ಜಿಎಸ್‌ಟಿ ಬದಲಾವಣೆ.. Hero ಗುಡ್‌ನ್ಯೂಸ್.. ಸ್ಪ್ಲೆಂಡರ್ ಸೇರಿ ವಿವಿಧ ಟೂ-ವೀಲರ್‌ಗಳ ಬೆಲೆ ರೂ.16,000 ವರೆಗೆ ಇಳಿಕೆ!

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿ ಹೀರೋ ಮೋಟೋಕಾರ್ಪ್ (Hero MotoCorp), ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು 350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವಿರುವ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಕಡಿಮೆ ಮಾಡಿದೆ. ಇದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಕಂಪನಿಯು ಘೋಷಣೆ ಮಾಡಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ಗ್ರಾಹಕರಿಗೆ ದೊಡ್ಡ ಮಟ್ಟದ ಪ್ರಯೋಜನಗಳು ಲಭ್ಯವಾಗಲಿದೆ.

ಪರಿಷ್ಕೃತ ದರಗಳು ಸೆಪ್ಟೆಂಬರ್ 22 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಹೀರೋದ ಬಹುತೇಕ ಎಲ್ಲ ದ್ವಿಚಕ್ರ ವಾಹನಗಳಿಗೂ ಜಿಎಸ್‌ಟಿ ಕಡಿತದ ಪ್ರಯೋಜನಗಳು ದೊರೆಯಲಿದೆ. ವಿಶೇಷವಾಗಿ ಡೆಸ್ಟಿನಿ, ಗ್ಲಾಮರ್ ಎಕ್ಸ್, ಹೆಚ್ಎಫ್ ಡಿಲಕ್ಸ್, ಕರಿಜ್ಮಾ, ಪ್ಯಾಶನ್ ಪ್ಲಸ್, ಪ್ಲೆಷರ್ ಪ್ಲಸ್, ಸ್ಪ್ಲೆಂಡರ್ ಪ್ಲಸ್, ಜೂಮ್ ಹಾಗೂ ಎಕ್ಸ್‌ಟ್ರೀಮ್‌ಗಳ ಬೆಲೆಯೂ ರೂ.16,000 ವರೆಗೆ ಇಳಿಕೆಯಾಗಿದೆ.

Hero Price Cuts Up To Rs 16 000 Splendor HF Deluxe Glamour X Passion Destini To Xoom

ಯಾವುದಕ್ಕೆ ಎಷ್ಟು?

ಡೆಸ್ಟಿನಿ 125 - ರೂ.7,197
ಗ್ಲಾಮರ್ ಎಕ್ಸ್ - ರೂ.7,813
ಡಿಲಕ್ಸ್ - ರೂ.5,805
ಕರಿಜ್ಮಾ 210 - ರೂ.15,743
ಪ್ಯಾಶನ್ ಪ್ಲಸ್ - ರೂ.6,500
ಪ್ಲೆಷರ್ ಪ್ಲಸ್ - ರೂ.6,417
ಸ್ಪ್ಲೆಂಡರ್ ಪ್ಲಸ್ - ರೂ.6,820
ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ - ರೂ.7,254
ಜೂಮ್ 110 - ರೂ.6,597
ಜೂಮ್ 125 - ರೂ.7,291
ಜೂಮ್ 160 - ರೂ.11,602
ಎಕ್ಸ್‌ಟ್ರೀಮ್‌ 210 - ರೂ.14,516
ಎಕ್ಸ್‌ಟ್ರೀಮ್‌ 125ಆರ್ - ರೂ.8,010
ಎಕ್ಸ್‌ಟ್ರೀಮ್‌ 160ಆರ್ 4ವಿ - ರೂ.10,985
ಎಕ್ಸ್‌ಟ್ರೀಮ್‌ 250ಆರ್ - ರೂ.14,055

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೀರೋ ಮೋಟೋಕಾರ್ಪ್‌ನ ಸಿಇಒ ವಿಕ್ರಮ್ ಕಸ್ಬೇಕರ್ ಅವರು, ದೇಶದ ಆರ್ಥಿಕತೆಯನ್ನು ಜಿಎಸ್‌ಟಿ ಸುಧಾರಣೆಯು ಉತ್ತೇಜಿಸುತ್ತದೆ. ಭಾರತೀಯ ಕುಟುಂಬಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ, ತಮ್ಮ ದಿನನಿತ್ಯದ ಅಗತ್ಯಗಳಿಗಾಗಿ ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ಅವರಿಗೆ ಹೆಚ್ಚಿನ ಅನುಕೂಲವಾಗಲಿದೆ' ಎಂದು ಹೇಳಿದ್ದಾರೆ.

Hero Price Cuts Up To Rs 16 000 Splendor HF Deluxe Glamour X Passion Destini To Xoom

ಇದೇ ತಿಂಗಳು ಹೀರೋ ಜೂಮ್ 160 (Hero Xoom 160) ಸ್ಕೂಟರ್‌ನ ವಿತರಣೆ ಶುರು!

ಈ ಸ್ಕೂಟರ್, ರೂ.1.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೊಸ ಜಿಎಸ್‌ಟಿ ದರಗಳು ಜಾರಿಯಾದ ಬಳಿಕ ರೂ.1.37 ಲಕ್ಷ ಬೆಲೆಗೆ ದೊರೆಯುವ ನಿರೀಕ್ಷೆಯಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್, ವಿಂಡ್‌ಸ್ಕ್ರೀನ್‌ ಮತ್ತು ಸಿಂಗಲ್ ಪೀಸ್ ಸೀಟ್‌ನ್ನು ಒಳಗೊಂಡಿದೆ. ಮ್ಯಾಟ್ ರೇನ್‌ಫಾರೆಸ್ಟ್ ಗ್ರೇ, ಸಮ್ಮಿಟ್ ವೈಟ್ ಹಾಗೂ ಕ್ಯಾನ್ಯನ್ ರೆಡ್ ಬಣ್ಣಗಳೊಂದಿಗೂ ಸಿಗುತ್ತದೆ.

ನೂತನ ಜೂಮ್ 156 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 14.6 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 14 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 40 ಕಿ.ಮೀ ವರೆಗೆ ನೀಡಬಹುದು. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 5.9 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

Hero Price Cuts Up To Rs 16 000 Splendor HF Deluxe Glamour X Passion Destini To Xoom

ಇದು ಹಲವು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ಐ3ಎಸ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್, ಸ್ಮಾರ್ಟ್ ಕೀ ವಿತ್ ಕೀಲೆಸ್ ಇಗ್ನಿಷನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರಿಮೋಟ್ ಸೀಟ್ ಅನ್‌ಲಾಕ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ನ್ನು ತನ್ನದಾಗಿಸಿಕೊಂಡಿದೆ. 142 ಕೆಜಿ ತೂಕವು ಇದೆ.

ಈ ಸ್ಕೂಟರ್ ಪ್ರಯಾಣಿಕರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) & ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. 12 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

More from DriveSpark

Article Published On: Wednesday, September 10, 2025, 16:48 [IST]
English summary
Hero price cuts up to rs 16000 splendor hf deluxe glamour x passion destini to xoom
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+