ಲಕ್ಷುರಿ ಡಿಸೈನ್.. ನೂತನ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲ್ಯಾಕ್ ಎಡಿಷನ್ ಅನಾವರಣ, ಬೆಲೆಯೂ ಅಗ್ಗವೇ?

ಇಟಲಿಯ ಮಿಲನ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ದ್ವಿಚಕ್ರ ವಾಹನ ಪ್ರದರ್ಶನ EICMA - 2025ನ್ನು ಆಯೋಜಿಸಲಾಗಿದೆ. ಇಲ್ಲಿ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲ್ಯಾಕ್ ಎಡಿಷನ್ (Royal Enfield Himalayan 450 Mana Black Edition) ಬೈಕ್‌ನ್ನು ಅನಾವರಣಗೊಳಿಸಲಾಗಿದೆ. ಈ ಮೋಟಾರ್‌ಸೈಕಲ್‌, ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬನ್ನಿ, ಈ ಬೈಕ್‌ನ ನಿರೀಕ್ಷಿತ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ನೂತನ 'ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲ್ಯಾಕ್ ಎಡಿಷನ್' ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ರೂ.3.5 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ದೇಶೀಯವಾಗಿ ಈ ಮೋಟಾರ್‌ಸೈಕಲ್‌, ನವೆಂಬರ್ 21 ರಿಂದ 23ರವರೆಗೆ ಏರ್ಪಡಿಸಿರುವ 'ಮೋಟೋವರ್ಸ್ 2025'ರಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

EICMA - 2025 New Royal Enfield Himalayan 450 Mana Black Edition Unveiled Details

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್ ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಪಡೆದಿದೆ. ಬಾಡಿ ಪ್ಯಾನೆಲ್‌ಗಳು 'ಬ್ಲ್ಯಾಕ್' ಕಲರ್‌ನಿಂದ ಆವೃತ್ತವಾಗಿವೆ. ಫ್ಯುಯೆಲ್ ಟ್ಯಾಂಕ್ ಮೇಲೆ 'ಗ್ರೇ ಕಲರ್ ಗ್ರಾಫಿಕ್ಸ್' ಇದೆ. ಜೊತೆಗೆ ಬ್ಲ್ಯಾಕ್ ರ‍್ಯಾಲಿ ಡುಯಲ್ ಸೀಟ್, ಬ್ಲ್ಯಾಕ್ ರ‍್ಯಾಲಿ ಹ್ಯಾಂಡ್‌ಗಾರ್ಡ್‌ಗಳು, ಮನಾ ಬ್ಲ್ಯಾಕ್ ಲಿವರಿ, ರ‍್ಯಾಲಿ ಮಡ್‌ಗಾರ್ಡ್ ಹಾಗೂ ವೈರ್-ಸ್ಪೋಕ್ಡ್ ಟ್ಯೂಬ್‌ಲೆಸ್ ವೀಲ್‌ಗಳನ್ನು ಹೊಂದಿದೆ.

ಈ ಬೈಕ್ ಸಾಕಷ್ಟು ವಿಶಾಲವಾಗಿದೆ. 2,285 ಮಿ.ಮೀ ಉದ್ದ, 900 ಮಿ.ಮೀ ಅಗಲ ಮತ್ತು 1,316 ಮಿ.ಮೀ ಎತ್ತರವಿದೆ. 230 ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,510 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 195 ಕೆಜಿ ತೂಕವಿದೆ.

ಹೊಸ 'ಹಿಮಾಲಯನ್ 450' ಪವರ್‌ಟ್ರೇನ್‌ನ್ನು ಒಳಗೊಂಡಿದೆ. 452 ಸಿಸಿ, ಲಿಕ್ವಿಡ್-ಕೋಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 40 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 40 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಇದು 4 ಇಂಚಿನ ರೌಂಡ್ ಟಿಎಫ್‌ಟಿ ಡಿಸ್‌ಪ್ಲೇ, ಫೋನ್ ಕನೆಕ್ಟಿವಿಟಿ, ಫುಲ್ ಮ್ಯಾಪ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ರೈಡ್-ಬೈ-ವೈರ್ ಥ್ರೊಟಲ್‌, ಯುಎಸ್‌‍ಬಿ ಟೈಪ್ ಸಿ ಚಾರ್ಜಿಂಗ್ ಪಾಯಿಂಟ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸೀಟ್ ಎತ್ತರವು 860 ಮಿ.ಮೀ ಇದೆ. 17 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ.

ಈ ಮೋಟಾರ್‌ಸೈಕಲ್‌ ಸವಾರರ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) 43 ಮಿ.ಮೀ ಅಪ್‌ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಲಿಂಕೇಜ್ ಟೈಪ್ ಮೊನೊ-ಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಅತ್ಯುತ್ತಮವಾದ ಟೈರ್​​ಗಳನ್ನು ಪಡೆದಿದೆ.

ಸ್ಟ್ಯಾಂಡರ್ಡ್ 'ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450' ಬೈಕ್ ವಿಶೇಷತೆಗಳೇನು:

ನೂತನ 'ಹಿಮಾಲಯನ್ 450' ಮೋಟಾರ್‌ಸೈಕಲ್‌ ರೂ.3.05 ಲಕ್ಷದಿಂದ ರೂ.3.19 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 452 ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 30 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಹ್ಯಾನ್ಲೆ ಬ್ಲ್ಯಾಕ್, ಸ್ಲೇಟ್ ಹಿಮಾಲಯನ್ ಸಾಲ್ಟ್, ಕಾಜಾ ಬ್ರೌನ್ ಹಾಗೂ ಕ್ಯಾಮೆಟ್ ವೈಟ್ ಬಣ್ಣಗಳೊಂದಿಗೂ ದೊರೆಯುತ್ತದೆ. ಫುಲ್ ಕಲರ್ ಟಿಎಫ್‌ಟಿ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಡುಯಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

More from DriveSpark

Article Published On: Tuesday, November 4, 2025, 23:13 [IST]
English summary
Eicma 2025 new royal enfield himalayan 450 mana black edition unveiled details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+