ಕೆವಲ 28 ಸಾವಿರ... 1 ಪೈಸೆ ಖರ್ಚಿಲ್ಲದೆ 45 ಕಿ.ಮೀ ಓಡಿಸಬಹುದು... 110 ಕೆ.ಜಿ ಸಾಗಿಸುವ ಸಾಮರ್ಥ್ಯ
ಪ್ರಮುಖ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಇಮೊಟೊರಾಡ್ (EMotorad), ತನ್ನ ಜನಪ್ರಿಯ ಮಾಡಲ್ ಇಮೊಟೊರಾಡ್ ಎಕ್ಸ್1 (EMotorad X1) ನ ಅಪ್‌ಡೇಟ್ ಆವೃತ್ತಿಯನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದೆ. ಇದರ ಬೆಲೆಯು ರೂ. 27,999 ಇದೆ, ತನ್ನ ವಿಭಾಗದಲ್ಲಿ ಅತ್ಯಂತ ವೈಶಿಷ್ಟ್ಯ-ಭರಿತ ಮತ್ತು ವಿಶ್ವಾಸಾರ್ಹ ಎಲೆಕ್ಟ್ರಿಕ್ ಸೈಕಲ್‌ಗಳಲ್ಲಿ ಒಂದಾಗಿದೆ. ಹೊಸ X1 ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿರುವುದು ಪರಿಸರ ಸ್ನೇಹಿ ಸೈಕಲ್ ಉತ್ಸಾಹಿಗಳಿಗೆ ಉತ್ತಮ ಕೊಡುಗೆಯಾಗಿದೆ ಎಂದು ಹೇಳಬಹುದು. ಈ ಸೈಕಲ್ ಕುರಿತ ಟಾಪ್ ವಿಶೇಷತೆಗಳು ಇಲ್ಲಿವೆ.
ತಾಂತ್ರಿಕ ವಿಶೇಷಣಗಳು: ಒಮ್ಮೆ ಚಾರ್ಜ್ ಮಾಡಿದರೆ ಪೆಡಲ್ ಸಹಾಯದಲ್ಲಿ 45 ಕಿ.ಮೀವರೆಗೆ ಹಾಗೂ ಕೇವಲ ಥ್ರೊಟಲ್‌ನಲ್ಲಾದರೆ 35 ಕಿ.ಮೀವರೆಗೆ ಓಡಬಲ್ಲದು. ರೂ. 27,999 ಬೆಲೆಯಲ್ಲಿ ಹೆಚ್ಚಿನ ಟೆನ್ಸೈಲ್ ಸ್ಟೀಲ್ ಫ್ರೇಮ್‌ನೊಂದಿಗೆ ಇಮೊಟೊರಾಡ್ ಎಕ್ಸ್1 ಸಿಂಗಲ್ ಸ್ಪೀಡ್ ಸೈಕಲ್ ಆಗಿದೆ. 27.5" X 2.1" ನೈಲಾನ್ ಟೈರ್‌ಗಳು ಸೈಕಲ್‌ಗೆ ಉತ್ತಮ ಗ್ರಿಪ್ ಒದಗಿಸುತ್ತವೆ.

ಹೊಸದಾಗಿ ಈ ಬಾರಿ 36V 10.2 Ah ಲಿ-ಐಯಾನ್ ತೆಗೆದು ಹಾಕಬಹುದಾದ ಬ್ಯಾಟರಿ ಸಾಮರ್ಥ್ಯದೊಂದಿಗೆ, ರೈಡರ್ ತೂಕ 110 ಕೆ.ಜಿ ಇದ್ದರೂ ಸೈಕಲ್ ಸುಲಭವಾಗಿ ಹೊತ್ತೊಯ್ಯಬಲ್ಲದು. ಫ್ರೇಮ್ ಮೇಲೆ 5 ವರ್ಷಗಳ ವಾರೆಂಟಿ ನೀಡಲಾಗುತ್ತಿದೆ. ನವೀಕರಿಸಿದ X1 ಸೈಕಲ್ ಈಗ ಎಲ್ಲಾ ಇಮೊಟೊರಾಡ್‌ನ ಮಾರಾಟ ಮಳಿಗೆಗಳಲ್ಲಿ ಮತ್ತು ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಹೊಸ ಬ್ಯಾಟರಿ ಮತ್ತು ಹೊಸ ಬಣ್ಣ ಆಯ್ಕೆಗಳೊಂದಿಗೆ, X1 ಭಾರತದಲ್ಲಿ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಎಲೆಕ್ಟ್ರಿಕ್ ಸೈಕಲ್‌ಗಳಲ್ಲಿ ಈಗ ಅಗ್ರಸ್ಥಾನದಲ್ಲಿ ನಿಲುತ್ತದೆ. ಹೊಸ ಮಾಡಲ್ ಈಗ ರೂಬಿ ರೆಡ್, ಆರ್ಕ್ಟಿಕ್ ಬ್ಲೂ, ಫ್ಯಾಂಟಮ್ ಗ್ರೇ, ಸ್ಕೈ ಬ್ಲೂ ಫೈರ್‌ಸ್ಟ್ರೀಮ್, ಬೀಜ್ ಡೆಸರ್ಟ್ ಹಾಕ್, ಮಿಂಟ್ ಗ್ರೀನ್ ಬ್ಲೇಜ್ ಎಂಬ ಆರು ಹೊಸ ಬಣ್ಣಗಳಲ್ಲಿ ಬರುತ್ತದೆ.
