55 ಕಿ.ಮೀ ಮೈಲೇಜ್.. 86,000 ರೂಪಾಯಿ ಬಡವರ ಪ್ರೀಮಿಯಂ ಬೈಕ್‌ಯಿದು.. ಹತ್ತಾರು ಫೀಚರ್ಸ್!
ಬಜಾಜ್ ಪಲ್ಸರ್ 125 (Bajaj Pulsar 125) ಪ್ರಮುಖ ಮೋಟಾರ್‌ಸೈಕಲ್ ಎಂದೇ ಹೆಸರುವಾಸಿಯಾಗಿದೆ. ನೋಡಲು ತುಂಬಾ ಚೆನ್ನಾಗಿದ್ದು, ದಿನಬಳಕೆಗೂ ಹೆಚ್ಚು ಸೂಕ್ತವಾಗಿದೆ. ಹಳ್ಳಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಮನೆಗೆ ತರಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಇದೇ 'ಪಲ್ಸರ್ 125' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಲೆ & ರೂಪಾಂತರಗಳು (Price & Variants):
ನೂತನ ಬಜಾಜ್ ಪಲ್ಸರ್ 125 ಬೈಕ್ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಎಲ್ಲ ವರ್ಗದ ಗ್ರಾಹಕರು ಸಹ ಕೊಂಡುಕೊಳ್ಳಬಹುದು. ಕನಿಷ್ಠ ರೂ.86,477 ಹಾಗೂ ಗರಿಷ್ಠ ರೂ.95,379 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ನಿಯಾನ್ ಸಿಂಗಲ್ ಸೀಟ್, ಕಾರ್ಬನ್ ಫೈಬರ್ ಸಿಂಗಲ್ ಸೀಟ್ ಮತ್ತು ಕಾರ್ಬನ್ ಫೈಬರ್ ಸ್ಪ್ಲಿಟ್ ಸೀಟ್ ಎಂಬ ಮೂರು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ವಿನ್ಯಾಸ & ಬಣ್ಣಗಳು (Design & Colors):
ಈ ಮೋಟಾರ್‌ಸೈಕಲ್ ಸ್ಪೋರ್ಟಿ ವಿನ್ಯಾಸವನ್ನು ಪಡೆದಿದ್ದು, ಎಲ್ಲರ ಕಣ್ಣು ಕುಕ್ಕುವಂತಿದೆ. ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು, ಇಂಡಿಕೇಟರ್‌ಗಳು ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಒಳಗೊಂಡಿದೆ. ಬ್ಲ್ಯಾಕ್-ಗ್ರೀನ್, ಬ್ಲ್ಯಾಕ್-ಬ್ಲೂ, ಬ್ಲ್ಯಾಕ್-ಸಿಲ್ವರ್, ಬ್ಲ್ಯಾಕ್-ರೆಡ್, ರೆಡ್ ಕಾರ್ಬನ್ ಫೈಬರ್ ಹಾಗೂ ಬ್ಲೂ ಕಾರ್ಬನ್ ಫೈಬರ್ ಎಂಬ ಬಣ್ಣಗಳ ಆಯ್ಕೆಯನ್ನು ಪಡೆದಿದೆ.
ಸುತ್ತಳತೆ (Dimensions):
ಇದು ವಿಶಾಲ ಗಾತ್ರದಲ್ಲಿದೆ. 2042 ಎಂಎಂ ಉದ್ದ, 755 ಎಂಎಂ ಅಗಲ ಹಾಗೂ 1060 ಎತ್ತರವಿದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1320 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 140 ಕೆಜಿ ತೂಕವಿದೆ. ಸೀಟ್ ಎತ್ತರ 790 ಎಂಎಂ ಇದೆ.

ಕಾರ್ಯಕ್ಷಮತೆ (Performance):
ಹೊಸ ಬಜಾಜ್ ಪಲ್ಸರ್ 125 ಬೈಕ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 124.4 ಸಿಸಿ 4-ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 8500 ಆರ್‌ಪಿಎಂನಲ್ಲಿ 11.8 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6500 ಆರ್‌ಪಿಎಂನಲ್ಲಿ 10.8 ಎನ್ಎಂ (ನ್ಯೂಟನ್) ಮೀಟರ್ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.
ಈ ಮೋಟಾರ್‌ಸೈಕಲ್ 55 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 11.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ. 105 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 7.5 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ವೈಶಿಷ್ಟ್ಯಗಳು (Features):
ನೂತನ ಪಲ್ಸರ್ 125 ಬೈಕ್ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಫುಲ್ ಡಿಜಿಟಲ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನ್ನು ಪಡಿದಿದೆ. 17-ಇಂಚಿರುವ ಅಲಾಯ್ ವೀಲ್‌ಗಳನ್ನು ಹೊಂದಿದೆ. ಮುಂದೆ 80/100 ಮತ್ತು ಹಿಂದೆ 100/90 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಡಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಇದು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಟ್ವಿನ್ ಗ್ಯಾಸ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನುಒಳಗೊಂಡಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಒಟ್ಟಾರೆಯಾಗಿ ಬಜಾಜ್ ಪಲ್ಸರ್ 125 ಮೋಟಾರ್‌ಸೈಕಲ್‌ಗೆ ಹೋಂಡಾ ಶೈನ್ 125, ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್, ಟಿವಿಎಸ್ ರೈಡರ್ 125, ಟಿವಿಎಸ್ ಅಪಾಚೆ ಆರ್‌ಟಿಆರ್ ಮತ್ತು ಹೋಂಡಾ ಎಸ್‌ಪಿ 125ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಆದರೂ ಈ ಬೈಕ್ ಹೆಚ್ಚು ಆಕರ್ಷಕವಾಗಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ.


Click it and Unblock the Notifications








