ಹಳ್ಳಿಗರ ಬಂಡಿಗಳಿವು! ಅಗ್ಗದ ಸ್ಪ್ಲೆಂಡರ್ & ಟಿವಿಎಸ್ ಎಕ್ಸ್ಎಲ್ ಕಂಡ್ರೆ ಮುಗಿಬಿದ್ದು ಖರೀದಿಸುವರು, ಏಕೆ ಗೊತ್ತಾ?

ಕರ್ನಾಟಕ ಸೇರಿ ದೇಶದ ಗ್ರಾಮೀಣ ಭಾಗದ ಜನರಿಗೆ ನಿಮ್ಮ ನೆಚ್ಚಿನ ದ್ವಿಚಕ್ರ ವಾಹನ (Two Wheeler) ಯಾವುದೆಂದು ಕೇಳಿದರೆ, ತಕ್ಷಣ ಬರುವ ಉತ್ತರವೇ ಹೀರೋ ಸ್ಪ್ಲೆಂಡರ್ ಪ್ಲಸ್ ಹಾಗೂ ಟಿವಿಎಸ್ ಎಕ್ಸ್ಎಲ್ ಎಂದು. ಅಷ್ಟರ ಮಟ್ಟಿಗೆ ಮನೆ ಮಾತಾಗಿವೆ. ಈಗಲೂ ಹಳ್ಳಿಗರು ನಾಮುಂದು - ತಾಮುಂದು ಎಂಬನಂತೆ ಖರೀದಿ ಮಾಡುತ್ತಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಬನ್ನಿ, ಈ ಸ್ಪ್ಲೆಂಡರ್ ಮತ್ತು ಎಕ್ಸ್ಎಲ್‍ನ್ನು ಗ್ರಾಮೀಣ ಜನರೇಕೆ ಇಷ್ಟಪಟ್ಟುತ್ತಿದ್ದಾರೆ ಎಂಬುದರ ಕುರಿತಂತೆ ಕಾರಣಗಳನ್ನು ತಿಳಿಯೋಣ.

ಕೈಗೆಟುಕುವ ಬೆಲೆ:

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಕಡಿಮೆ ಬೆಲೆಗೆ ಖರೀದಿಗೆ ದೊರೆಯಲಿದ್ದು, ಹಳ್ಳಿಗರು ಸುಲಭವಾಗಿ ಖರೀದಿ ಮಾಡಬಹುದು. ಈ ಬೈಕ್ ವಿವಿಧ ರೂಪದಲ್ಲಿ ಸಿಗಲಿದ್ದು, ರೂ.79,000 ರಿಂದ ರೂ.85,000 ಬೆಲೆಯನ್ನು (ಎಕ್ಸ್-ಶೋರೂಂ) ಹೊಂದಿದೆ. ಹೆಚ್ಚು - ಕಡಿಮೆ ರೂ.1.5 ಲಕ್ಷ ಆನ್-ರೋಡ್ ದರದೊಳಗೆ ಲಭ್ಯವಾಗಲಿದೆ.

Hero Splendor Plus And Tvs XL Why Village People Like Here The Reason

ಅದೇ ರೀತಿಯಲ್ಲಿ ಟಿವಿಎಸ್ ಎಕ್ಸ್ಎಲ್ (TVS XL) ಕೂಡ ಅಗ್ಗದ ದರದಲ್ಲೇ ಖರೀದಿಗೆ ಸಿಗುತ್ತದೆ. ಈ ಮೊಪೆಡ್ ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ರೂ.61,000 ದಿಂದ ರೂ.80,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸರಿ ಸುಮಾರು ರೂ.1 ಲಕ್ಷಕ್ಕಿಂತ ಕಡಿಮೆ ಆನ್-ರೋಡ್ ದರದಲ್ಲಿ ಮನೆಗೆ ತಂದು ಬಿಡಬಹುದು.

ಸಾಟಿಯಿಲ್ಲದ ಕಾರ್ಯಕ್ಷಮತೆ:

ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ಸೈಕಲ್ ಹಾಗೂ ಟಿವಿಎಸ್ ಎಕ್ಸ್ಎಲ್ ಮೊಪೆಡ್‌ಗಳು ಭರ್ಜರಿಯಾಗಿ ಕಾರ್ಯನಿರ್ವಹಿಸಬಲ್ಲವು. ಸ್ಪ್ಲೆಂಡರ್ 97 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 15 ವರ್ಷದ ಹಳೆಯ ಬೈಕ್ ಆಗಿದ್ದರೂ ಯಾವುದೇ ಹೊಸ ಮೋಟಾರ್‌ಸೈಕಲ್‌ಗೆ ಕಡಿಮೆಯಿಲ್ಲವೆಂಬಂತೆ 60 ರಿಂದ 65 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Hero Splendor Plus And Tvs XL Why Village People Like Here The Reason

ಹಾಗೆಯೇ ಟಿವಿಎಸ್ ಎಕ್ಸ್ಎಲ್ 99 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 65 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಬರೋಬ್ಬರಿ 15 ರಿಂದ 20 ವರ್ಷಗಳ ಬಳಕೆ ಮಾಡಿದ ಮೇಲೆಯೂ ಇದೇ ಎಕ್ಸ್ಎಲ್ ಮಾಡೆಲ್, 30 ರಿಂದ 35 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಬಲು ಸುಲಭವಾಗಿ ರಿಪೇರಿ ಮಾಡಬಹುದು:

ಸ್ಪ್ಲೆಂಡರ್ ಪ್ಲಸ್ ಮತ್ತು ಟಿವಿಎಸ್ ಎಕ್ಸ್ಎಲ್‍ಗಳಲ್ಲಿ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಕಂಡುಬಂದರೂ ಸ್ಥಳೀಯ ಗ್ಯಾರೇಜ್‌ಗಳಲ್ಲಿನ ಮೆಕ್ಯಾನಿಕ್​ಗಳೇ ರಿಪೇರಿ ಮಾಡಬಲ್ಲರು. ಅದಕ್ಕಾಗಿ ಸರ್ವಿಸ್ ಸೆಂಟರ್‌ನಲ್ಲಿ ದಿನಗಟ್ಟಲೇ ಬಿಡುವ ಅಗತ್ಯವಿಲ್ಲ. ಈ ದ್ವಿಚಕ್ರ ವಾಹನಗಳ ಬಿಡಿ ಭಾಗಗಳು ಸಹ ಎಲ್ಲೆಡೆ ಸುಲಭವಾಗಿ ಲಭ್ಯವಾಗುತ್ತವೆ.

Take a Poll

ಹೆಚ್ಚಿನ ಲಗೇಜ್ ಸಾಗಿಸಬಹುದು & ಯಾವುದೇ ರಸ್ತೆಗೂ ಸೈ:

ಗ್ರಾಮೀಣ ಭಾಗದ ಬಹುತೇಕರು ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಕೊಂಡಿರುತ್ತಾರೆ. ಅವರಿಗೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೀರೋ ಸ್ಪ್ಲೆಂಡರ್ ಪ್ಲಸ್ ಹಾಗೂ ಟಿವಿಎಸ್ ಎಕ್ಸ್ಎಲ್‍ಗಳು ನಾನಾ ರೀತಿಯಲ್ಲಿ ನೆರವಾಗಲಿದ್ದು, ಜಮೀನಿನಿಂದ ಮನೆಗಳಿಗೆ ಕ್ವಿಂಟಾಲ್‌ಗಟ್ಟಲೆ ಲಗೇಜ್‌ನ್ನು ಸಾಗಾಟ ಮಾಡಬಹುದು. ಹಳ್ಳಿಗಳಲ್ಲಿ ಸಾಮಾನ್ಯ ರಸ್ತೆಗಳಿಗಿಂತ ಕಚ್ಚಾ ರಸ್ತೆಗಳೇ ಹೆಚ್ಚಿರುತ್ತವೆ. ಅಲ್ಲಿಯೂ ಈ ದ್ವಿಚಕ್ರ ವಾಹನಗಳು ಲೀಲಾಜಾಲವಾಗಿ ಸಂಚಾರ ಮಾಡಬಲ್ಲವು.

ಒಟ್ಟಾರೆಯಾಗಿ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಟಿವಿಎಸ್ ಎಕ್ಸ್ಎಲ್‍ ಗ್ರಾಮೀಣ ಜನರ ಮೆಚ್ಚಿನ ದ್ವಿಚಕ್ರ ವಾಹನಗಳಾಗಿ ಹೊರಹೊಮ್ಮಿವೆ. ಅದನ್ನು ಪುಷ್ಟಿಕರಿಸುವಂತೆ ಪ್ರತಿ ತಿಂಗಳು ಸರಾಸರಿ 2 ಲಕ್ಷ ಯುನಿಟ್‌ನಷ್ಟು ಸ್ಪ್ಲೆಂಡರ್ ಹಾಗೂ 30 ರಿಂದ 40 ಸಾವಿರ ಯುನಿಟ್‌ನಷ್ಟು ಎಕ್ಸ್ಎಲ್‍ಗಳು ಮಾರಾಟವಾಗುತ್ತಿವೆ. ಆದರೂ ಈ ಮಾರಾಟ ಪ್ರಮಾಣವು ಒಂದಷ್ಟು ಮಟ್ಟಿಗೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ ಎಂಬುದು ಬೇಸರದ ಸಂಗತಿಯಾಗಿದೆ.

Article Published On: Tuesday, June 17, 2025, 12:46 [IST]
English summary
Hero splendor plus and tvs xl why village people like here the reason
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+