ಸ್ವದೇಶಿ ಬ್ರಾಂಡ್ ಬೈಕ್‌ಗಳಿಗೆ ಮುಗಿಬಿದ್ದ ಜನ: 5 ಹೊಸ ವಾಹನಗಳ ಬಿಡುಗಡೆ: ಜನವರಿ ದಾಖಲೆ ಮಾರಾಟ!
ಪ್ರಮುಖ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ (Hero MotoCorp), ಜನವರಿ 2025 ರಲ್ಲಿ ಬರೋಬ್ಬರಿ 4,42,873 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇದು ರಫ್ತು ಸೇರಿದಂತೆ ದೇಶೀಯ ಒಟ್ಟಾರೆ ಮಾರಾಟವಾಗಿದ್ದು, ಕಂಪನಿಯು ಕೇವಲ ಭಾರತೀಯ ಮಾರುಕಟ್ಟೆ ಒಂದರಲ್ಲೆ 4,12,378 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಈ ಮಾರಾಟ ಅಂಕಿಅಂಶಗಳು ಭಾರತದಲ್ಲಿ ಕಂಪನಿಯ ಮೇಲೆ ಗ್ರಾಹಕರಿಗಿರುವ ವಿಶ್ವಾಸಾರ್ಹತೆಯನ್ನು ಎತ್ತಿತೋರಿಸುತ್ತದೆ. ನಮ್ಮ ಅತಿಹೆಚ್ಚು ಮೈಲೇಜ್ ನೀಡುವ ಬಜೆಟ್ ಬೈಕ್‌ಗಳು ಹಾಗೂ ಸ್ಕೂಟರ್‌ಗಳು ಎಂದಿನಂತೆ ಅತಿಹೆಚ್ಚು ಮಾರಾಟ ಕಂಡಿವೆ ಎಂದು ಕಂಪನಿ ಹೇಳಿದೆ.
ಇನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಭಾರತದಿಂದ 30,495 ಯುನಿಟ್ ವಾಹನಗಳನ್ನು ರಫ್ತು ಮಾಡಿದೆ. ಕಳೆದ ವರ್ಷ (ಜನವರಿ 2024) ಇದೆ ಅವಧಿಯಲ್ಲಿ ಮಾರಾಟವಾದ ವಾಹನಗಳಿಗೆ ಹೋಲಿಸಿಕೊಂಡರೆ ಶೇ141 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಬಾಂಗ್ಲಾದೇಶ ಮತ್ತು ಕೊಲಂಬಿಯಾ ಸೇರಿದಂತೆ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಬಲವಾದ ಬೇಡಿಕೆಯಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ಕೇವಲ ಪೆಟ್ರೋಲ್ ಚಾಲಿತ ವಾಹನಗಳು ಮಾತ್ರವಲ್ಲದೆ ಹೀರೋ ಮೋಟೋಕಾರ್ಪ್‌ನ ಹೊಸ ಎಲೆಕ್ಟ್ರಿಕ್ ವಾಹನ (ಇವಿ) ಬ್ರ್ಯಾಂಡ್ ಆಗಿರುವ ವಿಡಾ, ರೂ. 96,000 ಬೆಲೆಯಿಂದ ಪ್ರಾರಂಭವಾಗುವ 'ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್'ನ 6,669 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇದನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದ್ದು, ಆಧುನಿಕ ಡಿಸೈನ್ ಹಾಗೂ ಆಕರ್ಷಕ ಫೀಚರ್ಸ್ ಒಳಗೊಂಡಿದೆ.
5 ಹೊಸ ಬಿಡುಗಡೆಗಳು: ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ತನ್ನ ಮಾಡೆಲ್‌ಗಳನ್ನು ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಿದೆ. ಅಲ್ಲದೇ ಈಗಾಗಲೇ ಹೆಚ್ಚಿನ ಬೇಡಿಕೆ ಹೊಂದಿರುವ ಅದೇ ಮಾಡಲ್‌ಗಳನ್ನು ಜನವರಿ 2025 ರಲ್ಲಿ ಹೀರೋ ಮೋಟೋಕಾರ್ಪ್ ಬಹು ವಿಭಾಗಗಳಲ್ಲಿ ತನ್ನ ಐದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುತ್ತಾ, ಎಕ್ಸ್‌ಟ್ರೀಮ್ 250R (Xtreme 250R) ಮತ್ತು ಎಕ್ಸ್‌ಪಲ್ಸ್ 210 (Xpulse 210) ಹಾಗೆಯೇ ಸ್ಕೂಟರ್ ವಿಭಾಗದಲ್ಲಿ ಹೊಸ ಡೆಸ್ಟಿನಿ 125 (Destini 125), ಕ್ಸೂಮ್ 125 (Xoom 125) ಮತ್ತು ಕ್ಸೂಮ್ 160-ಮ್ಯಾಕ್ಸಿ ಸ್ಕೂಟರ್ (Xoom 160 - a maxi scooter) ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಸ್ಕೂಟರ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದೆ.
ಹೀರೋ ಮೋಟೋಕಾರ್ಪ್‌ನ ಮೋಟಾರ್‌ಸ್ಪೋರ್ಟ್ಸ್ ತಂಡವಾದ ಹೀರೋ ಮೋಟೋಸ್ಪೋರ್ಟ್ಸ್ ಟೀಮ್ ರ್ಯಾಲಿ, ಡಕಾರ್ ರ್ಯಾಲಿ 2025 ಅನ್ನು ಪ್ರಭಾವಶಾಲಿ 7 ನೇ ಸ್ಥಾನದಲ್ಲಿ ಪೂರ್ಣಗೊಳಿಸಿದೆ. ಜಾಗತಿಕ ರ್ಯಾಲಿ ರೇಸಿಂಗ್‌ನಲ್ಲಿ ಅಸಾಧಾರಣ ಪ್ರತಿಸ್ಪರ್ಧಿಯಾಗಿ ತನ್ನ ಖ್ಯಾತಿಯನ್ನು ಗಟ್ಟಿಗೊಳಿಸಿದೆ. 2024 ರಲ್ಲಿ ಅವರ ಗಮನಾರ್ಹ 2 ನೇ ಸ್ಥಾನದ ನಂತರ ಒಂಬತ್ತು ವರ್ಷಗಳಲ್ಲಿ ಇದು ತಂಡದ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ ಎಂದು ಹೀರೋ ತಿಳಿಸಿದೆ.

ಒಟ್ಟಾರೆ ಹೀರೋ ಕಂಪನಿಯು ಕೇವಲ ಭಾರತೀಯ ಮಾರುಕಟ್ಟೆ ಒಂದರಲ್ಲೆ 4,12,378 ಯುನಿಟ್ ವಾಹನಗಳನ್ನು ಮಾರಾಟ ಮಾಡುವ ಮೂಲಕ, ಪ್ರತಿಸ್ಪರ್ಧಿ ಕಂಪನಿಗಳಿಗೆ ಸರಿಯಾದ ಪೈಪೋಟಿ ನೀಡುತ್ತಿದೆ. ಅತಿಹೆಚ್ಚು ಮೈಲೇಜ್ ನೀಡುವ ಬಜೆಟ್ ಬೈಕ್‌ಗಳು ಭಾರತದಲ್ಲಿ ಕಂಪನಿಗೆ ಬೆನ್ನೆಲುಬಾಗಿ ನಿಂತಿದ್ದು, ಇದೆ ಮಾರಾಟ ಮುಂದುವರಿಯುವುದಾಗಿ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








