Hero: ಪ್ರತಿಸ್ಪರ್ಧಿಗಳಿಗೆ ನಡುಕ.. ಹೀರೋದಿಂದ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಾಗಿ ಪೇಟೆಂಟ್, ಶೀಘ್ರ ಬಿಡುಗಡೆ?

ಭಾರತದಲ್ಲಿ ಹೀರೋ ಮೋಟೋಕಾರ್ಪ್ (Hero MotoCorp) ನಂ.1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಮಾರಾಟಗೊಳಿಸುವ ಸ್ಪ್ಲೆಂಡರ್ ಸೇರಿದಂತೆ ಇತರೆ ಬೈಕ್‌ಗಳನ್ನು ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಸದ್ಯ, ಹೀರೋ ಕಂಪನಿಯು ಎದುರಾಳಿ ಕಂಪನಿಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್‌ನ ವಿನ್ಯಾಸಕ್ಕಾಗಿ (ಡಿಸೈನ್) ಪೇಟೆಂಟ್ ಸಲ್ಲಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೀರೋ ಮೋಟೋಕಾರ್ಪ್ ಪೇಟೆಂಟ್‌ಗಾಗಿ ಸಲ್ಲಿಸುವ ಇ-ಮೋಟಾರ್‌ಸೈಕಲ್‌ನ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು ನೂತನ ಝೀರೋ ಡರ್ಟ್ ಎಲೆಕ್ಟ್ರಿಕ್ ಬೈಕ್‌ನಂತೆ ತೋರುತ್ತಿದೆ. ಈಗಾಗಲೇ, ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಝೀರೋ ಮೋಟಾರ್‌ಸೈಕಲ್ಸ್‌ನಲ್ಲಿ ಹೀರೋ ಕಂಪನಿಯು ಪಾಲುದಾರಿಕೆ ಹೊಂದಿರುವುದರಿಂದ ಈ ವಿಚಾರವು ಯಾವುದೇ ರೀತಿಯಲ್ಲಿ ಆಶ್ಚರ್ಯವನ್ನು ತರಿಸುವುದಿಲ್ಲ.

Hero First Electric Bike Launch Soon Company Files Design Patent Details

ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಪೇಟೆಂಟ್‌ ಫೋಟೋದಲ್ಲಿ ನೂತನ ಎಲೆಕ್ಟ್ರಿಕ್ ಬೈಕ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಪ್ರಮುಖವಾಗಿ ನ್ಯಾರೋ ಸೀಟ್, ಹೈ ಫ್ರಂಟ್ ಫೆಂಡರ್, ಸ್ವಿಂಗಾರ್ಮ್, ಮಿನಿಮಲ್ ಸೈಡ್ ಪ್ಯಾನೆಲ್‌ಗಳು, ಟ್ಯೂಬ್ಯುಲರ್ ಹ್ಯಾಂಡಲ್‌ಬಾರ್ ಮತ್ತು ಪ್ಲಾಸ್ಟಿಕ್ ಲಿವರ್ ಗಾರ್ಡ್‌ಗಳನ್ನು ಪಡೆದಿದೆ

ನೂತನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಮುಂಭಾಗದಲ್ಲಿ ಬ್ಯಾಟರಿ ಪ್ಯಾಕ್‌ನ್ನು ಇರಿಸುವ ನಿರೀಕ್ಷೆಯಿದೆ. ಮಿಡ್-ಮೌಂಟೆಡ್ ಮೋಟಾರ್‌ & ಚೈನ್ ಡ್ರೈವ್ ಅನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಮುಂಭಾಗ (ಫ್ರಂಟ್) ಲಾಂಗ್ ಟ್ರಾವೆಲ್ ಫೋರ್ಕ್ಸ್ - ಹಿಂಭಾಗ (ರೇರ್) ಲಿಂಕ್ಡ್ ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್ ಹಾಗೂ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಹೀರೋ ಮೋಟೋಕಾರ್ಪ್ ನೂತನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ವಿನ್ಯಾಸಕಾಗಿ ಪೇಟೆಂಟ್‌ ಸಲ್ಲಿಸಿರುವುದು ಬಿಟ್ಟರೆ, ಬೇರೆ ಯಾವ ವಿಚಾರಗಳನ್ನು ಬಹಿರಂಗಪಡಿಸಿಲ್ಲ. ಎಲ್ಲವು ಅಂದುಕೊಂಡಂತೆ ನಡೆದರೆ, ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಇ-ಬೈಕ್ ಮಾರಾಟಕ್ಕೆ ಬರಲಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಬಿಡುಗಡೆಯಾದ ಮೇಲೆ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಯೂ ಇದೆ.

ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಕೂಡ ಮಾರಾಟಕ್ಕೆ: ದೇಶೀಯ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್ ಇವಿಯನ್ನು ಬಿಡುಗಡೆಗೊಳಿಸುವುದು ಹೀರೋದ ಬಹುದೊಡ್ಡ ಯೋಜನೆಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಈ ಸಂಬಂಧ ರಾಜಸ್ಥಾನದಲ್ಲಿರುವ 'ಹೀರೋ ಟೆಕ್ನಾಲಜಿ ಸೆಂಟರ್‌'ನಲ್ಲಿ ಅಧ್ಯಯನಗಳು ನಡೆಯುತ್ತಿವೆ ಎಂದು ವರದಿಯಾಗಿದ್ದು, ನೂತನ ಸ್ಪ್ಲೆಂಡರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ 2027ರಲ್ಲಿ ಮಾರಾಟಕ್ಕೆ ಬರುವ ನೀರಿಕ್ಷೆಯಿದೆ.

ಒಂದೊಮ್ಮೆ ಹೊಸ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಂಡರೆ, ಅದು 4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಆಯ್ಕೆಯನ್ನು ಹೊಂದಿರಲಿದೆ. ಭರ್ತಿ ಚಾರ್ಜ್‌ನಲ್ಲಿ 180 ಕಿಲೋಮೀಟರ್‌ಗೂ ಹೆಚ್ಚಿನ ರೇಂಜ್ (ಮೈಲೇಜ್) ಕೊಡಬಹುದು ಎನ್ನಲಾಗಿದೆ. ರೂ.1 ಲಕ್ಷ ದರದಲ್ಲಿ ಖರೀದಿಗೂ ದೊರೆಯಬಹುದು ಎಂದು ಅಂದಾಜಿಸಲಾಗಿದೆ.

ಗ್ರಾಹಕರ ಬೇಡಿಕೆಯನ್ನು ಪೂರೈಸಲು ನೂತನ ಹೀರೋ ಸ್ಪ್ಲೆಂಡರ್ (Hero Splendor) ಇ-ಮೋಟಾರ್‌ಸೈಕಲ್‌ನ 2,00,000 ಯುನಿಟ್‌ಗಳನ್ನು ಉತ್ಪಾದಿಸಲು ಕಂಪನಿಯು ಉದ್ದೇಶಿಸಿದೆ ಎಂದು ಹೇಳಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಬೈಕ್ ಮಾರಾಟಕ್ಕೆ ಬಂದ ಮೇಲೆ ಹೊಸ ಕ್ರಾಂತಿ ಸೃಷ್ಟಿಸುವುದರಲ್ಲಿ ಎರಡು ಮಾತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 28, 2025, 10:49 [IST]
English summary
Hero first electric bike launch soon company files design patent details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+