EICMA 2025: ನಾಳೆಯಿಂದ ಶುರು.. ಹೀರೋದ ಮೊದಲ ಇ-ಬೈಕ್ ಅನಾವರಣ, ಒಂದೇ ಸೂರಿನಡಿ ಹತ್ತಾರು ಟೂ-ವೀಲರ್‌ಗಳು!

ನಾಳೆಯಿಂದ (ನವೆಂಬರ್ 4) ಅಂತರರಾಷ್ಟ್ರೀಯ ಮಟ್ಟದ ದ್ವಿಚಕ್ರ ವಾಹನ ಪ್ರದರ್ಶನ EICMA - 2025 ಆರಂಭವಾಗಲಿದ್ದು, ನವೆಂಬರ್ 9 ರವರೆಗೆ ನಡೆಯಲಿದೆ. ಇಟಲಿಯ ಮಿಲನ್‌ನಲ್ಲಿ ಆಯೋಜನೆಗೊಂಡಿದ್ದು, ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ವಿವಿಧ ಬ್ರ್ಯಾಂಡ್‌ಗಳು, ಜಾಗತಿಕ ಮಟ್ಟದಲ್ಲಿ ಹಲವು ಬೈಕ್ ಹಾಗೂ ಸ್ಕೂಟರ್‌ಗಳನ್ನು ಪರಿಚಯಿಸಲಿವೆ. ವಿಶೇಷವಾಗಿ ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕಗಳು ಸಹ ಈ ವಾಹನ ಪ್ರದರ್ಶನದ ಭಾಗವಾಗಿವೆ.

ಹೀರೋ ವಿಡಾ ವಿಎಕ್ಸ್‌ಜಡ್ (Hero Vida VXZ):

ಈ ಅಂತರರಾಷ್ಟ್ರೀಯ ದ್ವಿಚಕ್ರ ವಾಹನ ಪ್ರದರ್ಶನದಲ್ಲಿ ಬಹುನಿರೀಕ್ಷಿತ ಹೀರೋದ ಮೊಟ್ಟ ಮೊದಲ ಎಲೆಕ್ಟ್ರಿಕ್ ಬೈಕ್‌ 'ವಿಡಾ ವಿಎಕ್ಸ್‌ಜಡ್'ನ್ನು ಅನಾವರಣಗೊಳಿಸಲಾಗುತ್ತದೆ. ಈಗಾಗಲೇ ಟೀಸರ್‌ನ್ನು ಬಿಡುಗಡೆಗೊಳಿಸಲಾಗಿದೆ. ಇದು ಅತ್ಯುತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್, ಸಿಗ್ನೇಚರ್ ಎಲ್ಇಡಿ ಡಿಆರ್‌ಎಲ್‌ಗಳು, ಸ್ಟೆಪ್ಡ್ ಸೀಟ್ ಹಾಗೂ 5-ಸ್ಪೋಕ್ ಅಲಾಯ್ ವೀಲ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.

EICMA 2025 Starts Tomorrow Hero Vida VXZ Electric Bike And Other Two Wheeler Unveil Details

ನೂತನ 'ಹೀರೋ ವಿಡಾ ವಿಎಕ್ಸ್‌ಜಡ್' ಇ-ಮೋಟಾರ್‌ಸೈಕಲ್‌, ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ ರೇಂಜ್ (ಮೈಲೇಜ್) ನೀಡುವ ಸಾಧ್ಯತೆಯಿದೆ. ಮಿಡ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಆಯ್ಕೆಯನ್ನು ಹೊಂದಿರಲಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿರಲಿದೆ. ಜೊತೆಗೆ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 750 (Royal Enfield Himalayan 750):

EICMA - 2025ರಲ್ಲಿ ಹೊಚ್ಚ ಹೊಸ 'ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 750' ಬೈಕ್‌ ಕೂಡ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಇದು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. 650 ಸಿಸಿ ಪ್ಯಾರಲಲ್ ಟ್ವಿನ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. 50 ಬಿಎಚ್‌ಪಿಗೂ ಅಧಿಕ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸಬಹುದು ಎನ್ನಲಾಗಿದೆ.

