ಸ್ಪೋಕ್‌ಗಳು ಮಾತ್ರವಲ್ಲ, ಪೆಡಲ್ ಕೂಡ ಇಲ್ಲ... ಕೆಂಪು ಬೈಸಿಕಲ್‌ನತ್ತ ದಿಟ್ಟಿಸಿದ ಮೋದಿ

ಭಾರತದಲ್ಲಿ ಇತ್ತೀಚೆಗೆ ನಡೆದ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025' (Bharat Mobility Global Expo 2025) ವಿಶ್ವ ಆಟೋ ಉದ್ಯಮಗಳನ್ನು ತನ್ನತ್ತ ಸೆಳೆದಿದೆ. ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಜನವರಿ 17 ರಿಂದ ಜನವರಿ 22 ರವರೆಗೆ ನಡೆದ ಈ ಎಕ್ಸ್ ಪೋದಲ್ಲಿ ಭಾರತ ಸೇರಿದಂತೆ ವಿಶ್ವದ ಪ್ರಮುಖ ವಾಹನ ಬ್ರಾಂಡ್‌ಗಳು ಪಾಲ್ಗೊಂಡು ತಮ್ಮ ಮುಂಬರುವ ಉತ್ಪನ್ನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದವು. ಆದ್ರೆ ಈ ಕಾರ್ಯಕ್ರಮದಲ್ಲಿ ದೇಶೀಯ ಬೈಸಿಕಲ್ ಒಂದು ಪ್ರಧಾನಿ ಮೋದಿಯವರ ಗಮನ ಸೆಳೆದಿದೆ.

ಎಲ್ಲಾ ಬ್ರಾಂಡ್‌ಗಳಂತೆಯೇ ಸಣ್ಣ ಸ್ಟಾರ್ಟ್‌ಅಪ್‌ ಕಂಪನಿಯಾದ ಹೆಲೆನ್ ಬೈಕುಗಳ ಸ್ಟಾಲ್‌ನಲ್ಲಿ ಫ್ಯೂಚರಿಸ್ಟಿಕ್ ಡಿಸೈನ್‌ನೊಂದಿಗೆ ನಿರ್ಮಿಸಲಾದ ಕೆಂಪು ಬೈಸಿಕಲ್ ಒಂದು ಪ್ರಧಾನಿ ಮೋದಿಯವರ ಗಮನವನ್ನು ಸೆಳೆಯಿತು. ಇದು ಇತರ ಸೈಕಲ್‌ಗಳಂತಲ್ಲದೆ ತನ್ನದೇ ಆದ ಆಕರ್ಷಕ ವಿನ್ಯಾಸ ಅಂಶಗಳನ್ನು ಹೊಂದಿತ್ತು. ಸಾಮಾನ್ಯ ಸೈಕಲ್‌ನಲ್ಲಿ ಕಾಣುವ ಪೆಡಲ್‌ ಹಾಗೂ ಸ್ಪೋಕ್ ವೈರ್‌ಗಳನ್ನು ಈ ಸೈಕಲ್ ಹೊಂದಿರಲಿಲ್ಲ.

helen-bikes-showcased-hubless-bicycle-at-auto-expo-2025

ಹೆಲೆನ್ ಬೈಸಿಕಲ್ ಅನ್ನು ಟಚ್ ಸ್ಕ್ರೀನ್ ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಆದ್ದರಿಂದ, ಈ ಹೆಲೆನ್ ಇ-ಸೈಕಲ್ ಆಗಮನವು ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಬೈಕುಗಳಿಗೆ ಸವಾಲೊಡ್ಡುವ ನಿರೀಕ್ಷೆಯಿದೆ. ಉಳಿದಂತೆ ಈ ಬೈಸಿಕಲ್ ಯಾವುದೇ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರಲಿಲ್ಲ.

ನಿಖರವಾಗಿ ಹೇಳುವುದಾದರೆ, ಇದು ಸಾಮಾನ್ಯ ಬೈಸಿಕಲ್‌ಗಳಿಗಿಂತ ಸಂಪೂರ್ಣವಾಗಿ ವಿಭಿನ್ನ ಶೈಲಿಯಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿಯವರನ್ನು ಆಶ್ಚರ್ಯದಿಂದ ಬೈಸಿಕಲ್ ಕಡೆಗೆ ನೋಡುವಂತೆ ಮಾಡಿದೆ. ಅಲ್ಲದೇ ಭಾರತದಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಆಕರ್ಷಕ ಉತ್ಪನ್ನಗಳನ್ನು ನಿರ್ಮಿಸುವ ಯುವಕರಿದ್ದಾರೆ ಎಂಬುದನ್ನು ಸಾಭೀತುಪಡಿಸಿದೆ.