ಇದು ಸವಾರರು ತಮ್ಮ ಶೈಲಿಗೆ ಸೂಕ್ತವಾದ ನೋಟವನ್ನು ಆಯ್ಕೆ ಮಾಡಲು ಮತ್ತು ಪ್ರಯಾಣಕ್ಕೆ ಹಸಿರು ಮಾರ್ಗವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಸಿಂಗಲ್-ಸ್ಪೀಡ್ ಗೇರ್ ಸಿಸ್ಟಮ್, ಬ್ಯಾಟರಿ ಇಂಡಿಕೇಟರ್ ಡಿಸ್ಪ್ಲೇ ಮತ್ತು 110 ಕೆ.ಜಿ ವರೆಗಿನ ತೂಕದ ಸಾಮರ್ಥ್ಯದೊಂದಿಗೆ, ಸೈಕಲ್ ಅನ್ನು ದೈನಂದಿನ ಪ್ರಯಾಣಕ್ಕೆ ಸುಲಭವಾಗಿ ಓಡಿಸಲು ವಿನ್ಯಾಸಗೊಳಿಸಲಾಗಿದೆ.
ಇದು ಪ್ರತಿ ರೈಡ್‌ನಲ್ಲಿ ಸವಾರರಿಗೆ ದೀರ್ಘ, ಸುಗಮ ಮತ್ತು ಹೆಚ್ಚು ಆನಂದದಾಯಕ ಅನುಭವವನ್ನು ನೀಡುತ್ತದೆ. ಮೇಲೆ ತಿಳಿಸಿದಂತೆ ಹೊಸ X1 ಸೈಕಲ್ 36V 10.2Ah ಲಿಥಿಯಂ-ಐಯಾನ್ ತೆಗೆದು ಹಾಕಬಹುದಾದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಹಿಂದಿನ 7.65Ah ಬ್ಯಾಟರಿಗಿಂತ ದೊಡ್ಡದಾಗಿದೆ, ಈ ಅಪ್‌ಗ್ರೇಡ್ ಪೆಡಲ್ ಅಸಿಸ್ಟ್‌ನಲ್ಲಿ ಇ-ಸೈಕಲ್‌ನ ರೇಂಜ್ ಅನ್ನು ಸರಿಸುಮಾರು 35 ಕಿ.ಮೀ ನಿಂದ 45 ಕಿ.ಮೀ (ಸಿಂಗಲ್ ಚಾರ್ಜ್) ವರೆಗೆ ವಿಸ್ತರಿಸಿದೆ.
ನಗರದ ರಸ್ತೆಗಳು ಮತ್ತು ಅಸಮ ಮಾರ್ಗಗಳಲ್ಲಿ ಆರಾಮದಾಯಕ ಮತ್ತು ಸ್ಥಿರವಾದ ಸವಾರಿಗಾಗಿ ಬಲವಾದ ಹೈ ಟೆನ್ಸೈಲ್ ಸ್ಟೀಲ್ ಫ್ರೇಮ್, 100 ಎಂಎಂ ಪ್ರಯಾಣದೊಂದಿಗೆ ಮುಂಭಾಗದ ಸಸ್ಪೆನ್ಷನ್ ಮತ್ತು 27.5" x 2.1" ನೈಲಾನ್ ಟೈರ್‌ಗಳೊಂದಿಗೆ X1 ಅನ್ನು ನಿರ್ಮಿಸಲಾಗಿದೆ. ಇದು ಪ್ರಮುಖ ನಗರ ಸವಾರಿಗಳಲ್ಲಿ ಆರೋಗ್ಯಕರವಾದ ಸವಾರಿ ಅನುಭವ ನೀಡುವುದಾಗಿ ಕಂಪನಿ ಭರವಸೆ ನೀಡಿದೆ.
ಕೈಗೆಟುಕುವಿಕೆ, ನಾವೀನ್ಯತೆ ಮತ್ತು ಗ್ರಾಹಕರ ತೃಪ್ತಿಯ ಮೇಲೆ ಕೇಂದ್ರೀಕರಿಸಿದ ಇಮೋಟೊರಾಡ್, ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ಬ್ರಾಂಡ್ ಆಗಿದ್ದು, ಹೆಚ್ಚಿನ ಪರ್ಫಾಮೆನ್ಸ್, ಸುಸ್ಥಿರ ಇ-ಮೊಬಿಲಿಟಿ ಸೈಕಲ್‌ಗಳನ್ನು ನೀಡುತ್ತದೆ. ಸುಸ್ಥಿರ ಪ್ರಯಾಣ ಮತ್ತು ಸರಕು ಸಾಗಣೆಯ ವಾಹನಗಳನ್ನು ಎಲ್ಲರೂ ಸುಲಭವಾಗಿ ಖರೀದಿಸುವಂತೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದೆ.


Click it and Unblock the Notifications








