ಮೊನ್ನೆಯಷ್ಟೆ ಬಿಡುಗಡೆ... ಕೇವಲ 50 ಸಾವಿರ ಬೆಲೆ... ಒಂದು ಪೈಸೆ ಖರ್ಚಿಲ್ಲದೆ 120 ಕಿ.ಮೀ ಓಡಿಸಿ

ಹೊಸದಾಗಿ ಬಿಡುಗಡೆಯಾದ ಜೀಲಿಯೊ ಈವಾ ಲೋ - ಸ್ಪೀಡ್ ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಸ್ಕೂಟರ್ ನಗರ ಪ್ರಯಾಣಿಕರು, ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಣ್ಣ ಕೆಲಸಗಾರರಿಗೆ ಅನುಗುಣವಾಗಿ ಹಲವಾರು ಗಮನಾರ್ಹ ವೈಶಿಷ್ಟ್ಯಗಳು ಮತ್ತು ಸುಧಾರಣೆಗಳನ್ನು ಪಡೆದು ಬಿಡುಗಡೆಯಾಗಿದೆ. ಈ ಫೇಸ್‌ಲಿಫ್ಟೆಡ್ ಈವಾ ಮಾದರಿಯು ಸುಧಾರಿತ ಸವಾರಿ ಸೌಕರ್ಯ, ವರ್ಧಿತ ಸುರಕ್ಷತೆ ಮತ್ತು ಅನುಕೂಲಕರವಾದ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕೈಗೆಟುಕುವ ಬೆಲೆಯಲ್ಲಿ ದೈನಂದಿನ ನಗರ ಸವಾರಿಗೆ ಬೆಸ್ಟ್ ಆಯ್ಕೆಯಾಗಿದೆ. ಈ ಸ್ಕುಟರ್ ಕುರಿತ ಹಲವು ವಿಶೆಷತೆಗಳು ಇಲ್ಲಿವೆ.

ಬ್ಯಾಟರಿ ಮತ್ತು ಚಾರ್ಜಿಂಗ್: ಲಿಥಿಯಂ - ಐಯಾನ್ ಮತ್ತು ಜೆಲ್ ಬ್ಯಾಟರಿ ಆಯ್ಕೆಗಳೊಂದಿಗೆ ಈ ಸ್ಕೂಟರ್ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಲಿಥಿಯಂ - ಐಯಾನ್ ಮಾಡಲ್‌ಗಳು ಸುಮಾರು 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ. ಹಾಗೆಯೇ ಜೆಲ್ ಬ್ಯಾಟರಿ ವೇರಿಯೆಂಟ್‌ಗಳು 8 - 10 ಗಂಟೆಗಳನ್ನು ತೆಗೆದುಕೊಳ್ಳುತ್ತವೆ.

eeva-low-speed-facelift-ev-top-things

ವೇರಿಯೆಂಟ್‌ವಾರು ಬೆಲೆಗಳನ್ನು ನೋಡುವುದಾದರೆ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗಿನ 60V/30AH ವೇರಿಯೆಂಟ್ ರೂ. 64,000 ಬೆಲೆಯಿದ್ದು, 90 ರಿಂದ 100 ಕಿ.ಮೀ ರೇಂಜ್ ನೀಡುತ್ತದೆ. 74V/32AH ವೇರಿಯೆಂಟ್ ರೂ.69,000 ಬೆಲೆಯಿದ್ದು, 120 ಕಿ.ಮೀ ರೇಂಜ್ ನೀಡುತ್ತದೆ. ಜೆಲ್ ಬ್ಯಾಟರಿಯೊಂದಿಗೆ 60V/32AH ವೇರಿಯೆಂಟ್ ರೂ. 50,000 ಬೆಲೆಯಿದ್ದು, 80 ಕಿ.ಮೀ ರೇಂಜ್ ಹಾಗೂ 72V/42AH ರೂ. 54,000 ಬೆಲೆಯಿದ್ದು 100 ಕಿ.ಮೀ ರೇಂಜ್ ನೀಡುತ್ತದೆ.

