Hero: 70 ಕಿ.ಮೀ ಮೈಲೇಜ್.. ಕಡಿಮೆ ಬೆಲೆ, ಆದರೂ ಹೀರೋ ಸ್ಪ್ಲೆಂಡರ್ ಕೊಳ್ಳಲು ಗ್ರಾಹಕರ ಹಿಂದೇಟು.. ಕಾರಣವೇನು?
ಹೀರೋ ಸ್ಪ್ಲೆಂಡರ್ (Hero Splendor) ಪ್ರಖ್ಯಾತ ಬೈಕ್ ಆಗಿದ್ದು, ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆ, ದೇಶೀಯ ಮಾರುಕಟ್ಟೆಯಲ್ಲಿ ನಂಬರ್ 1 ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಿದೆ. ಅದರ ಹೊರತಾಗಿಯೂ ಈ ಫೆಬ್ರವರಿಯಲ್ಲಿ 'ಹೀರೋ ಸ್ಪ್ಲೆಂಡರ್' ಮಾರಾಟವು ತೀವ್ರತರದಲ್ಲಿ ಕುಸಿತವಾಗಿದೆ. ಬನ್ನಿ.. ಎಷ್ಟು ಬೈಕ್‌ಗಳು ಬಿಕರಿಯಾಗಿವೆ. ಮಾರಾಟ ಪ್ರಮಾಣ ಇಳಿಕೆಯಾಗಲು ಕಾರಣವೇನು ಎಂಬುದನ್ನು ತಿಳಿಯೋಣ.
ಕಳೆದ ತಿಂಗಳು (ಫೆಬ್ರವರಿ-2025) ಹೀರೋ ಮೋಟೊಕಾರ್ಪ್ ಬರೋಬ್ಬರಿ 193,791 ಯುನಿಟ್ 'ಸ್ಪ್ಲೆಂಡರ್' ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯ ಮಾರಾಟ ಪ್ರಮಾಣಕ್ಕೆ (263,163 ಯುನಿಟ್‌ಗಳು) ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ -35.79% ಕುಸಿತವಾಗಿದೆ. ಈ ಜನವರಿಯಲ್ಲಿ ಮಾರಲ್ಪಟ್ಟ 245,315 ಯುನಿಟ್‌ಗಳಿಗೆ ಹೋಲಿಸಿದರೆ, ತಿಂಗಳಿಂದ ತಿಂಗಳಿಗೂ -26.58% ಇಳಿಮುಖವಾಗಿದೆ.

ಆದರೆ, ಈ ಮಾರಾಟ ಅಂಕಿಸಂಖ್ಯೆಯು ಇಳಿಕೆಯಾಗಿರುವ ಬಗ್ಗೆ ಕಂಪನಿಯು ಯಾವುದೇ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಮುಂಬರುವ ದಿನಗಳಲ್ಲಿ ಮಾರಾಟ ಪ್ರಮಾಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಹಬ್ಬಗಳು ಇಲ್ಲದೇ ಇರುವುದು ಹಾಗೂ ಬೇರೆ ಬ್ರ್ಯಾಂಡ್‌ನ ಪ್ರೀಮಿಯಂ ಬೈಕ್‌ಗಳು ಕೊಂಡುಕೊಳ್ಳಲು ಯುವಕರು ಆಸಕ್ತಿ ತೋರಿಸುತ್ತಿರುವುದು ಸ್ಪ್ಲೆಂಡರ್ ಮಾರಾಟ ಸಂಖ್ಯೆ ಕುಸಿತವಾಗಲು ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಹೀರೋ ಮೋಟೊಕಾರ್ಪ್ ಕೂಡ ಸ್ಪ್ಲೆಂಡರ್ ಮಾರಾಟವನ್ನು ಹೆಚ್ಚಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜನಪ್ರಿಯ 'ಸ್ಪ್ಲೆಂಡರ್ ಪ್ಲಸ್' ಮೋಟಾರ್‌ಸೈಕಲ್‌ನ್ನು ಒಂದಷ್ಟು ನವೀಕರಿಸಿ, ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಿದ್ಧವಾಗುತ್ತಿದೆ. ಈಗಾಗಲೇ, 2025ರ ಹೊಚ್ಚ ಹೊಸ 'ಹೀರೋ ಸ್ಪ್ಲೆಂಡರ್ ಪ್ಲಸ್' ಬೈಕ್ ಮಾಡೆಲ್‌ಗಳನ್ನು ದೇಶಾದ್ಯಂತ ಕಂಪನಿಯು ಹಲವು ಡೀಲರ್‌ಶಿಪ್ ಗೋಡನ್‌ಗಳಿಗೂ ತಲುಪಿಸಿದೆ ಎಂದು ವರದಿಯಾಗಿದೆ.

ಮುಂಬರಲಿರುವ ನೂತನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ಸೈಕಲ್, 'ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್' ಮಾಡೆಲ್‌ನಂತೆಯೇ ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್‌ನ್ನು ಪಡೆದಿದೆ. ಹಿಂಭಾಗ (ರೇರ್) ಸಾಮಾನ್ಯ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಎಂಜಿನ್‌ನ್ನು 'ಒಬಿಡಿ-2ಬಿ' ಮಾನದಂಡಗಳಿಗೆ ತಕ್ಕಂತೆ ಮೇಲ್ದರ್ಜೆರಿಸಿರಬಹುದು ಎನ್ನಲಾಗಿದೆ.
ದೇಶೀಯವಾಗಿ ಖರೀದಿಗೆ ದೊರೆಯುವ 'ಹೀರೋ ಸ್ಪ್ಲೆಂಡರ್' ವಿವಿಧ ರೂಪದಲ್ಲಿ ಖರೀದಿಗೆ ದೊರೆಯುತ್ತದೆ. ಸ್ಪ್ಲೆಂಡರ್ ಪ್ಲಸ್ ರೂ.77,226 ರಿಂದ ರೂ.79,836 ಬೆಲೆಯನ್ನು ಹೊಂದಿದೆ. ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ರೂ.81,001 ರಿಂದ ರೂ.84,301 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇವೆರೆಡು ಮಾಡೆಲ್‌ಗಳು 97.2 ಸಿಸಿ ಪೆಟ್ರೋಲ್ ಎಂಜಿನ್ಒಳಗೊಂಡಿದ್ದು, 70 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತವೆ.
ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಕೂಡ ಖರೀದಿಗೆ ದೊರೆಯುತ್ತದೆ. ಇದು ರೂ.84,050 ರಿಂದ ರೂ.88,050 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 124.7 ಸಿಸಿ ಪೆಟ್ರೋಲ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 60 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








