GST ಪರಿಷ್ಕರಣೆ: ಮೊದಲೇ ಕಡಿಮೆ ಬೆಲೆ... ಮತ್ತೇ ಬೆಲೆ ಇಳಿಕೆ: ಹೀರೋ ವಾಹನಗಳಿಗೆ ಭಾರಿ ಬೇಡಿಕೆ

ನವರಾತ್ರಿ ಹಬ್ಬದ ಆರಂಭದೊಂದಿಗೆ ಹಬ್ಬದ ಸೀಸನ್ ಶುರುವಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಆಟೋ ಮಾರುಕಟ್ಟೆ ಹುಮ್ಮಸ್ಸಿನ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಏಕೆಂದರೆ ಇತ್ತೀಚೆಗೆ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆ ಆಗಿರುವುದರಿಂದ ವಿಶೇಷವಾಗಿ 100 ಸಿಸಿ ಮತ್ತು 125 ಸಿಸಿ ವಿಭಾಗಗಳಲ್ಲಿ ವೆಚ್ಚದ ಭಾರ ಕಡಿಮೆ ಆಗಿದೆ. ಹಾಗಾಗಿ ಮೊದಲ ಬಾರಿಗೆ ದ್ವಿಚಕ್ರ ವಾಹನ ಖರೀದಿ ಮಾಡುವವರು ಈ ವಿಭಾಗದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೋಕಾರ್ಪ್ (Hero Motocorp) ಕಂಪನಿಯು ದೇಶಾದ್ಯಂತ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದೆ.

ಕಂಪನಿಯು ದೇಶಾದ್ಯಂತ ತನ್ನ ಡೀಲರ್‌ಶಿಪ್‌ ಗಳಲ್ಲಿನ ಚಟುವಟಿಕೆಗಲು ಗಮಾನರ್ಹ ಏರಿಕೆಯಾಗಿರುವುದು ಗಮನಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೀರೋ ವಾಹನಗಳ ಮೇಲಿನ ಗ್ರಾಹಕರ ಆಸಕ್ತಿಯು ಗಣನೀಯವಾಗಿ ಏರಿದೆ. ಇದಕ್ಕೆ ಮುಖ್ಯ ಕಾರಣ ಜಿಎಸ್‌ಟಿ ಇಳಿಕೆಯಿಂದ ಉಂಟಾಗಿರುವ ಬೆಲೆ ರಿಯಾಯಿತಿ ಕಾರಣವಾಗಿದೆ. ಅದಕ್ಕೆ ಪೂರಕವಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೋರೂಂಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಶೇ.50ರಷ್ಟು ಜಾಸ್ತಿಯಾಗಿದೆ ಎಂದು ಹೀರೋ ತಿಳಿಸಿದೆ.

gst-revision-huge-demand-for-hero-two-wheelers-at-festive-season

ಈ ಕುರಿತು ಮಾತನಾಡಿರುವ ಹೀರೋ ಮೋಟೋಕಾರ್ಪ್ ಇಂಡಿಯಾ ಬಿಸಿನೆಸ್ ಯೂನಿಟ್‌ ಚೀಫ್ ಅಶುತೋಷ್ ವರ್ಮಾ, "ಈ ಹಬ್ಬದ ಋತುವಿನ ವಿಶೇಷವೆಂದರೆ ವಾಹನ ಖರೀದಿಗಳಲ್ಲಿ ತೀವ್ರ ಏರಿಕೆ ಆಗಿರುವುದು. ನವರಾತ್ರಿಯ ಮೊದಲ ದಿನದಂದೇ ನಮ್ಮ ಶೋರೂಂಗೆ ಬಂದು ಹೀರೋ ದ್ವಿಚಕ್ರ ವಾಹನವನ್ನು ಖರೀದಿಸಿದ ಗ್ರಾಹಕರ ಸಂಖ್ಯೆ ಕಳೆದ ವರ್ಷಕ್ಕಿಂತ ಎರಡು ಪಟ್ಟುಹೆಚ್ಚಾಗಿದೆ.

ಜಿಎಸ್‌ಟಿ 2.0 ಜೊತೆಗೆ ಹೊಸ ಬೆಲೆಯನ್ನು ಎದುರು ನೋಡುತ್ತಾ ಕೊಂಚ ಸ್ಥಿರವಾಗಿದ್ದ ಮಾರಾಟವು ಇದೀಗ ಭಾರಿ ಚೇತರಿಕೆ ಕಂಡಿದೆ. ಗ್ರಾಹಕರು ತಕ್ಷಣ ಹೊಸ ವಾಹನವನ್ನು ಖರೀದಿಸಲು ಮುಂದಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಹೊಸದಾಗಿ ಬಿಡುಗಡೆಯಾದ 12 ವಿಭಾಗ ಪ್ರಮುಖ ಮಾಡೆಲ್‌ಗಳ ಹಬ್ಬದ ಶ್ರೇಣಿಯು ಸ್ಕೂಟರ್ ಮತ್ತು ಮೋಟಾರ್‌ ಸೈಕಲ್‌ ವಿಭಾದಲ್ಲಿನ ಬೇಡಿಕೆಯನ್ನು ಏರಿಸಿದೆ.

