EMotorad: ಕೇವಲ 50 ಸಾವಿರಕ್ಕೆ ಇ-ಸೈಕಲ್ ಬಿಡುಗಡೆ: 150 ಕೆ.ಜಿ ಲೋಡ್ ಸಾಮರ್ಥ್ಯ: 100 ಕಿ.ಮೀ ರೇಂಜ್
ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಇಮೋಟೊರಾಡ್ (EMotorad), ಲಾಜಿಸ್ಟಿಕ್ಸ್‌ಗಾಗಿ ವಿನ್ಯಾಸಗೊಳಿಸಲಾದ ದೃಢವಾದ ಮತ್ತು ಕೈಗೆಟುಕುವ 'ಜಿ1 ಕಾರ್ಗೋ ಇ-ಸೈಕಲ್' (G1 Cargo E-Cycle) ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಬೆಲೆ ರೂ. 49,999 (ಎಕ್ಸ್ ಶೋರೂಂ) ಇದೆ. ಇಮೋಟೊರಾಡ್‌ನ G1 ಕಾರ್ಗೋ ಇ-ಸೈಕಲ್ ವೆಚ್ಚ-ಪರಿಣಾಮಕಾರಿಯಾಗಿದ್ದು, ಹೆಚ್ಚಿನ ಸಾಮರ್ಥ್ಯದ ಹೊರೆ, ಕೊನೆಯ ಮೈಲಿ ವಿತರಣೆ, ಸರಕು ಸಾಗಣೆ ಮತ್ತು ವೈಯಕ್ತಿಕ ವಿತರಣಾ ಸೇವೆಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತದೆ ಎಂದು ಕಂಪನಿ ತಿಳಿಸಿದೆ.
ನೀವು ಸ್ಥಳೀಯ ವಿತರಣೆಗಳನ್ನು ಮಾಡುವ ಸಣ್ಣ ವ್ಯಾಪಾರ ಮಾಲೀಕರಾಗಿರಲಿ ಅಥವಾ ನಗರದಾದ್ಯಂತ ಸರಕುಗಳನ್ನು ಸಾಗಿಸುವ ವ್ಯಕ್ತಿಯಾಗಿರಲಿ, ಸಾಂಪ್ರದಾಯಿಕ ವಾಹನಗಳಿಗೆ ಹೋಲಿಸಿದರೆ G1 ಇಂಧನ ವೆಚ್ಚವನ್ನು ಶೇ40 ರಷ್ಟು ಕಡಿತಗೊಳಿಸುವ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಮೋಟೊರಾಡ್ ಭರವಸೆ ನೀಡಿದೆ.

ಡ್ಯುಯಲ್ 48V 10.2Ah ತೆಗೆದು ಹಾಕಬಹುದಾದ ಬ್ಯಾಟರಿಗಳಿಂದ ನಡೆಸಲ್ಪಡುವ G1 ಕಾರ್ಗೋ ಇ-ಸೈಕಲ್, ಪೆಡಲ್ ಅಸಿಸ್ಟ್‌ನಲ್ಲಿ ಪ್ರಭಾವಶಾಲಿ 100 ಕಿ.ಮೀವರೆಗೆ ರೇಂಜ್ ನೀಡುತ್ತದೆ. ಇದು ಇಂಧನ ಚಾಲಿತ ವಾಹನಗಳಂತೆ ಹೆಚ್ಚಿನ ನಿರ್ವಹಣಾ ವೆಚ್ಚವಿಲ್ಲದೆ ದೀರ್ಘ ಪ್ರಯಾಣಗಳಿಗೆ ಸೂಕ್ತವಾಗಿರುತ್ತದೆ. ಹೆಚ್ಚುವರಿಯಾಗಿ, ಇದರ 150 ಕೆ.ಜಿ ಲೋಡ್ ಸಾಮರ್ಥ್ಯವು ದೊಡ್ಡದಾದ, ಭಾರವಾದ ಹೊರೆಗಳನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ.
EMotorad CEO ಕುನಾಲ್ ಗುಪ್ತಾ ಮಾತನಾಡಿ, "G1 ಕಾರ್ಗೋ ಇ-ಸೈಕಲ್ ಕೇವಲ ವ್ಯವಹಾರಗಳಿಗೆ ಮಾತ್ರವಲ್ಲ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ದಕ್ಷ, ವೆಚ್ಚ-ಪರಿಣಾಮಕಾರಿ ರೀತಿಯಲ್ಲಿ ಸರಕುಗಳನ್ನು ಸಾಗಿಸಬೇಕಾದ ಯಾರಿಗಾದರೂ ಒಂದು ಉತ್ತಮ ಪರಿಹಾರವಾಗಿದೆ. ನೀವು ಸ್ಥಳೀಯ ವಿತರಣಾ ಸವಾರರಾಗಿರಲಿ ಅಥವಾ ವೈಯಕ್ತಿಕ ಸರಕುಗಳನ್ನು ಸಾಗಿಸುವವರಾಗಿರಲಿ, G1 ನಿಮಗೆ ಇಂಧನ ಖರ್ಚು ಉಳಿಸಲು, ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

G1 ಕಾರ್ಗೋ ಇ-ಸೈಕಲ್ ನಗರ ಪ್ರಯಾಣ ಮತ್ತು ಭಾರವಾದ ಹೊರೆ ಸಾಗಣೆಯ ಸವಾಲುಗಳನ್ನು ನಿಭಾಯಿಸಲು ನಿರ್ಮಿಸಲಾಗಿದೆ, 24"x3.0" ಮುಂಭಾಗದ ಟೈರ್‌ಗಳು, 80mm ಸಸ್ಪೆನ್ಷನ್ ಮತ್ತು 180mm ಮೆಕ್ಯಾನಿಕಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದ್ದು, ಗಣನೀಯ ಸರಕುಗಳಿದ್ದರೂ ಸಹ ಸುಗಮ ಮತ್ತು ಸ್ಥಿರವಾದ ಸವಾರಿಯನ್ನು ಖಚಿತಪಡಿಸುತ್ತದೆ.
ಈ ಜಿ1 ಕಾರ್ಗೋ ಇ-ಸೈಕಲ್ ಆಧುನಿಕ ವಿತರಣೆ ಮತ್ತು ಸಾರಿಗೆಯ ಬೇಡಿಕೆಗಳನ್ನು ಪೂರೈಸಲು ಬಯಸುವ ಯಾರಿಗಾದರೂ ವಿಶ್ವಾಸಾರ್ಹ, ಪರಿಸರ ಸ್ನೇಹಿ ಪರ್ಯಾಯವಾಗಿದೆ. ಜೊತೆಗೆ ದೀರ್ಘಾವಧಿಯ ಕಾರ್ಯಾಚರಣೆಯ ವೆಚ್ಚವನ್ನು ಉಳಿಸುತ್ತದೆ. G1 ಕಾರ್ಗೋ ಎಲೆಕ್ಟ್ರಿಕ್ ಸೈಕಲ್‌ನ ಪ್ರಮುಖ ವಿಶೇಷಣಗಳು ಈ ಕೆಳಗೆ ವಿವರಿಸಲಾಗಿದೆ.
ಇದರ ಫ್ರೇಮ್ ಅನ್ನು ಹೈ-ಟೆನ್ಸೈಲ್ ಲಾಂಗ್‌ಟೈಲ್ ಸ್ಟೀಲ್‌ನಲ್ಲಿ ನಿರ್ಮಿಸಲಾಗಿದ್ದು, ಪವರ್‌ಫುಲ್ 250W ರಿಯರ್ ಹಬ್ ಮೋಟಾರ್ ಒದಗಿಸಲಾಗಿದೆ. ಡ್ಯುಯಲ್ 48V 10.2Ah ತೆಗೆದು ಹಾಕಬಹುದಾದ ಬ್ಯಾಟರಿಗಳನ್ನು ನೀಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಪೆಡಲ್ ಅಸಿಸ್ಟ್ ಮೂಲಕ 100 ಕಿ.ಮೀ ಹಾಗೂ ಕೇವಲ ಥ್ರೋಟಲ್‌ನಲ್ಲಿ 75 ಕಿ.ಮೀ ಓಡಿಸಬಹುದು ಎಂದು ಕಂಪನಿ ತಿಳಿಸಿದೆ.
ಟೈರ್‌ಗಳ ವಿಷಯಕ್ಕೆ ಬಂದರೆ ಮುಂಭಾಗ 24"x3.0" ಹಾಗೂ ಹಿಂಭಾಗದಲ್ಲಿ 20"x3.0" ಟೈರ್‌ಗಳನ್ನು ಅಳವಡಿಸಲಾಗಿದೆ. 80mm ಟ್ರಾವೆಲ್ ಫೋರ್ಕ್ ಸಸ್ಪೆನ್ಷನ್, 180mm ಮೆಕ್ಯಾನಿಕಲ್ ಡಿಸ್ಕ್ ಬ್ರೇಕ್‌ಗಳು, ಕ್ಲಸ್ಟರ್ C2 ಮಲ್ಟಿಫಂಕ್ಷನಲ್ ಡಿಸ್ಪ್ಲೇನಂತಹ ಆಧುನಿಕ ಫೀಚರ್ಸ್ ಹೊಂದಿದೆ. ಒಟ್ಟಾರೆ ಈ ಎಲ್ಲಾ ಗುಣಗಳೊಂದಿಗೆ ಬರೊಬ್ಬರಿ 150 ಕೆ.ಜಿ ತೂಕವನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಕಂಪನಿಯು ಹೊಸ ಜಿ1 ಕಾರ್ಗೋ ಇ-ಸೈಕಲ್ ಫ್ರೇಮ್ ಮೇಲೆ 5 ವರ್ಷಗಳ ವಾರೆಂಟಿ ನೀಡುತ್ತಿದೆ. G1 ಕಾರ್ಗೋ ಇ-ಸೈಕಲ್ ಈಗ EMotorad ನ ಡೀಲರ್ ನೆಟ್‌ವರ್ಕ್, ಅಧಿಕೃತ ವೆಬ್‌ಸೈಟ್ ಮತ್ತು ಪ್ರಮುಖ ಇ - ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಈ ಹೊಸ ಸೈಕಲ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications