Hero Splendor Plus vs Bajaj Platina 100: ಅಗ್ಗದ ಬೈಕ್‌ಗಳಿವು.. ಯಾವುದು ಬೆಸ್ಟ್ ಗೊತ್ತಾ?
ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಹಾಗೂ ಬಜಾಜ್ ಪ್ಲಾಟಿನಾ 100 (Bajaj Platina 100) ಜನಪ್ರಿಯ ಬೈಕ್‌ಗಳಾಗಿ ಹೊರಹೊಮ್ಮಿವೆ. ಇವೆರೆಡು ಮೋಟಾರ್‌ಸೈಕಲ್‌ಗಳು ವಿಶ್ವಾಸಾರ್ಹತೆಗೂ ಹೆಸರುವಾಸಿಯಾಗಿದ್ದು, ನಿರ್ವಹಣಾ ವೆಚ್ಚವು ಕಮ್ಮಿಯಿದೆ. ಜೊತೆಗೆ ಹೆಚ್ಚಿನ ಇಂಧನ ದಕ್ಷತೆಯನ್ನು (fuel efficiency) ಒದಗಿಸಲಿವೆ. ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಮಧ್ಯಮ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿವೆ. ನಾವಿಲ್ಲಿ ಈ ಬೈಕ್‌ಗಳ ಬೆಲೆ ಹಾಗೂ ವಿಶೇಷತೆಗಳನ್ನು ಹೋಲಿಕೆ ಮಾಡಿದ್ದೇವೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಬೆಲೆ (Price): ನೂತನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ಸೈಕಲ್, ರೂ.77,176 ರಿಂದ ರೂ.80,176 ಬೆಲೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ಬಜಾಜ್ ಪ್ಲಾಟಿನಾ 100 ಬೈಕ್ ರೂ.68,890 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇವೆರೆಡು ಬೈಕ್‌ಗಳಲ್ಲಿ 'ಪ್ಲಾಟಿನಾ' ಕೊಂಚ ಕಡಿಮೆ ಬೆಲೆಯನ್ನು ಹೊಂದಿದೆ ಎಂದು ಹೇಳಬಹುದು.

ಕಾರ್ಯಕ್ಷಮತೆ (Performance): ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ಸೈಕಲ್ 97.2 ಸಿಸಿ ಏರ್ ಕೋಲ್ಡ್, 4-ಸ್ಟೋಕ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 8000 ಆರ್‌ಪಿಎಂನಲ್ಲಿ 7.7 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6000 ಆರ್‌ಪಿಎಂನಲ್ಲಿ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಬಜಾಜ್ ಪ್ಲಾಟಿನಾ ಬೈಕ್ 102 ಸಿಸಿ 4-ಸ್ಟ್ರೋಕ್, ಡಿಟಿಎಸ್-ಐ, ಸಿಂಗಲ್ ಸಿಲಿಂಡರ್ ಎಂಜಿನ್‌ನ್ನು ಪಡೆದಿದೆ. 7500 ಆರ್‌ಪಿಎಂನಲ್ಲಿ 7.7 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 5500 ಆರ್‌ಪಿಎಂನಲ್ಲಿ 8.3 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಎರಡು ಮೋಟಾರ್‌ಸೈಕಲ್‌ಗಳು ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಹೊಂದಿವೆ ಎಂಬುದು ಗೊತ್ತಾಗುತ್ತಿದೆ.

ಸುತ್ತಳತೆ (Dimensions): ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ 2,000 ಎಂಎಂ ಉದ್ದ, 720 ಎಂಎಂ ಅಗಲ ಹಾಗೂ 1,052 ಎಂಎಂ ಎತ್ತರವಿದೆ. ಇದರೊಟ್ಟಿಗೆ 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,236 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಈ ಮೋಟಾರ್‌ಸೈಕಲ್ ಒಟ್ಟು 112 ಕೆಜಿ ತೂಕವಿದ್ದು, 9.8 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.
ಬಜಾಜ್ ಪ್ಲಾಟಿನಾ 100 ಮೋಟಾರ್‌ಸೈಕಲ್ 2,006 ಎಂಎಂ ಉದ್ದ, 713 ಎಂಎಂ ಅಗಲ ಮತ್ತು 1,100 ಎಂಎಂ ಎತ್ತರವಿದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,255 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಹಾಗೆಯೇ ಇದು 117 ಕೆಜಿ ತೂಕವಿದ್ದು, 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.

ವೈಶಿಷ್ಟ್ಯಗಳು (Features): ನೂತನ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಮತ್ತು ಐ3ಎಸ್ (ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 18-ಇಂಚಿನ ಅಲಾಯ್ ವೀಲ್‌ಗಳು, ಟ್ಯೂಬ್‌ಲೆಸ್ ಟೈರ್‌ಗಳು ಹಾಗೂ 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಬಜಾಜ್ ಪ್ಲಾಟಿನಾ 100 ಮೋಟಾರ್‌ಸೈಕಲ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲೈಟ್‌ಗಳು) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 17-ಇಂಚಿನ ಅಲಾಯ್ ವೀಲ್‌ಗಳು, ಟ್ಯೂಬ್-ಟೈಪ್ ಟೈರ್‌ಗಳು, ಆಂಟಿ-ಸ್ಕಿಡ್ ಬ್ರೇಕಿಂಗ್ ಸಿಸ್ಟಮ್ ಹಾಗೂ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. ಇವೆರಡು ಬೈಕ್‌ಗಳು ಕೂಡ ಬೆಲೆಗೆ ತಕ್ಕಂತೆ ವೈಶಿಷ್ಟ್ಯಗಳನ್ನು ಪಡೆದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications