Hero Glamour 125 vs Honda Shine 125: ಇವೆರೆಡು ಜನಪ್ರಿಯ ಬೈಕ್‌ಗಳು.. ನಿಮಗೆ ಯಾವುದು ಲೈಕ್ ಆಗುತ್ತೆ?

ಹೀರೋ ಗ್ಲಾಮರ್ 125 ಹಾಗೂ (Hero Glamour 125) ಹಾಗೂ ಹೋಂಡಾ ಶೈನ್ 125 (Honda Shine 125) ಜನಪ್ರಿಯ ಮೋಟಾರ್‌ಸೈಕಲ್‌ ಎಂದೇ ಹೆಸರುವಾಸಿಯಾಗಿವೆ. ಇತ್ತೀಚೆಗೆ, ಈ ಬೈಕ್‌ಗಳನ್ನು ಒಂದಷ್ಟು ನವೀಕರಿಸಿಯೂ ಮಾರಾಟಕ್ಕೆ ತರಲಾಗಿತ್ತು. ಇವುಗಳು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತವೆ. ಅದರಲ್ಲೂ ದಿನಬಳಕೆಗೆ ಸಾಕಷ್ಟು ಸೂಕ್ತವಾಗಲಿವೆ. ನಾವಿಲ್ಲಿ, ಈ ಮೋಟಾರ್‌ಸೈಕಲ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಲೆ (Price): ಹೀರೋ ಗ್ಲಾಮರ್ 125 ಬೈಕ್ ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ರೂ.84,698 ದಿಂದ ರೂ.90,698 ಬೆಲೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ಹೋಂಡಾ ಶೈನ್ 125 ಮೋಟಾರ್‌ಸೈಕಲ್‌ ರೂ.84,551 ರಿಂದ ರೂ.91,072 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇವೆರೆಡು ಬೈಕ್‌ಗಳ ಬೆಲೆಯೂ ಹೆಚ್ಚು-ಕಮ್ಮಿ ಒಂದೇ ರೀತಿಯಲಿದೆ.

Hero Glamour 125 vs Honda Shine 125 Price Specs And Features Comparison Details

ವಿನ್ಯಾಸ & ಬಣ್ಣಗಳು (Design & Colors): ಈ ಮೋಟಾರ್‌ಸೈಕಲ್‌ಗಳು ಸರಳವಾದ ವಿನ್ಯಾಸವನ್ನು ಹೊಂದಿವೆ. ಹೀರೋ ಗ್ಲಾಮರ್ ಕ್ಯಾಂಡಿ ಬ್ಲೇಜಿಂಗ್ ರೆಡ್, ಬ್ಲ್ಯಾಕ್ ಮೆಟಾಲಿಕ್ ಸಿಲ್ವರ್ & ಟೆಕ್ನೋ ಬ್ಲೂ ಮ್ಯಾಟ್ ಬ್ಲ್ಯಾಕ್ ಎಂಬ 3 ಬಣ್ಣಗಳನ್ನು ಪಡೆದಿದೆ. ಹಾಗೆಯೇ ಹೋಂಡಾ ಶೈನ್ ಪರ್ಲ್ ಇಗ್ನಿಯಸ್ ಬ್ಲ್ಯಾಕ್ & ಪರ್ಲ್ ಸೈರನ್ ಬ್ಲೂ ಸೇರಿದಂತೆ 6 ಬಣ್ಣಗಳೊಂದಿಗೆ ಸಿಗುತ್ತದೆ. ಇವೆರಡರಲ್ಲಿ 'ಶೈನ್' ಗರಿಷ್ಠ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance): ಹೊಚ್ಚ ಹೊಸ ಹೀರೋ ಗ್ಲಾಮರ್ 125 ಹಾಗೂ ಹೋಂಡಾ ಶೈನ್ 125 ಬೈಕ್‌ಗಳನ್ನು ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಲಾಗಿದೆ. ಇದು ಇಂಗಾಲದ ಹೊರಸೂಸುವಿಕೆಯ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದರೆ, ಸವಾರನನ್ನು ಎಚ್ಚರಿಸಲು ನೆರವಾಗುತ್ತದೆ.

Hero Glamour 125 vs Honda Shine 125 Price Specs And Features Comparison Details

ಈ ಹೀರೋ ಗ್ಲಾಮರ್ 125 ಬೆಲೆಗೆ ತಕ್ಕಂತೆ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದು 124.7 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 10 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 63 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಅದೇ ರೀತಿಯಲ್ಲಿ ಹೋಂಡಾ ಶೈನ್ 125 ಮೋಟಾರ್‌ಸೈಕಲ್‌, 123.94 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 10.63 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 11 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 55 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇವೆರೆಡು ಬೈಕ್‌ಗಳು ಒಂದೇ ರೀತಿಯ ಕಾರ್ಯಕ್ಷಮತೆಯನ್ನು ಹೊಂದಿದ್ದು, ಇಂಧನ ದಕ್ಷತೆಯಲ್ಲಿ ಹೀರೋ ಗ್ಲಾಮರ್ ಕೊಂಚ ಮಟ್ಟಿಗೆ ಮುಂದಿದೆ.

Hero Glamour 125 vs Honda Shine 125 Price Specs And Features Comparison Details

ವೈಶಿಷ್ಟ್ಯಗಳು (Features): ಇವೆರೆಡು ಮೋಟಾರ್‌ಸೈಕಲ್‌ಗಳು ಕೂಡ ಅತ್ಯಾಧುನಿಕವಾದ ವೈಶಿಷ್ಟ್ಯವನ್ನು ಹೊಂದಿವೆ. ಹೀರೋ ಗ್ಲಾಮರ್ 125 ಡಿಜಿಟಲ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು 18-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೋಂಡಾ ಶೈನ್ 125 ಬೈಕ್ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಡ್ರಮ್/ ಡಿಸ್ಕ್ ಹಾಗೂ ಹಿಂದೆ (ರೇರ್) ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 25, 2025, 10:20 [IST]
English summary
Hero glamour 125 vs honda shine 125 price specs and features comparison details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+