ಹೊಸ ಓಲಾ ರೋಡ್‌ಸ್ಟರ್ ಎಕ್ಸ್ ಇ-ಬೈಕ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗುತ್ತಾ ಹೀರೋ ಸ್ಪ್ಲೆಂಡರ್ ಇವಿ?
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ (Ola Electric), 'ರೋಡ್‌ಸ್ಟರ್ ಎಕ್ಸ್' ಇ-ಮೋಟಾರ್‌ಸೈಕಲ್ ಬಿಡುಗಡೆಯೊಂದಿಗೆ ಹೊಸ ಅಧ್ಯಯನವನ್ನು ಶುರು ಮಾಡಿದೆ. ನೂತನ ಎಲೆಕ್ಟ್ರಿಕ್ ಬೈಕ್ ಸ್ಟ್ಯಾಂಡರ್ಡ್ ರೋಡ್‌ಸ್ಟರ್ ಎಕ್ಸ್ (Roadster X) ಮತ್ತು ರೋಡ್‌ಸ್ಟರ್ ಎಕ್ಸ್ ಪ್ಲಸ್ (Roadster X) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಮಾರಾಟಕ್ಕೆ ಬಂದಿದೆ. ರೋಡ್‌ಸ್ಟರ್ ಎಕ್ಸ್ ರೂ.75,000 ರಿಂದ ರೂ.95,000 ಬೆಲೆಯನ್ನು ಹೊಂದಿದ್ದರೆ, ರೋಡ್‌ಸ್ಟರ್ ಎಕ್ಸ್ ಪ್ಲಸ್ ರೂ.1.05 ಲಕ್ಷದಿಂದ ರೂ.1.55 ಲಕ್ಷ ಎಕ್ಸ್- ಶೋರೂಂ ದರವನ್ನು ಪಡೆದಿದೆ.
ಸ್ಟ್ಯಾಂಡರ್ಡ್ ಓಲಾ ರೋಡ್‌ಸ್ಟರ್ ಎಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾಡೆಲ್, 2.5 ಕೆಡಬ್ಲ್ಯೂಹೆಚ್, 3.5 ಕೆಡಬ್ಲ್ಯೂಹೆಚ್ & 4.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 252 ಕಿ.ಮೀ ವರೆಗೂ ರೇಂಜ್ (ಮೈಲೇಜ್) ಕೊಡುತ್ತದೆ. 125 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೂಂಡಿದೆ. ವಿಶೇಷವಾಗಿ ರಿವರ್ಸ್ ಮೋಡ್‌ನ್ನು ಪಡೆದಿದೆ.

ಈ ರೋಡ್‌ಸ್ಟರ್ ಎಕ್ಸ್ ಮಾಡೆಲ್, ಎಲ್ಇಡಿ ಲ್ಯಾಂಪ್ಸ್, 4.3-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ, ಓಲಾ ಮ್ಯಾಪ್ ನ್ಯಾವಿಗೇಷನ್, ಕ್ರೂಸ್ ಕಂಟ್ರೋಲ್ ಮತ್ತು ಒಟಿಎ ಅಪ್‌ಡೇಟ್‌ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ & ಡ್ರಮ್ ಬ್ರೇಕ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಒಳಗೊಂಡಿದೆ.
ಓಲಾ ರೋಡ್‌ಸ್ಟರ್ ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಬೈಕ್ ಮಾಡೆಲ್ ಕುರಿತಂತೆ ಹೇಳುವುದಾದರೆ, ಇದು 4.5 ಕೆಡಬ್ಲ್ಯೂಹೆಚ್ ಹಾಗೂ 9.1 ಕೆಡಬ್ಲ್ಯೂಹೆಚ್ ಸಾಮರ್ಥ್ಯವನ್ನು ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 501 ಕಿ.ಮೀ ವರೆಗೆ ಕ್ರಮಿಸುತ್ತದೆ. ಜೊತೆಗೆ ಸ್ಟ್ಯಾಂಡರ್ ರೋಡ್‌ಸ್ಟರ್ ಎಕ್ಸ್ ಮಾಡೆಲ್‌ನಂತೆ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ತನ್ನದಾಗಿಕೊಂಡಿದೆ.
ಸದ್ಯ, ಓಲಾ ರೋಡ್‌ಸ್ಟರ್ ಎಕ್ಸ್ ಇ-ಬೈಕ್‌ಗೆ ದೊಡ್ಡ ಕಂಪನಿಗಳಿಂದ ಪ್ರಬಲವಾದ ಸ್ಪರ್ಧೆಯೊಡ್ಡಲು ಯಾವುದೇ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಲ್ಲ. ಇದು ಕಂಪನಿಗೆ ಧನಾತ್ಮಕ ಅಂಶವಾಗಿ ಮಾರ್ಪಟ್ಟಿದೆ. ಆದರೆ, ಒಂದೊಮ್ಮೆ ಹೀರೋ ಮೋಟೋಕಾರ್ಪ್ (Hero MotoCorp) ನೂತನ ಸ್ಪ್ಲೆಂಡರ್ ಇ-ಬೈಕ್‌ನ್ನು ಮಾರಾಟಕ್ಕೆ ತಂದರೆ, ಭಾರೀ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.
ಪರಿಸರ ಸ್ನೇಹಿಯಾಗಿರುವ 'ಸ್ಪ್ಲೆಂಡರ್ ಇವಿ'ಯನ್ನು ಬಿಡುಗಡೆಗೊಳಿಸುವುದು ಹೀರೋದ ಬಹುದೊಡ್ಡ ಯೋಜನೆಗಳಲ್ಲಿ ಒಂದಾಗಿದೆ. ಅದಕ್ಕಾಗಿ ಕಂಪನಿಯು ಕೂಡ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. ಹೀರೋ ಕಂಪನಿಯ ಯೋಜಿತ ಕಾರ್ಯಗಳೆಲ್ಲವೂ ಸುಸೂತ್ರವಾಗಿ ಜರುಗಿದರೆ, ನೂತನ ಹೀರೋ ಸ್ಪ್ಲೆಂಡರ್ ಇ-ಬೈಕ್, 2027ರ ಆರಂಭದಲ್ಲಿ ಮಾರಾಟಕ್ಕೆ ಬರುವ ಎಲ್ಲ ಸಾಧ್ಯತೆಗಳಿವೆ.
ಮುಂಬರಲಿದೆ ಎನ್ನಲಾದ ಹೀರೋ ಸ್ಪ್ಲೆಂಡರ್ ಇವಿ, 4 ಕೆಡಬ್ಲ್ಯೂಹೆಚ್ & 6 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರುವ ನಿರೀಕ್ಷೆಯಿದೆ. ಪೂರ್ತಿ ಚಾರ್ಜ್‌ನಲ್ಲಿ 180 ಕಿ.ಮೀ ವರೆಗೆ ಕ್ರಮಿಸಬಬಹುದು ಎಂದು ಅಂದಾಜಿಸಲಾಗಿದೆ. ಇದರೊಟ್ಟಿಗೆ ರೂ.1 ಲಕ್ಷಕ್ಕಿಂತ ಕಡಿಮೆ ಎಕ್ಸ್-ಶೋರೂಂ ದರದಲ್ಲೂ ಮಾರಾಟಕ್ಕೆ ಬರಬಹುದು ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications