಿಲೋಮೀಟರ್ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದು 1.5 ಕಿಲೋವ್ಯಾಟ್ ಬ್ಯಾಟರಿ ಮತ್ತು 1.8 ಕಿಲೋವ್ಯಾಟ್ ಮೋಟರ್ ಹೊಂದಿದೆ. ಎಕ್ಸ್ ಶೋರೂಂ ಬೆಲೆಯು ರೂ.90,000ಗಳಾಗಿದೆ. ಗಂಟೆಗೆ 50 ಕಿ.ಮೀ ಗರಿಷ್ಠ ವೇಗವಿದ್ದು, ಶೇಕಡಾ 100 ವರೆಗೆ ಚಾರ್ಜ್ ಮಾಡಲು 6 ಗಂಟೆ 50 ನಿಮಿಷಗಳು ಬೇಕಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications