ಅಂತರಾಷ್ಟ್ರೀಯ ವೇದಿಕೆಯಲ್ಲಿ ಧೂಳೆಬ್ಬಿಸಿದ ಟಿವಿಎಸ್: ಆಕ್ರಮಣಕಾರಿ ಮಾಡಲ್‌ಗಳ ಅನಾವರಣ
ಭಾರತೀಯ ದ್ವಿಚಕ್ರ ವಾಹನ ತಯಾರಕ ಟಿವಿಎಸ್, ತನ್ನ ಭವಿಷ್ಯದ ವಾಹನಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಿದೆ. ಇಟಲಿಯಲ್ಲಿ ನಡೆಯುತ್ತಿರುವ EICMA (ಅಂತರರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಪರಿಕರಗಳ ಪ್ರದರ್ಶನ) 2025 ರಲ್ಲಿ ಯುರೋಪಿಯನ್ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಮೂರು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿತು. ಅಲ್ಲದೆ, ಯುರೋಪಿಯನ್ ಮಾರುಕಟ್ಟೆಯಲ್ಲಿ ಅಪಾಚೆ RTX 300 ಬೈಕ್ ಜೊತೆಗೆ RTR ಹೈಪರ್ ಸ್ಟಂಟ್ ಬೈಕನ್ನು ಅನಾವರಣಗೊಳಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
EICMA 2025 ರಲ್ಲಿ, TVS ಮೋಟಾರ್ ಕಂಪನಿಯು ಪರ್ಫಾಮೆನ್ಸ್, ತಂತ್ರಜ್ಞಾನ ಮತ್ತು ಸುಸ್ಥಿರತೆಗೆ ತನ್ನ ಬದ್ಧತೆಯನ್ನು ಪ್ರತಿಬಿಂಬಿಸುವ ನವೀನ ಮೋಟಾರ್‌ಸೈಕಲ್‌ಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳ ವೈವಿಧ್ಯಮಯ ಶ್ರೇಣಿಯನ್ನು ಅನಾವರಣಗೊಳಿಸುವ ಮೂಲಕ ಜಾಗತಿಕ ದ್ವಿಚಕ್ರ ವಾಹನ ಉದ್ಯಮದಲ್ಲಿ ದಿಟ್ಟ ಹೇಳಿಕೆ ನೀಡಿದೆ. ಕಂಪನಿ ಪ್ರರ್ಶಿಸಿದ ಪ್ರಮುಖ ವಾಹನಗಳನ್ನು ನೋಡೋಣ.

TVS M1-S: ಟಿವಿಎಸ್ ಪ್ರದರ್ಶನದ ಪ್ರಮುಖ ಅಂಶವೆಂದರೆ ಸಿಂಗಪೂರ್ ಮೂಲದ ಸ್ಟಾರ್ಟ್‌ಅಪ್ ION ಮೊಬಿಲಿಟಿ ಜೊತೆ ಜಂಟಿಯಾಗಿ ಅಭಿವೃದ್ಧಿಪಡಿಸಲಾದ ಹೊಚ್ಚ ಹೊಸ M1-S ಎಲೆಕ್ಟ್ರಿಕ್ ಮ್ಯಾಕ್ಸಿ - ಸ್ಕೂಟರ್ ಆಗಿದೆ. ಇದು 4.3 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಸಲಾದ ಶಕ್ತಿಯುತ 12.5 kW (ಸರಿಸುಮಾರು 16.76 bhp) ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ. ಇದು ಒಂದೇ ಚಾರ್ಜ್‌ನಲ್ಲಿ 150 ಕಿಮೀ ರೇಂಜ್ ನೀಡುತ್ತದೆ ಎಂದು ಹೇಳಲಾಗಿದೆ.
ಈ ಸ್ಕೂಟರ್ ಎರಡು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಫ್ಲಾಟ್ ಫ್ಲೋರ್‌ಬೋರ್ಡ್, ವಿಶಾಲವಾದ ಸಿಂಗಲ್ - ಪೀಸ್ ಸೀಟ್ ಮತ್ತು ಸ್ಮಾರ್ಟ್‌ಫೋನ್ ಸಂಪರ್ಕ, ಮ್ಯೂಸಿಕ್ ಕಂಟ್ರೋಲ್, ನ್ಯಾವಿಗೇಷನ್ ಮತ್ತು ಆಧುನಿಕ ಸವಾರರನ್ನು ಆಕರ್ಷಿಸುವ ಸ್ಮಾರ್ಟ್ ಕೀ ಸಿಸ್ಟಮ್ ಅನ್ನು ಒಳಗೊಂಡ 7 - ಇಂಚಿನ ಟಿಎಫ್‌ಟಿ ಡಿಸ್ಪ್ಲೇಯೊಂದಿಗೆ ಆಕ್ರಮಣಕಾರಿ ಡಿಸೈನ್ ಹೊಂದಿದೆ.

TVS X ಎಲೆಕ್ಟ್ರಿಕ್ ಬೈಕ್: ಟಿವಿಎಸ್ ಅಪಾಚೆ ಆರ್‌ಟಿಆರ್ ಸರಣಿಯಿಂದ ಪ್ರೇರಿತವಾದ TVS X ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಹಿರಂಗಪಡಿಸಿದೆ. ಈ ಬೈಕ್ ಬಹು ರೈಡ್ ಮೋಡ್‌ಗಳು, ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಲ್ ಹೋಲ್ಡ್ ಮತ್ತು ರಿವರ್ಸ್ ಗೇರ್‌ನಂತಹ ಎಲೆಕ್ಟ್ರಾನಿಕ್ ಏಡ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ. ಇದು ಪರ್ಫಾಮೆನ್ಸ್ ಎಲೆಕ್ಟ್ರಿಕ್ ಪರ್ಯಾಯ ವಾಹನ ಹುಡುಕುತ್ತಿರುವ ಸವಾರರಿಗಾಗಿ ನಿರ್ಮಿಸಲಾಗಿದೆ.
TVS RR ಟ್ಯಾಂಜೆಂಟ್: ಟಿವಿಎಸ್ 300 ಸಿಸಿ ಸ್ಟಂಟ್ - ಫೋಕಸ್ಡ್ ಮೋಟಾರ್‌ಸೈಕಲ್ ಸ್ಪೋರ್ಟಿಂಗ್ ರೋಮಾಂಚಕ ಸ್ಟೈಲಿಂಗ್ ಮತ್ತು ಸ್ಟಂಟ್ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾದ ಫೇರ್ಡ್ ಸ್ಪೋರ್ಟ್‌ಬೈಕ್ ಆರ್‌ಆರ್ ಟ್ಯಾಂಜೆಂಟ್ ಅನ್ನು ಸಹ ಪ್ರದರ್ಶಿಸಿತು. ಇದು ಹೊಸ 300 ಸಿಸಿ ಎಂಜಿನ್ 36 ಬಿಹೆಚ್ ಪವರ್ ಮತ್ತು 28.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ವರದಿಯಲ್ಲಿ ಹೇಳಿದೆ.

TVS e.FX.30: ಕೊನೆಯದಾಗಿ ಟಿವಿಎಸ್ ಇ.ಎಫ್ಎಕ್ಸ್.30 ಕಾನ್ಸೆಪ್ಟ್ ಮಾಡಲ್ ಅನ್ನು ಸಹ ಪ್ರದರ್ಶಿಸಿದ್ದು, ಇದು ಬ್ರ್ಯಾಂಡ್ ನ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಕಾನ್ಸೆಪ್ಟ್ ಎಂದು ಹೇಳಿಕೊಂಡಿದೆ. ಇದು ಸ್ಟ್ರೀಟ್ ಫೈಟರ್ ವಿನ್ಯಾಸವನ್ನು ಹೊಂದಿದೆ ಮತ್ತು ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಪವರ್ ಟ್ರೇನ್ ತಂತ್ರಜ್ಞಾನವನ್ನು ಹೊರತರಲಿದೆ ಎಂದು ಬ್ರಾಂಡ್ ಧೃಡಪಡಿಸಿದೆ.
ಇವುಗಳು ಹೈಟೆಕ್ ಎಲೆಕ್ಟ್ರಿಕ್ ಪ್ರಯಾಣಿಕರಿಂದ ಹಿಡಿದು ಪರ್ಫಾಮೆನ್ಸ್-ಅಪೇಕ್ಷಿಸುವ ಕ್ರೀಡಾ ಸವಾರರವರೆಗೆ ಹೇಳಿ ಮಾಡಿಸಿದ ಟಿವಿಎಸ್‌ನ ಇವಿ ಪರ್ಫಾಮೆನ್ಸ್ ಬೈಕ್‌ಗಳು ಎಂದು ಹೇಳಬಹುದು. ಇವು ಕಂಪನಿಯ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತವೆ. ದೃಢವಾದ ಪೋರ್ಟ್‌ಫೋಲಿಯೊದೊಂದಿಗೆ, ಟಿವಿಎಸ್ ಪೆಟ್ರೋಲ್ ಚಾಲಿತ ವಾಹನಗಳು ಮಾತ್ರವಲ್ಲದೆ ಎಲೆಕ್ಟ್ರಿಕ್ ಭವಿಷ್ಯಕ್ಕಾಗಿ ಅದರ ದೃಷ್ಟಿಯನ್ನು ಸಹ ಪ್ರದರ್ಶಿಸಿದೆ.


Click it and Unblock the Notifications