ಪರ್ಫಾಮೆನ್ಸ್ ವಿಷಯಕ್ಕೆ ಬಂದರೆ ಇದು 25 ಕಿ.ಮೀ ಗರಿಷ್ಠ ವೇಗವನ್ನು ನೀಡುತ್ತದೆ. ಒಂದೇ ಚಾರ್ಜ್‌ನಲ್ಲಿ 120 ಕಿಲೋಮೀಟರ್‌ಗಳವರೆಗೆ ವಿಸ್ತೃತ ರೇಂಜ್ ನೀಡುತ್ತದೆ. ಇದು ಪ್ರತಿ ಪೂರ್ಣ ಚಾರ್ಜ್‌ಗೆ ಸುಮಾರು 1.5 ಯೂನಿಟ್ ವಿದ್ಯುತ್ ಅನ್ನು ಮಾತ್ರ ಬಳಸುವ ಹೆಚ್ಚಿನ ಕಾರ್ಯಕ್ಷಮತೆಯ 60/72V BLDC ಮೋಟಾರ್‌ನಿಂದ ಚಾಲಿತವಾಗಿದೆ.

ವಿನ್ಯಾಸ ಮತ್ತು ಸೌಕರ್ಯದ ವಿಷಯಕ್ಕೆ ಬಂದರೆ ಸ್ಕೂಟರ್ 150 ಮಿ.ಮೀ ವರ್ಧಿತ ಗ್ರೌಂಡ್ ಕ್ಲಿಯರೆನ್ಸ್, 85 ಕೆ.ಜಿ ತೂಕದೊಂದಿಗೆ ಹಗುರವಾದ ನಿರ್ಮಾಣ ಮತ್ತು 150 ಕೆ.ಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇದು ಇಬ್ಬರು ಪ್ರಯಾಣಿಕರು ಅಥವಾ ವಿತರಣಾ ಲೋಡ್‌ಗಳಿಗೆ ಸೂಕ್ತವಾಗಿದೆ. ಇದು ಉಬ್ಬುಗಳು ಮತ್ತು ಗುಂಡಿಗಳ ಮೇಲೆ ಸುಗಮ ಸವಾರಿಗಾಗಿ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.

ಸುರಕ್ಷತೆ ಮತ್ತು ಬ್ರೇಕಿಂಗ್ ವಿಷಯಕ್ಕೆ ಬಂದರೆ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಸ್ಥಿರತೆ ಮತ್ತು ವಿಶ್ವಾಸಾರ್ಹ ಬ್ರೇಕಿಂಗ್‌ಗಾಗಿ 90/90-12 ಟೈರ್‌ಗಳೊಂದಿಗೆ 12 - ಇಂಚಿನ ಚಕ್ರಗಳಲ್ಲಿ ಸವಾರಿ ಮಾಡುತ್ತದೆ. ಬ್ಲೂ, ಗ್ರೇ, ವೈಟ್ ಮತ್ತು ಬ್ಲಾಕ್ ಬಣ್ಣಗಳ ಆಯ್ಕೆಗಳೊಂದಿಗೆ ಹಿಂದಿನ ಬಣ್ಣದ ಪ್ಯಾಲೆಟ್ ಅನ್ನು ಉಳಿಸಿಕೊಂಡಿದೆ.

ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಕೂಟರ್ ಡಿಜಿಟಲ್ ಡಿಸ್ಪ್ಲೇ, ಡೇಟೈಮ್ ರನ್ನಿಂಗ್ ಲೈಟ್‌ಗಳು (DRL), ಕೀಲೆಸ್ ಡ್ರೈವ್, ಆಂಟಿ - ಥೆಫ್ಟ್ ಅಲಾರ್ಮ್, ಪಾರ್ಕಿಂಗ್ ಗೇರ್, USB ಚಾರ್ಜಿಂಗ್ ಪೋರ್ಟ್ ಸೇರಿದಂತೆ ಅನುಕೂಲತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಂಯೋಜಿತ ಪ್ರಯಾಣಿಕರ ಫುಟ್‌ರೆಸ್ಟ್ ಅನ್ನು ಒಳಗೊಂಡಿದೆ.

ಜೀಲಿಯೊ ಕಂಪನಿಯು ವಾಹನದ ಮೇಲೆ 2 ವರ್ಷಗಳ ವಾರೆಂಟಿ ಮತ್ತು ಬ್ಯಾಟರಿಗಳ ಮೇಲೆ 1 ವರ್ಷದ ವಾರೆಂಟಿಯನ್ನು ನೀಡುತ್ತಿದೆ. ಒಟ್ಟಾರೆ ಈ ಸ್ಕೂಟರ್ ಕಂಪನಿಯ ಕೈಗೆಟುಕುವ, ನಗರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಸ್ಮಾರ್ಟ್ ಮತ್ತು ಪ್ರಾಯೋಗಿಕವಾಗಿದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Saturday, July 12, 2025, 18:20 [IST]
English summary
Eeva low speed facelift ev top things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+