gst-revision-huge-demand-for-hero-two-wheelers-at-festive-season

ಡಿಜಿಟಲ್ ನಲ್ಲಿ ವಿಚಾರಣೆ ಮತ್ತು ಶೋರೂಂ ವಿಚಾರಣೆಗಳು ಕೂಡ ಹೆಚ್ಚಾಗಿದ್ದು, ನಮ್ಮ ಉತ್ಪನ್ನಗಳಿಗಾಗಿ ನಡೆದ ಆನ್‌ಲೈನ್ ಹುಡುಕಾಟಗಳು ಸಾರ್ವಕಾಲಿಕ ಗರಿಷ್ಠ ಸಂಖ್ಯೆ ದಾಟಿ 3 ಪಟ್ಟು ಜಿಗಿತ ಕಂಡಿವೆ" ಎಂದು ಹೀರೋ ಮೋಟೋಕಾರ್ಪ್ ಇಂಡಿಯಾ ಬಿಸಿನೆಸ್ ಯೂನಿಟ್‌ ಚೀಫ್ ಅಶುತೋಷ್ ವರ್ಮಾ ಹೇಳಿದರು.

ಜಿಎಸ್‌ಟಿ ಪ್ರಯೋಜನಗಳ ಜೊತೆಗೆ ಹೀರೋ ಮೊದಲ ಬಾರಿಗೆ ಖರೀದಿ ಮಾಡುತ್ತಿರುವವರಿಗೆ ದೊಡ್ಡ ಲಾಭವನ್ನು ಒದಗಿಸುವುದಾಗಿ ಘೋಷಿಸಿದ್ದು, ಅವರಿಗೆ ಹೀರೋ ಗುಡ್‌ಲೈಫ್ ಫೆಸ್ಟಿವ್ ಕ್ಯಾಂಪೇನ್ ಎಂಬ ಹಬ್ಬದ ಅಭಿಯಾನದ ಮೂಲಕ ಉತ್ತಮ ಲಾಯಲ್ಟಿ ಮತ್ತು ರಿವಾರ್ಡ್ಸ್ ಒದಗಿಸಿ ಹಬ್ಬವನ್ನು ಇನ್ನಷ್ಟು ಸಂತೋಷದಾಯಕವಾಗಿಸಲಿದೆ.

gst-revision-huge-demand-for-hero-two-wheelers-at-festive-season

"ಆಯಾ ತ್ಯೋಹಾರ್, ಹೀರೋ ಪೇಸವಾರ್" ಎಂಬ ಹಬ್ಬದ ಅಭಿಯಾನದ ಟ್ಯಾಗ್ ಲೈನ್‌ಗೆ ತಕ್ಕಂತೆ ಈ ರಾಷ್ಟ್ರವ್ಯಾಪಿ ಕ್ಯಾಂಪೇನ್ ಪ್ರತಿಯೊಬ್ಬ ಹೊಸ ಗ್ರಾಹಕನಿಗೆ 100% ಕ್ಯಾಶ್‌ಬ್ಯಾಕ್, ಚಿನ್ನದ ನಾಣ್ಯಗಳು ಮತ್ತು ಇನ್ನೂ ಹಲವಾರು ವಿಶೇಷ ಪ್ರಯೋಜನಗಳನ್ನು ಒದಗಿಸಲಿದೆ. ಜೊತೆಗೆ ಡೆಸ್ಟಿನಿ 110, ಝೂಮ್ 160, ಗ್ಲಾಮರ್ ಎಕ್ಸ್ 125, ಎಚ್‌ಎಫ್ ಡಿಲಕ್ಸ್ ಪ್ರೋನಂತಹ ಹೊಸ ವಾಹನಗಳ ಮೇಲೆ ಬೆಲೆ ಗಮನಾರ್ಹವಾಗಿ ಇಳಿಕೆಯಾಗಿದೆ.

ಈ ಮೂಲಕ ಹೀರೋ ಮೋಟೋಕಾರ್ಪ್ ದೈನಂದಿನ ವಿಭಿನ್ನ ಸಾರಿಗೆ ಅಗತ್ಯಗಳನ್ನು ಪೂರೈಸಲು ವಿನೂತನ ಮತ್ತು ಸ್ಟೈಲಿಶ್ ಆಯ್ಕೆಗಳನ್ನು ಒದಗಿಸುತ್ತಿದೆ. ಈ ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಸ್ಟಾಕ್‌ ಖಾಲಿಯಾಗುವುದನ್ನು ತಪ್ಪಿಸಲು ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಿದೆ. ಮುಂಬರುವ ವಾರಗಳಲ್ಲಿ ಜನಪ್ರಿಯ ಮಾಡೆಲ್ ಗಳು ಮತ್ತು ಬಣ್ಣದ ಆಯ್ಕೆಗಳ ಪೂರೈಕೆ ಜಾಸ್ತಿಯಾಗುವಂತೆ ನೋಡಿಕೊಂಡಿರುವುದಾಗಿ ತಿಳಿಸಿದೆ.

More from DriveSpark

Article Published On: Wednesday, October 8, 2025, 10:20 [IST]
English summary
Gst revision huge demand for hero two wheelers at festive season
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+