250 ಸಿಸಿ ಸಾಮರ್ಥ್ಯದ ಬೈಕ್‌ಗಳಿವು.. ಯುವಕರು ಲೈಕ್ ಮಾಡುವರು, ಬೆಲೆ ಇಷ್ಟೇನಾ.. ಮೈಲೇಜ್ ಏನು?

ಭಾರತದಲ್ಲಿನ ಬಹುತೇಕ ಯುವಕರು ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಇಷ್ಟಪಡುತ್ತಾರೆ. ಆದರೆ, ಹಲವರಿಗೆ ಯಾವ ಬೈಕ್‌ನ್ನು ಖರೀದಿ ಮಾಡಬೇಕು.. ಅದು ಕೈಗೆಟುಕುವ ದರದಲ್ಲಿ ಖರೀದಿಗೆ ದೊರೆಯುತ್ತದೆಯೇ.. ಗರಿಷ್ಠ ಮೈಲೇಜ್ ನೀಡುತ್ತದೆಯೇ.. ಜೊತೆಗೆ ಏನಿಲ್ಲ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂಬ ಹಲವು ಗೊಂದಲಗಳಿರುತ್ತವೆ. ನಾವಿಲ್ಲಿ 250 ಸಿಸಿ ಸಾಮರ್ಥ್ಯದ ಜನಪ್ರಿಯ ಕಂಪನಿಗಳ ಪ್ರಮುಖ ಮೋಟಾರ್‌ಸೈಕಲ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಮೊದಲಿಗೆ ಹೀರೋ ಕರಿಜ್ಮಾ ಎಕ್ಸ್ಎಂಆರ್ 210 (Hero Karizma XMR 210) ಬೈಕ್ ಬಗ್ಗೆ ಮಾತನಾಡೋಣ. ಇದೊಂದು ಪ್ರೀಮಿಯಂ ಮೋಟಾರ್‌ಸೈಕಲ್‌ ಆಗಿದೆ. ಅದರ ಹೊರತಾಗಿ ಮಧ್ಯಮ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಕೊಂಡುಕೊಳ್ಳಬಹುದು. ರೂ.1.81 ರಿಂದ ರೂ.2.02 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

Best Five 250 CC Bikes Hero Karizma XMR Keeway SR250 Bajaj Pulsar N250 TVS Ronin KTM 250 Duke

ಈ ಕರಿಜ್ಮಾ ಎಕ್ಸ್ಎಂಆರ್ 210 ಮೋಟಾರ್‌ಸೈಕಲ್‌ 210 ಸಿಸಿ ಪೆಟ್ರೋಲ್ ಎಂಜಿನ್‌ ಪಡೆದಿದ್ದು, 41.55 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್‌ (4.2-ಇಂಚು) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಬರೋಬ್ಬರಿ 163.5 ಕೆಜಿ ತೂಕವಿದ್ದು, 11 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಕೀವೇ ಎಸ್ಆರ್ 250 (Keeway SR 250) ಬೈಕ್ ಬಗ್ಗೆ ಹೇಳುವುದಾದರೆ, ಇದು ರೂ.1.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 223 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 16.2 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 14.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

Best Five 250 CC Bikes Hero Karizma XMR Keeway SR250 Bajaj Pulsar N250 TVS Ronin KTM 250 Duke

ನೂತನ ಕೀವೇ ಎಸ್ಆರ್ 250 ಮೋಟಾರ್‌ಸೈಕಲ್‌ 40 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಪುಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಬೈಕ್ ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಬಲ್ ಡಿಸ್ಕ್ ಬ್ರೇಕ್‌ ಆಯ್ಕೆಯನ್ನು ಹೊಂದಿದೆ.

ಬಜಾಜ್ ಪಲ್ಸರ್ ಎನ್250 (Bajaj Pulsar N250) ಬೈಕ್ ಕುರಿತಂತೆ ತಿಳಿಯುವುದಾದರೆ, ಇದು ಕೂಡ ಬಜೆಟ್ ಬೆಲೆಯಲ್ಲಿ ಸಿಗಲಿದ್ದು, ರೂ.1.53 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 249.07 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದ್ದು, 39 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

Best Five 250 CC Bikes Hero Karizma XMR Keeway SR250 Bajaj Pulsar N250 TVS Ronin KTM 250 Duke

ಟಿವಿಎಸ್ ರೋನಿನ್ (TVS Ronin) ಮೋಟಾರ್‌ಸೈಕಲ್‌ ಬಗ್ಗೆ ಮಾತನಾಡುವುದಾದರೆ, ಈ ಬೈಕ್ ರೂ.1.36 ಲಕ್ಷದಿಂದ ರೂ.1.73 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 225.9 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 42.95 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಜೊತೆಗೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕಡೆಯದಾಗಿ ಕೆಟಿಎಂ 250 ಡ್ಯೂಕ್ (KTM 250 Duke) ಬೈಕ್ ಕುರಿತಂತೆ ಹೇಳುವುದಾದರೆ, ಇದು ರೂ.2.30 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 249.07 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 30.08 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 5 ಇಂಚಿನ ಟಿಎಫ್‌ಟಿ ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

Take a Poll

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, May 11, 2025, 11:18 [IST]
English summary
Best five 250 cc bikes hero karizma xmr keeway sr250 bajaj pulsar n250 tvs ronin ktm 250 duke
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+