helen-bikes-showcased-hubless-bicycle-at-auto-expo-2025

ಹೆಲೆನ್ ಕಂಪನಿ ತಯಾರಿಸಿದ ಇ-ಬೈಸಿಕಲ್ ತುಳಿಯಲು ಪೆಡಲ್, ಎರಡೂ ಚಕ್ರಗಳನ್ನು ಮುನ್ನಡೆಸಲು ಚೈನ್ ಸ್ಪ್ರಾಕೆಟ್ ಇಲ್ಲದಿರುವುದು ಎಂಥವರನ್ನು ಕೂಡ ಅಚ್ಚರಿಗೊಳಿಸುತ್ತದೆ. ಮುಖ್ಯವಾಗಿ ಇಂದಿನ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ಚೈನ್ ಅಥವಾ ಬೆಲ್ಟ್‌ ಡ್ರೈವ್‌ಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಈ ಬೈಸಿಕಲ್ ಇವೆಲ್ಲವುಗಳಿಗಿಂತ ಭಿನ್ನವಾಗಿದೆ.

ಪ್ರಧಾನಿ ಮೋದಿ ಬೈಸಿಕಲ್ ಅನ್ನು ಆಶ್ಚರ್ಯದಿಂದ ನೋಡಿದ್ದು ಕೂಡ ಇದೇ ಕಾರಣಕ್ಕೆ, ಪ್ರಧಾನಿ ಮಾತ್ರವಲ್ಲದೇ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋದಲ್ಲಿ ಭಾಗವಹಿಸಿದ ಹೆಚ್ಚಿನ ಜನರು ಬೈಸಿಕಲ್ ಅನ್ನು ಅಚ್ಚರಿಯಿಂದ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಎಲೆಕ್ಟ್ರಿಕ್ ಬೈಸಿಕಲ್ ಆಗಿದ್ದು, ಸಂಪೂರ್ಣವಾಗಿ ವಿದ್ಯುತ್‌ನಿಂದ ಚಲಿಸುತ್ತದೆ. ಹೊಸ ತಂತ್ರಜ್ಞಾನ ಹಾಗೂ ಡಿಸೈನ್‌ ಅಳವಡಿಸಿಕೊಂಡು ನೇರವಾಗಿ ಚಕ್ರಗಳಿಗೆ ಮೋಟಾರ್ ಅಳವಡಿಸಿರುವುದು ಇದರ ವಿಶೇಷತೆಯಾಗಿದೆ.

helen-bikes-showcased-hubless-bicycle-at-auto-expo-2025

ಈ ಸೈಕಲ್‌ಗೆ ಹೆಲೆನ್ ಎಂದು ಹೆಸರಿಡಲಾಗಿದ್ದು, ಪೆಡಲ್, ಚೈನ್ ಸ್ಪ್ರೋಕೆಟ್ ಒದಗಿಸದೇ ಬೈಸಿಕಲ್‌ನ ಚಕ್ರಗಳನ್ನು ಓಡಿಸಲು ಮೋಟರ್‌ಗಳನ್ನು ನೇರವಾಗಿ ಚಕ್ರಗಳಿಗೆ ಸಂಪರ್ಕಿಸಿ, ಸ್ಪೋಕ್ ರಾಡ್‌ಗಳನ್ನು ಒದಗಿಸುವ ಅಗತ್ಯವನ್ನು ಸಹ ತೆಗೆದುಹಾಕಲಾಗಿದೆ. ಹಾಗೆಯೇ, ಈ ಸೈಕಲ್‌ನಲ್ಲಿ ವಿಶೇಷ ಸಸ್ಪೆಂಷನ್ ಅನ್ನು ಸಹ ಒದಗಿಸಲಾಗಿದೆ. ಹೊಸ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಕಾರಣ ಯುವಕರನ್ನು ಸೆಳಯುವುದು ಖಚಿತ ಎನ್ನಲಾಗುತ್ತಿದೆ.

ಈ ಬೈಸಿಕಲ್ ತುಂಬಾ ಹಗುರವಾಗಿರುವ ಕಾರಣ ಯುವಕರು ಮತ್ತು ಹಿರಿಯರು ಯಾರು ಬೇಕಾದರೂ ಓಡಿಸಬಹುದು. ಹೆಲೆನ್ ಬೈಕ್ಸ್ ಇ-ಸೈಕಲ್ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಇದರ ನಿರ್ಮಾಣ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಲಾಗಿದ್ದು, ಎಲ್ಲವು ಅಂದುಕೊಂಡಂತಾದರೆ ಕಂಪನಿಯು ಹೆಲಿಕ್ಸ್ ಅನ್ನು ಶೀಘ್ರದಲ್ಲೇ ಮಾರಾಟ ಮಾಡಲಿದೆ. ಈ ಬೈಸಿಕಲ್‌ನ ಪ್ರಮುಖ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 27, 2025, 12:29 [IST]
English summary
Helen bikes showcased hubless bicycle at auto expo 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+