Chetak: ಬಜಾಜ್ ಚೇತಕ್ ಮೇಲೆ ರೂ. 12,000 ಆಫರ್: ಕೇವಲ ಬೆಂಗಳೂರಿಗರಿಗೆ ಮಾತ್ರ
ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಕಂಪನಿಯಾದ ಬಜಾಜ್ ಆಟೋ ಲಿಮಿಟೆಡ್ ಇಂದು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 'ಚೇತಕ್ ಎಲೆಕ್ಟ್ರಿಕ್ ಸ್ಕೂಟರ್' (Chetak Electric Scooter) ಮೇಲೆ ವಿಶೇಷ ಆಫರ್ ಘೋಷಿಸಿದೆ. ಅದರಲ್ಲೂ ಬೆಂಗಳೂರಿನ ಗ್ರಾಹಕರಿಗೆ ವಿಶೇಷ 'ಫುಲ್ಲಿ ಲೈಫ್ ಪ್ರೂಫ್' ('Fully Lifeproof') ಕೊಡುಗೆಯನ್ನು ಘೋಷಿಸಿದೆ. ಈ ಆಫರ್ ಮೂಲಕ ಘನ, ವಿಶ್ವಾಸಾರ್ಹ ಮತ್ತು ವೈಶಿಷ್ಟ್ಯ - ಭರಿತ ಚೇತಕ್ ಇವಿ ಸ್ಕೂಟರ್ ಅನ್ನು ನಗರದಲ್ಲಿ ದೈನಂದಿನ ಪ್ರಯಾಣಿಕರು ಮತ್ತು ಕುಟುಂಬ ಸವಾರರು ಇನ್ನಷ್ಟು ಸುಲಭವಾಗಿ ಖರೀದಿಸಬಹುದಾಗಿದೆ.
ಈ ಕೊಡುಗೆ ಡಿಸೆಂಬರ್ 31 ರವರೆಗೆ ಮಾನ್ಯವಾಗಿರುತ್ತದೆ ಮತ್ತು ಬೆಂಗಳೂರಿನಾದ್ಯಂತ ಎಲ್ಲಾ ಅಧಿಕೃತ ಬಜಾಜ್ ಆಟೋ ಮತ್ತು ಚೇತಕ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. ಚೇತಕ್ ಶ್ರೇಣಿಯಿಂದ ಯಾವುದೇ ಮಾದರಿಯನ್ನು ಖರೀದಿಸುವ ಗ್ರಾಹಕರು ರೂ. 12,000 ವರೆಗಿನ ಪ್ರಯೋಜನಗಳನ್ನು ಪಡೆಯಬಹದು. ಈ ಆಫರ್ ಅಡಿಯಲ್ಲಿ ಬರುವ ಪ್ರಮುಖ ಅಂಶಗಳು ಇಲ್ಲಿವೆ.

ಉಚಿತ ವಿಸ್ತೃತ ವಾರೆಂಟಿ (5 ವರ್ಷಗಳವರೆಗೆ), ಉಚಿತ 24×7 ರಸ್ತೆಬದಿಯ ಸಹಾಯ, ರೈಡ್ ಮೋಡ್‌ಗಳೊಂದಿಗೆ ಉಚಿತ TecPac, ಸಂಯೋಜಿತ ಮ್ಯಾಪ್‌ಗಳೊಂದಿಗೆ ಸಂಚರಣೆ, ಕಳ್ಳತನ/ಅಪಘಾತ ಎಚ್ಚರಿಕೆಗಳು, ಡಿಜಿಟಲ್ ಡಾಕ್ಯುಮೆಂಟ್ ಸಂಗ್ರಹಣೆ ಮತ್ತು ಇನ್ನೂ ಹೆಚ್ಚಿನವುಗಳನ್ನು ಇದರಲ್ಲಿ ನೀಡಲಾಗಿದೆ. ಕಠಿಣ ನಿರ್ಮಾಣ, ಸ್ಮಾರ್ಟ್ ವಿನ್ಯಾಸದೊಂದಿಗೆ ಭಾರತಕ್ಕಾಗಿ ಈ ಸ್ಕೂಟರ್ ನಿರ್ಮಿಸಲಾಗಿದೆ ಎಂದು ಬಜಾಜ್ ತಿಳಿಸಿದೆ.
ಚೇತಕ್ ವಿಶೇಷತೆಗಳು: ಎಲೆಕ್ಟ್ರಿಕ್ ಚೇತಕ್ ಒಮ್ಮೆ ಚಾರ್ಜ್ ಮಾಡಿದರೆ 153 ಕಿ.ಮೀ ಓಡಬಲ್ಲದು, 35 ಲೀಟರ್ ಬೂಟ್ ಸ್ಪೇಸ್ ಮತ್ತು ಕೇವಲ 3 ಗಂಟೆಗಳಲ್ಲಿ ಶೇ80 ರಷ್ಟು ಚಾರ್ಜಿಂಗ್ ಸೇರಿದಂತೆ ಉದ್ಯಮ - ಪ್ರಮುಖ ವಿಶೇಷಣಗಳನ್ನು ಒಳಗೊಂಡಿದೆ. ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ. 1,02,400 (ಎಕ್ಸ್ - ಶೋರೂಂ) ನಿಂದ ಪ್ರಾರಂಭವಾಗುತ್ತದೆ.

ಬ್ರೂಕ್ಲಿನ್ ಬ್ಲ್ಯಾಕ್, ಅಜುರೆ ಬ್ಲೂ, ಸೈಬರ್ ವೈಟ್, ಲೈಮ್ ಯೆಲ್ಲೋ ಹಾಗೂ ರೇಸಿಂಗ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 168 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,355 ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 123 ಕೆಜಿ ತೂಕವಿದೆ. ನೂತನ 'ಚೇತಕ್ 3001' ಇ-ಸ್ಕೂಟರ್ 3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ.
ಎಲೆಕ್ಟ್ರಿಕ್ ಚೇತಕ್ 63 ಕಿ.ಮೀ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 3.4 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಟಿಎಫ್‌ಟಿ ಡಿಸ್‌ಪ್ಲೇ ಹಾಗೂ ಮೊಬೈಲ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಚೇತಕ್ ಶ್ರೇಣಿಯನ್ನು ನಿಜವಾದ ಭಾರತೀಯ ಪರಿಸ್ಥಿತಿಗಳು, ದೀರ್ಘಕಾಲೀನ ವಿಶ್ವಾಸಾರ್ಹತೆ ಮತ್ತು ದೈನಂದಿನ ಮನಸ್ಸಿನ ಶಾಂತಿಗಾಗಿ ವಿನ್ಯಾಸಗೊಳಿಸಲಾಗಿದೆ. ಸಾಲಿಡ್ ಸ್ಟೀಲ್ ಮೆಟಲ್ ಬಾಡಿಯೊಂದಿಗೆ ಅದರ ವರ್ಗದ ಏಕೈಕ ಮೆಟಲ್-ಬಾಡಿ ಎಲೆಕ್ಟ್ರಿಕ್ ವಾಹನವಾಗಿದೆ. ಐಪಿ67 ವಾಟರ್ ಪ್ರೂಫ್‌ನೊಂದಿಗೆ ಇದು ಬೆಂಗಳೂರಿನ ಮಾನ್ಸೂನ್ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾಗಿದೆ. ದೇಶಾದ್ಯಂತ 3800+ ಸೇವಾ ಕೇಂದ್ರಗಳ ಜಾಲದಿಂದ ಬೆಂಬಲಿತವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








