ಬಡವರ ಬೈಕ್‌ಯಿದು: ಫುಲ್ ಟ್ಯಾಂಕ್‌ ಮಾಡಿಸಿದ್ರೆ 700 Km ಮೈಲೇಜ್, ಹೊಸ Hero Splendor ಬರೀ ರೂ.73,946ಕ್ಕೆ ಸಿಗುತ್ತೆ!

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ನಂ.1 ಮೋಟಾರ್‌ಸೈಕಲ್‌ ಆಗಿದೆ. ಇದು ದಶಕಗಳಿಂದ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ನೀವು ದಿನಬಳಕೆಗಾಗಿ ಹೊಸದಾದ ಬೈಕ್‌ವೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 'ಸ್ಪ್ಲೆಂಡರ್ ಪ್ಲಸ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ (Price):

ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂಪಾಂತರಗಳನ್ನು ಅವಲಂಭಿಸಿ, ಕನಿಷ್ಠ ರೂ.73,946 ಮತ್ತು ಗರಿಷ್ಠ ರೂ.76,353 (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಸುಲಭವಾಗಿ ಮನೆಗೆ ತರಬಹುದು.

Hero Splendor Plus Bike Price Design Colour Mileage Features And All Details

ವಿನ್ಯಾಸ & ಬಣ್ಣಗಳು (Design & Colours):

ಈ ಬೈಕ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಹೆಡ್‌ಲ್ಯಾಂಪ್, ಇಂಡಿಕೇಟರ್‌ಗಳು ಮತ್ತು ಟೈಲ್ ಲ್ಯಾಂಪ್‌ನ್ನು ಪಡೆದಿದೆ. ಬ್ಲೂ-ಬ್ಲ್ಯಾಕ್, ಬ್ಲ್ಯಾಕ್ ಹೆವಿ ಗ್ರೇ, ಫೋರ್ಸ್ ಸಿಲ್ವರ್, ಬ್ಲ್ಯಾಕ್-ರೆಡ್ ಪರ್ಪಲ್ ಹಾಗೂ ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಸುತ್ತಳತೆ (Dimension):

ನೂತನ 'ಸ್ಪ್ಲೆಂಡರ್ ಪ್ಲಸ್' ಮೋಟಾರ್‌ಸೈಕಲ್‌ ಸಾಕಷ್ಟು ವಿಶಾಲವಾಗಿದೆ. 2,000 ಮಿ.ಮೀ ಉದ್ದ, 720 ಮಿ.ಮೀ ಅಗಲ ಹಾಗೂ 1,052 ಮಿ.ಮೀ ಎತ್ತರವಿದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,236 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 112 ಕೆಜಿ ತೂಕವಿದೆ.

Hero Splendor Plus Bike Price Design Colour Mileage Features And All Details

ಕಾರ್ಯಕ್ಷಮತೆ (Performance):

ಇದು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 97.2-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 8,000 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6,000 ಆರ್‌ಪಿಎಂನಲ್ಲಿ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಮೈಲೇಜ್ (Mileage):

ಈ ಬೈಕ್ ಉತ್ತಮ ಬೈಕ್ ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. 1 ಲೀಟರ್ ಪೆಟ್ರೋಲ್‌ ಹಾಕಿಸಿದರೆ, 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. 9.8 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ. ಪೂರ್ತಿಯಾಗಿ ತುಂಬಿಸಿದರೆ 700 ಕಿಲೋಮೀಟರ್‌ಗೂ ಹೆಚ್ಚು ದೂರದ ಕ್ರಮಿಸಬಲ್ಲದು.

Hero Splendor Plus Bike Price Design Colour Mileage Features And All Details

ವೈಶಿಷ್ಟ್ಯಗಳು (Features):

ಹೊಸ 'ಸ್ಪ್ಲೆಂಡರ್ ಪ್ಲಸ್' ಮೋಟಾರ್‌ಸೈಕಲ್‌, ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಐ3ಎಸ್ ಟೆಕ್ನಾಲಜಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರಸ್ತೆಯ ಬಿಗಿಯಾದ ಹಿಡಿತ ಒದಗಿಸಲು 18 ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಸೀಟ್ ಎತ್ತರವು 785 ಮಿ.ಮೀ ಇದೆ.

ಸಸ್ಪೆನ್ಷನ್ ಸೆಟಪ್ & ಬೇಕಿಂಗ್ ಸಿಸ್ಟಮ್ (Suspension Setup & Braking System):

ಇದು ಸವಾರರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್ - ಪ್ರಿಲೋಡ್ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಪ್ರತಿಸ್ಪರ್ಧಿ ಬೈಕ್‌ಗಳು (Rival bikes):

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಹೋಂಡಾ ಶೈನ್ (100 Honda Shine 100), ಬಜಾಜ್ ಸಿಟಿ 110 (Bajaj CT 110), ಟಿವಿಎಸ್ ರೇಡಿಯನ್ (TVS Radeon) ಹಾಗೂ ಬಜಾಜ್ ಪ್ಲಾಟಿನಾ 100 (bajaj platina 100) ಮೋಟಾರ್‌ಸೈಕಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Sunday, December 21, 2025, 12:52 [IST]
English summary
Hero splendor plus bike price design colour mileage features and all details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+