Hero Splendor: ಬಡವರ ಬಂಡಿ... 73 ಕಿ.ಮೀ ಮೈಲೇಜ್... ಬೆಲೆಗೆ ತಕ್ಕ ಮೌಲ್ಯ ನೀಡುವ ಏಕೈಕ ಬೈಕ್!
ಭಾರತದಲ್ಲಿ ಮಧ್ಯಮ ಹಾಗೂ ಬಡ ವರ್ಗದ ಅದೆಷ್ಟೋ ಜನರ ದಿನನಿತ್ಯದ ಒಡನಾಡಿಯಾಗಿರುವ ಹೀರೋ ಸ್ಪ್ಲೆಂಡರ್ ಪ್ಲಸ್ XTEC (Hero Splendor Plus XTEC), ಅತ್ಯುತ್ತಮ ಮೈಲೇಜ್, ಅಗ್ಗದ ಬೆಲೆ ಹಾಗೂ ಆಕರ್ಷಕ ಫೀಚರ್ಸ್‌ನೊಂದಿಗೆ ಮುನ್ನುಗ್ಗುತ್ತಿದೆ. ಜೂನ್ 2025 ರ ಹೊತ್ತಿಗೆ, ಸ್ಪ್ಲೆಂಡರ್ ಪ್ಲಸ್ XTEC ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ. ಇತರ ಪ್ರತಿಸ್ಪರ್ಧಿ ಬೈಕ್‌ಗಳಿಗೆ ಹೋಲಿಸಿದರೆ ತನ್ನ ಹೊಸ ಅಪ್‌ಡೇಟ್‌ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಆಧುನಿಕ ಫೀಚರ್ಸ್ ನೊಂದಿಗೆ ಉತ್ತಮ ಮೈಲೇಜ್ ಬಯಸುವ ಪ್ರಯಾಣಿಕರಿಗೆ ಈ ಬೈಕ್ ಸೂಕ್ತವಾಗಿದೆ. ಈ ಮೋಟಾರ್‌ಸೈಕಲ್‌ನ ಟಾಪ್ ವಿಶೇಷತೆಗಳು ಇಲ್ಲಿವೆ.
ನೀವು ಬಜೆಟ್ ಸ್ನೇಹಿ, ಕಡಿಮೆ ನಿರ್ವಹಣೆ ಮತ್ತು ಹೆಚ್ಚಿನ ಮೈಲೇಜ್ ನೀಡುವ ಬೈಕ್ ಹುಡುಕುತ್ತಿದ್ದರೆ, XTEC 2025 ರಲ್ಲಿ ಬೆಸ್ಟ್ ಆಯ್ಕೆಯಾಗಿದೆ. ಹೀರೋ ಸ್ಪ್ಲೆಂಡರ್ ಪ್ಲಸ್ XTEC ಹೊಸ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಅತ್ಯುತ್ತಮ ಮೈಲೇಜ್, ಆಧುನಿಕ ಡಿಜಿಟಲ್ ವೈಶಿಷ್ಟ್ಯಗಳು ಮತ್ತು ಸಾಬೀತುಪಡಿಸಿದ ಎಂಜಿನ್ ಇದರ ಮುಖ್ಯಾಂಶಗಳಾಗಿವೆ.

ಸ್ಪ್ಲೆಂಡರ್ ಪ್ಲಸ್ XTEC ಹೆಚ್ಚಿನ ನಗರಗಳಲ್ಲಿ ಆನ್-ರೋಡ್ ಬೆಲೆಗಳು 1 ಲಕ್ಷ ರೂ.ಗಿಂತ ಕಡಿಮೆ ಇದ್ದು, ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತದೆ. ಹೊಸ ಸ್ಪ್ಲೆಂಡರ್ ಪ್ಲಸ್ XTEC ಡ್ರಮ್ ಬ್ರೇಕ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 79,900ಗಳಾದರೆ, ಡಿಸ್ಕ್ ಬ್ರೇಕ್ ಮಾದರಿಯ ಬೆಲೆಯು ರೂ. 83,500ಗಳಾಗಿದೆ. ಹೊಸ ಸ್ಪ್ಲೆಂಡರ್ XTEC 2.0 ಮಾದರಿಯ ಬೆಲೆಯು ರೂ. 82,900ಗಳಾಗಿದೆ.
