ಬಡವರ ಬಂಡಿಗಳು: 90 ಕಿ.ಮೀ ಮೈಲೇಜ್.. Hero Splendor Plus ಸೇರಿ ಈ ಜನಪ್ರಿಯ ಬೈಕ್‌ಗಳ ಹೊಸ ದರವೆಷ್ಟು?

ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೊಂಡಿವೆ. ಇದರ ಸಂಪೂರ್ಣ ಪ್ರಯೋಜನವನ್ನು ದ್ವಿಚಕ್ರ ವಾಹನ (Two Wheelers) ತಯಾರಕ ಕಂಪನಿಗಳು ತಮ್ಮ ಗ್ರಾಹಕರಿಗೆ ವರ್ಗಾಯಿಸುತ್ತಿವೆ. ಜನಪ್ರಿಯ ಹೀರೋ ಸ್ಪ್ಲೆಂಡರ್ ಪ್ಲಸ್, ಹೋಂಡಾ ಶೈನ್ 100 ಡಿಎಕ್ಸ್ ಹಾಗೂ ಬಜಾಜ್ ಪ್ಲಾಟಿನಾ 100 ಮೋಟಾರ್‌ಸೈಕಲ್‌ಗಳ ಬೆಲೆಯೂ ಭಾರೀ ಪ್ರಯಾಣದಲ್ಲಿ ಇಳಿಕೆಯಾಗಿದೆ. ಬನ್ನಿ, ಈ ಬೈಕ್‌ಗಳ ನೂತನ 'ಎಕ್ಸ್-ಶೋರೂಂ' ದರವೆಷ್ಟು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus):

ಇದು ನಂ.1 ಮೋಟಾರ್‌ಸೈಕಲ್‌ ಆಗಿದೆ. ಜಿಎಸ್‌ಟಿ ಪರಿಷ್ಕರಣೆ ಬಳಿಕ, ತುಂಬಾ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 'ಡ್ರಮ್ ಬ್ರೇಕ್ ಒಬಿಡಿ2ಬಿ' ರೂಪಾಂತರ ರೂ.73,946 ದರವನ್ನು ಪಡೆದಿದೆ. ಅದೇ ರೀತಿಯಲ್ಲಿ 'ಐ3ಎಸ್ ಒಬಿಡಿ2ಬಿ' ರೂಪಾಂತರ ಹಾಗೂ 'ಸ್ಪೆಷಲ್ ಎಡಿಷನ್ ಒಬಿಡಿ2ಬಿ' ರೂಪಾಂತರಗಳು ರೂ.74,970 (ಎಕ್ಸ್-ಶೋರೂಂ) ಬೆಲೆವನ್ನು ಹೊಂದಿವೆ.

Hero Splendor Plus Honda Shine 100 DX And Bajaj Platina 100 New Price Details

ಈ ಬೈಕ್ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್, ಬ್ಲ್ಯಾಕ್ ರೆಡ್ ಪರ್ಪಲ್, ಫೋರ್ಸ್ ಸಿಲ್ವರ್ ಮತ್ತು ಬ್ಲ್ಯಾಕ್ ಹೆವಿ ಗ್ರೇ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 97.2 ಸಿಸಿ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 73 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಸ್ಪ್ಲೆಂಡರ್ ಪ್ಲಸ್ 87 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 8.51 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಟ್ವಿನ್-ಪ್ರಿಲೋಡ್ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

Hero Splendor Plus Honda Shine 100 DX And Bajaj Platina 100 New Price Details

ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX):

ಇದೊಂದು ಜನಪ್ರಿಯ ಬೈಕ್ ಆಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ಜಿಎಸ್‌ಟಿ ಪರಿಷ್ಕರಣೆ ನಂತರ, ರೂ.69,694 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 98.98 ಸಿಸಿ ಸಿಂಗಲ್-ಸಿಲಿಂಡರ್, ಫ್ಯುಯೆಲ್-ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 65 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಈ ಮೋಟಾರ್‌ಸೈಕಲ್‌ 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 7 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್‌, ಕಿಕ್ ಸ್ಟಾರ್ಟ್ ಹಾಗೂ ಸೈಲೆಂಟ್ ಎಲೆಕ್ಟ್ರಿಕ್ ಸ್ಟಾರ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕ್ ಸಿಸ್ಟಮ್) ಮತ್ತು ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Hero Splendor Plus Honda Shine 100 DX And Bajaj Platina 100 New Price Details

ಬಜಾಜ್ ಪ್ಲಾಟಿನಾ 100 (Bajaj Platina 100):

ಇದು ಜಗಮೆಚ್ಚಿದ ಬೈಕ್ ಎಂದೇ ಹೆಸರುವಾಸಿಯಾಗಿದೆ. ಜಿಎಸ್‌ಟಿ ಪರಿಷ್ಕರಣೆ ಬಳಿಕ, ರೂ.65,407 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 102 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 75 ರಿಂದ 90 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 9 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಈ ಮೋಟಾರ್‌ಸೈಕಲ್‌ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟರ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಡುಯಲ್ ಸ್ಪ್ರಿಂಗ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

Article Published On: Thursday, September 25, 2025, 12:43 [IST]
English summary
Hero splendor plus honda shine 100 dx and bajaj platina 100 new price details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+