ಮಧ್ಯಮ ವರ್ಗದ ಜನರ ನೆಚ್ಚಿನ ಬೈಕ್‌ಗಳಿವು.. ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆ.. ಮೈಲೇಜ್ ಬಗ್ಗೆ ಕೇಳಿದ್ರೆ ಬೆಚ್ಚಿಬೀಳ್ತಿರಾ!

ಭಾರತದಲ್ಲಿ ಮಧ್ಯಮ ವರ್ಗದ ಜನರೇ ಗರಿಷ್ಠ ಸಂಖ್ಯೆಯಲ್ಲಿದ್ದು, ದಿನಬಳಕೆಗೆ ದ್ವಿಚಕ್ರ ವಾಹನಗಳು ತುಂಬಾ ಅತ್ಯಗತ್ಯ.. ಅದರಲ್ಲೂ ಬಹುತೇಕ ದುಡಿಯುವ ಜನರಿಗೆ ಬೈಕ್‌ವೊಂದು ಬೇಕೇ ಬೇಕು. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ ಟಿವಿಎಸ್ ರೇಡಿಯನ್, ಹೋಂಡಾ ಎಸ್‌ಪಿ 125, ಹೀರೋ ಸ್ಪ್ಲೆಂಡರ್ ಪ್ಲಸ್, ಟಿವಿಎಸ್ ಸ್ಪೋರ್ಟ್, ಹೀರೋ ಸೂಪರ್ ಸ್ಪ್ಲೆಂಡರ್, ಹೀರೋ ಎಚ್‌ಎಫ್ 100, ಹೀರೋ ಎಚ್‌ಎಫ್ ಡಿಲಕ್ಸ್, ಹೋಂಡಾ ಶೈನ್ 125 ಹಾಗೂ ಬಜಾಜ್ ಪ್ಲಾಟಿನಾ 100 ಮಾಡೆಲ್‌ಗಳು ಉತ್ತಮ ಆಯ್ಕೆಯಾಗಲಿವೆ. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಮೊದಲಿಗೆ ಟಿವಿಎಸ್ ರೇಡಿಯನ್ (TVS Radeon) ಬೈಕ್ ಬಗ್ಗೆ ಮಾತನಾಡೋಣ. ಇದು ರೂ.70,573 ರಿಂದ ರೂ.84,150 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 109.7 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ತನ್ನದಾಗಿಕೊಂಡಿದೆ. 73.68 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Common People Like This Bikes Under Rs 1 Lakh Radeon Shine Splendor To Platina

ಈ ಟಿವಿಎಸ್ ರೇಡಿಯನ್ ಮೋಟಾರ್‌ಸೈಕಲ್‌ ಡುಯಲ್ - ಪಾಡ್ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬ್ಲೂ, ಮೆಟಲ್ ಬ್ಲ್ಯಾಕ್, ರಾಯಲ್ ಪರ್ಪಲ್ & ಟೈಟಾನಿಯಂತಹ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ನೂತನ ರೇಡಿಯನ್ ಬೈಕ್ 113 ಕೆಜಿ ತೂಕವಿದ್ದು, ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೋಂಡಾ ಶೈನ್ 100 (Honda Shine 100) ಕೂಡ ಜನಪ್ರಿಯ ಬೈಕ್ ಆಗಿದೆ. ಇದು ರೂ.68,767 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 98.98 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಸರಿ ಸುಮಾರು 65 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಹುದು ಎನ್ನಲಾಗಿದೆ.

Common People Like This Bikes Under Rs 1 Lakh Radeon Shine Splendor To Platina

ನೂತನ ಹೋಂಡಾ ಶೈನ್ 100 ಮೋಟಾರ್‌ಸೈಕಲ್‌ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಬಲ್ಬ್ ಟರ್ನ್ ಇಂಡಿಕೇಟರ್‌ಗಳು, ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್-ಸ್ಟ್ಯಾಂಡ್ ಸೆನ್ಸರ್ ಮತ್ತು ಸಿಂಗಲ್-ಪೀಸ್ ಸೀಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಇದರೊಟ್ಟಿಗೆ ಹಲವು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಬೈಕ್ ಬಗ್ಗೆ ಹೇಳುವುದಾದರೆ, ಇದು ರೂ.77,226 ದಿಂದ ರೂ.79,836 (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 97.2-ಸಿಸಿ ಪೆಟ್ರೋಲ್ ಆಯ್ಕೆಯನ್ನು ಹೊಂದಿದೆ. ಬರೋಬ್ಬರಿ 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

Common People Like This Bikes Under Rs 1 Lakh Radeon Shine Splendor To Platina

ಟಿವಿಎಸ್ ಸ್ಪೋರ್ಟ್ (TVS Sport) ಸಹ ಪ್ರಖ್ಯಾತ ಮೋಟಾರ್‌ಸೈಕಲ್‌ ಆಗಿದೆ. ಇದು ರೂ.67,722 ರಿಂದ ರೂ.72,435 (ಎಕ್ಸ್-ಶೋರೂಂ) ದರದಲ್ಲಿ ಖರೀದಿಗೆ ದೊರೆಯುತ್ತದೆ. 109.7 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಈ ಟಿವಿಎಸ್ ಸ್ಪೋರ್ಟ್ ಬೈಕ್ ಅನಲಾಗ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್‌, ಬಲ್ಬ್ ಸ್ಟೈಲ್ ಹೆಡ್‌ಲೈಟ್‌, ಎಲ್ಇಡಿ ಡಿಆರ್‌ಎಲ್‌ ಹಾಗೂ ಸೆಲ್ಫ್ ಸ್ಟಾರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಈ ಬೈಕ್ 112 ಕೆಜಿ ತೂಕವಿದ್ದು, 10 ಲೀ. ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಇದರೊಟ್ಟಿಗೆ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

Common People Like This Bikes Under Rs 1 Lakh Radeon Shine Splendor To Platina

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC) ಕುರಿತಂತೆ ತಿಳಿಸುವುದಾದರೆ, ಈ ಮೋಟಾರ್‌ಸೈಕಲ್‌ ರೂ.84,050 ದಿಂದ ರೂ.88,050 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 10.84 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10.6 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 69 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಬೈಕ್ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 122 ಕೆಜಿ ತೂಕವಿರುವ ಈ ಮೋಟಾರ್‌ಸೈಕಲ್‌, ಮ್ಯಾಟ್ ಗ್ರೇ, ಬ್ಲ್ಯಾಕ್, & ಕ್ಯಾಂಡಿ ಬ್ಲೇಜಿಂಗ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

ಹೀರೋ ಎಚ್‌ಎಫ್ 100 (Hero HF 100) ಮೋಟಾರ್‌ಸೈಕಲ್‌ ಕುರಿತಂತೆ ಮಾತನಾಡುವುದಾದರೆ, ಇದು ರೂ.49,999 (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 97.2 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ರೆಡ್/ಬ್ಲ್ಯಾಕ್ & ಬ್ಲೂ/ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಕೂಡ ಪ್ರಯಾಣಿಕ ಸ್ನೇಹಿ ಬೈಕ್ ಆಗಿದ್ದು, ರೂ.62,468 ರಿಂದ ರೂ.70,348 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 97.2 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಐಡಲ್ ಸ್ಟಾಪ್/ ಸ್ಟಾರ್ಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಈ ಮೋಟಾರ್‌ಸೈಕಲ್‌ 110 ಕೆಜಿ ತೂಕವಿದ್ದು, ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಹೋಂಡಾ ಶೈನ್ 125 (Honda Shine 125) ಮೋಟಾರ್‌ಸೈಕಲ್‌ ಕುರಿತಂತೆ ಹೇಳುವುದಾದರೆ, ಇದು ರೂ.84,551 ದಿಂದ ರೂ.88,551 (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 123.94 ಸಿಸಿ ಪೆಟ್ರೋಲ್ ಎಂಜಿನ್‌ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಈ ಹೋಂಡಾ ಶೈನ್ 125 ಬೈಕ್ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೂತನ ಶೈನ್ 125 ಮೋಟಾರ್‌ಸೈಕಲ್‌ 123 ಕೆಜಿ ತೂಕವಿದ್ದು, 10.5 ಲೀ. ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಜೆನಿ ಗ್ರೇ ಮೆಟಾಲಿಕ್ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

ಕಡೆಯದಾಗಿ ಬಜಾಜ್ ಪ್ಲಾಟಿನಾ 100 (Bajaj Platina 100) ಬಗ್ಗೆ ಮಾತನಾಡುವುದಾದರೆ, ಈ ಬೈಕ್ ರೂ.69,369 (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 102 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದು 117 ಕೆಜಿ ತೂಕವಿದ್ದು, ಬ್ಲ್ಯಾಕ್-ರೆಡ್, ಬ್ಲ್ಯಾಕ್/ಸಿಲ್ವರ್ ಮತ್ತು ಬ್ಲ್ಯಾಕ್/ಗೋಲ್ಡ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, March 17, 2025, 17:10 [IST]
English summary
Middle class people favorite bikes under rs 1 lakh radeon shine splendor hf 100 to platina
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+