ನವೀಕರಿಸಿದ ತಂತ್ರಜ್ಞಾನ ಮತ್ತು ಸ್ಟೈಲಿಂಗ್ ಈ ಐಕಾನಿಕ್ ಬೈಕ್‌ಗೆ ಕಾರ್ಯಕ್ಷಮತೆಯಲ್ಲಿ ರಾಜಿ ಮಾಡಿಕೊಳ್ಳದೆ ಹೊಸ ಆಕರ್ಷಣೆಯನ್ನು ನೀಡುತ್ತದೆ. XTEC ಪ್ರಭಾವಶಾಲಿ ಮೈಲೇಜ್ ಹೊಂದಿದ್ದು, ಕಂಪನಿಯ ಪ್ರಕಾರ ಬಳಕೆದಾರರು 80-85 ಕಿ.ಮೀ ಮತ್ತು ಹೆದ್ದಾರಿಗಳಲ್ಲಿ 95 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ನಮ್ಮ ಪ್ರಕಾರ ಇದು 70 ಕಿ.ಮೀ ಮೈಲೇಜ್ ನೀಡಬಹುದು.

ಸ್ಪ್ಲೆಂಡರ್ ಪ್ಲಸ್ XTEC ಬೈಕ್‌ಗೆ ಟೆಕ್ ಅಪ್ ಗ್ರೇಡ್ ಮಾಡಲಾಗಿದ್ದು, ಇದರಲ್ಲಿ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಇಂಟಿಗ್ರೇಟೆಡ್ ಬ್ರೇಕಿಂಗ್ (ಸಿಬಿಎಸ್), ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್ ಲ್ಯಾಂಪ್ ಗಳು, ಡಿಆರ್‌ಎಲ್, ಟೈಲ್ ಲ್ಯಾಂಪ್ ನಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದು ಹಗುರವಾದ ಬೈಕ್ ಆಗಿದ್ದು ಓಡಿಸಲು ತುಂಬಾ ಸುಲಭವಾಗಿರುತ್ತದೆ, ವಿಶೇಷವಾಗಿ ನಗರ ಸಂಚಾರದಲ್ಲಿ ಉತ್ತಮ ಚಾಲನಾ ಅನುಭವ ನೀಡುತ್ತದೆ. ಒಟ್ಟಾರೆ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಆಕರ್ಷಕ ಮೈಲೇಜ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಎಲ್ ಇಡಿ ಲೈಟಿಂಗ್ ನಂತಹ ಆಧುನಿಕ ವೈಶಿಷ್ಟ್ಯಗಳು ಮತ್ತು ವಿಶ್ವಾಸಾರ್ಹ ಎಂಜಿನ್ ಅನ್ನು ಹೊಂದಿದೆ.
ಇದರ ಉತ್ತಮ ಮೈಲೇಜ್, ಸಾಬೀತಾದ ಎಂಜಿನ್ ಮತ್ತು ಆಧುನಿಕ ಡಿಜಿಟಲ್ ವೈಶಿಷ್ಟ್ಯಗಳೊಂದಿಗೆ, 4-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಮಧ್ಯಮ ಹಾಗೂ ಬಡ ವರ್ಗದ ಜನರು ಹಾಗೂ ನಿತ್ಯ ಜೀವನಕ್ಕೆ ವಾಹನಗಳನ್ನೇ ಆಧಾರವಾಗಿರಿಸಿಕೊಂಡವರಿಗೆ ಈ ಬೈಕ್ ಬೆಸ್ಟ್ ಆಯ್ಕೆಯಾಗಿದೆ. ಹಾಗೆಯೇ ರ್ಯಾಪಿಡೊ, ಸ್ವಿಗ್ಗಿ, ಜೊಮಾಟೊನಂತಹ ಕೆಲಸಗಾಗರರು ಇದರಿಂದ ಉತ್ತಮ ಲಾಭ ಪಡೆಯಬಹುದು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಕೆಲವು ಬಳಕೆದಾರರು ಸ್ಪ್ಲೆಂಡರ್ ಪ್ಲಸ್ XTEC ನಲ್ಲಿ ದೋಷಯುಕ್ತ ಬ್ಯಾಟರಿಗಳು ಮತ್ತು ಸೇವಾ ದೂರುಗಳು ಸೇರಿದಂತೆ ಸಣ್ಣ ನಿರ್ಮಾಣ ಗುಣಮಟ್ಟದ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂಧನ ದಕ್ಷತೆ ಮತ್ತು ಮೌಲ್ಯಕ್ಕಾಗಿ ಶ್ಲಾಘಿಸಲ್ಪಟ್ಟರೂ, ಕೆಲವು ಸಣ್ಣ ನಿರ್ಮಾಣ ಗುಣಮಟ್ಟದ ಕಾಳಜಿಗಳು ವರದಿಯಾಗಿವೆ. ಈ ಬೈಕ್ ನೀವು ಕೂಡ ಬಳಸುತ್ತಿದ್ದರೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