ಈ ಮೋಟಾರ್‌ಸೈಕಲ್‌ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ದೊಡ್ಡ ಗಾತ್ರದ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ 2-ಪೀಸ್ ಸೀಟ್‌ನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಸವಾರರ ರಕ್ಷಣೆ ಮುಂಭಾಗ (ಫ್ರಂಟ್) ಅಪ್‌ಸೈಡ್-ಡೌನ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್‌ನ್ನು ಪಡೆದುಕೊಂಡಿರಲಿದೆ. ಡಿಸ್ಕ್‌ ಬ್ರೇಕ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಟಿವಿಎಸ್ ಎಲೆಕ್ಟ್ರಿಕ್ ಬೈಕ್ (TVS Electric Bike)

ಇದೇ ಅಂತರರಾಷ್ಟ್ರೀಯ ದ್ವಿಚಕ್ರ ವಾಹನ ಪ್ರದರ್ಶನದಲ್ಲಿ ನೂತನ 'ಟಿವಿಎಸ್ ಎಲೆಕ್ಟ್ರಿಕ್ ಬೈಕ್'ನ್ನು ಪ್ರದರ್ಶಿಸಲಾಗುತ್ತದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿರಲಿದ್ದು, ಹಲವು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಬಲಿಷ್ಠವಾದ ಬ್ಯಾಟರಿ ಪ್ಯಾಕ್‌ನ್ನು ಪಡೆದಿರಲಿದೆ. ಹಾಗೆಯೇ ಕೈಗೆಟುಕುವ ಬೆಲೆಯಲ್ಲಿಯೂ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಕೆಟಿಎಂ ಆರ್‌ಸಿ 390 (KTM RC 390):

EICMA - 2025ರಲ್ಲಿ ಹೊಸ 'ಕೆಟಿಎಂ ಆರ್‌ಸಿ 390' ಮೋಟಾರ್‌ಸೈಕಲ್‌ನ್ನು ಅನಾವರಣಗೊಳಿಸಲಾಗುತ್ತದೆ. ಇದು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿರಲಿದ್ದು, ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. 399 ಸಿಸಿ ಎಲ್‌ಸಿ4ಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರಬಹುದು. ಜೊತೆಗೆ ಬಜೆಟ್ ಬೆಲೆಯಲ್ಲಿಯೂ ಲಭ್ಯವಾಗುವ ಸಾಧ್ಯತೆಯಿದ್ದು, 2026ರಲ್ಲಿ ಮಾರಾಟಕ್ಕೂ ಬರಬಹುದು ಎನ್ನಲಾಗಿದೆ.

ಬಿಎಂಡಬ್ಲ್ಯು ಎಫ್ 450 ಜಿಎಸ್ (BMW F 450 GS):

ಈ ಅಂತರರಾಷ್ಟ್ರೀಯ ದ್ವಿಚಕ್ರ ವಾಹನ ಪ್ರದರ್ಶನದಲ್ಲಿ ನೂತನ 'ಬಿಎಂಡಬ್ಲ್ಯು ಎಫ್ 450 ಜಿಎಸ್' ಬೈಕ್‌ನ್ನು ಪ್ರದರ್ಶಿಸಲಾಗುತ್ತದೆ. ಇದು ರೂ.4.5 ಲಕ್ಷದಿಂದ ರೂ.5 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರುವ ನಿರೀಕ್ಷೆಯಿದೆ. 450 ಸಿಸಿ ಪ್ಯಾರಲಲ್ ಟ್ವಿನ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿರಲಿದ್ದು, 48 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಸಹ ಹೊರಹಾಕಬಹುದು ಎನ್ನಲಾಗಿದೆ.

More from DriveSpark

Article Published On: Monday, November 3, 2025, 20:54 [IST]
English summary
Eicma 2025 starts tomorrow hero vida vxz electric bike and other two wheelers unveil details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+