Vida: ಸದ್ದಿಲ್ಲದೇ ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ.. 69,990 ರೂಪಾಯಿ, ವಿಶೇಷತೆಗಳೇನು?

ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಆಗಿ 'ವಿಡಾ' ಜನಪ್ರಿಯತೆ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿಂದು ಹೊಚ್ಚ ಹೊಸ 'ಡರ್ಟ್.ಇ ಕೆ3' ಹೆಸರಿನ ಇ-ಬೈಕ್‌ನ್ನು ಬಿಡುಗಡೆಗೊಳಿಸಿದೆ. ವಿಶೇಷವಾಗಿ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು 4 ರಿಂದ 10 ವರ್ಷದ ವಯೋಮಾನದ ಮಕ್ಕಳಿಗಾಗಿ ಸಿದ್ದಪಡಿಸಲಾಗಿದೆ. ಅವರು, ಡರ್ಟ್‌ ರೇಸ್‌ ಅಥವಾ ಆಫ್-ರೋಡ್ ಚಾಲನೆಯನ್ನು ಕಲಿಯಲು ಬಳಕೆ ಮಾಡಲು ಸಾಧ್ಯವಾಗಲಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

ನೂತನ ವಿಡಾ ಡರ್ಟ್.ಇ ಕೆ3 (Vida Dirt.E K3) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌, ರೂ.69,990 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಪರಿಚಯಾತ್ಮಕ ಬೆಲೆಯೂ ಮೊದಲ 300 ಯುನಿಟ್‌ಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಬೈಕ್‌ನ್ನು ಜರ್ಮನಿಯ ಹೀರೋ ಟೆಕ್ ಸೆಂಟರ್ ಹಾಗೂ ಜೈಪುರದ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗದೆ.

Hero Vida Dirt E K3 Electric Bike Launched In India Rs 69 990 Price Details

ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಮಾರಾಟ ಪ್ರಕ್ರಿಯೆಗೆ ಜನವರಿ 15 ರಿಂದ ಚಾಲನೆ ನೀಡಲಾಗುತ್ತದೆ. ದೆಹಲಿ, ಬೆಂಗಳೂರು, ಪುಣೆ, ಜೈಪುರ ಮತ್ತು ಕ್ಯಾಲಿಕಟ್‌ನ ಆಯ್ದ ಶೋರೂಂಗಳಲ್ಲಿ ಮಾರಾಟಗೊಳಿಸಲಾಗುತ್ತದೆ. ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ಕಂಪನಿಯ 'ಇವಿ' ಉತ್ಪಾದನಾ ಘಟಕದಲ್ಲಿ ಈ ಬೈಕ್‌ನ್ನು ತಯಾರಿಸಲಾಗುತ್ತದೆ.

ಇದು 360ಡಬ್ಲ್ಯೂಹೆಚ್ ರಿಮೂವಬಲ್ ಹೋಮ್-ಚಾರ್ಜಬಲ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. 500ಡಬ್ಲ್ಯೂ ಪೀಕ್ ಮೋಟಾರ್‌ ನೆರವಿನಿಂದ ಕಾರ್ಯನಿರ್ವಹಿಸಬಲ್ಲದು. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, 3 ಗಂಟೆಗಳ ಕಾಲ ಸತತವಾಗಿ ಓಡಬಲ್ಲದು. ಅಲ್ಲದೆ, ಬರೀ 3 ಗಂಟೆಗಳಲ್ಲಿ ಬ್ಯಾಟರಿಯನ್ನು 0 ರಿಂದ 100% ಚಾರ್ಜ್ ಮಾಡಲು ಸಾಧ್ಯವಾಗಲಿದೆ.

ಈ ಎಲೆಕ್ಟ್ರಿಕ್ ಬೈಕ್ ಬಿಗಿನರ್ಸ್ (8 ಕೆಎಂಪಿಹೆಚ್), ಅಮೆಚೂರ್ (16 ಕೆಎಂಪಿಹೆಚ್) ಹಾಗೂ ಪ್ರೊ (25 ಕೆಎಂಪಿಹೆಚ್) 3 ಆಕರ್ಷಕವಾದ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸ್ಮಾಲ್, ಮೀಡಿಯಂ ಹಾಗೂ ಲಾರ್ಜ್ ಎಂಬ ಸಸ್ಪೆನ್ಷನ್ ಸೆಟ್ಟಿಂಗ್‌ನ್ನು ಪಡೆದಿದೆ. ಹಿಂಭಾಗ (ರೇರ್) 160 ಎಂಎಂ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

ನೂತನ 'ವಿಡಾ ಡರ್ಟ್.ಇ ಕೆ3' ಇ-ಮೋಟಾರ್‌ಸೈಕಲ್‌ ಮಕ್ಕಳು ಸುಲಭವಾಗಿ ಉಪಗೋಗಿಸಬಹುದಾದ ಬ್ರೇಕ್ ಲಿವರ್‌ನ್ನು ಹೊಂದಿದೆ. ಸೀಲ್ ಮಾಡಲ್ಪಟ್ಟ ಬ್ಯಾಟರಿ ಪ್ಯಾಕ್‌ನ್ನು ತನ್ನದಾಗಿಸಿಕೊಂಡಿದೆ. ಒಂದೊಮ್ಮೆ ಬೈಕ್ ಓಡಿಸುವಾಗ ಅವರು ಬಿದ್ದರೆ, ಪವರ್ ಕಟ್ ಮಾಡಲು ಮ್ಯಾಗ್ನೆಟಿಕ್ ಲ್ಯಾನ್ಯಾರ್ಡ್ ಕಿಲ್ ಸ್ವಿಚ್ ಕೂಡ ಇದೆ. ಜೊತೆಗೆ 'ವಿಡಾ' ಆಪ್ ಮೂಲಕ ಪೋಷಕರು, ರೈಡ್ ಮೋಡ್‌ನ್ನು ಲಾಕ್ ಮಾಡಬಹುದು.

ವಯಸ್ಕರ ಖರೀದಿಗೆ ಸಿಗುವ 'ಹೀರೋ ವಿಡಾ ವಿಎಕ್ಸ್2' ವಿಶೇಷತೆಗಳೇನು:

ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿ ಲಭ್ಯವಿದೆ. ರೂ.99,490 ದಿಂದ ರೂ.1.21 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ವಿಎಕ್ಸ್2 ಗೋ ಹಾಗೂ ವಿಎಕ್ಸ್2 ಪ್ಲಸ್ ಎಂಬ 2 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ. 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 92 ರಿಂದ 142 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಪರ್ಲ್ ಬ್ಲ್ಯಾಕ್, ನೆಕ್ಸಸ್ ಬ್ಲೂ, ಪರ್ಲ್ ರೆಡ್ ಹಾಗೂ ಮ್ಯಾಟ್ ಲೈಮ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರಿಮೋಟ್ ಇಮೊಬಿಲೈಸೇಶನ್, ಕ್ಲೌಡ್ ಕನೆಕ್ಟಿವಿಟಿ, ಅಂಡರ್-ಸೀಟ್ ಸ್ಟೋರೇಜ್ ಮತ್ತು ಡೈಮಂಡ್ ಕಟ್ ಫಿನಿಶ್ ಅಲಾಯ್ ವೀಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

More from DriveSpark

Article Published On: Friday, December 12, 2025, 17:34 [IST]
English summary
Hero vida dirt e k3 electric bike launched in india rs 69990 price details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+