Hero: ಜನಪ್ರಿಯ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಭಾರೀ ಇಳಿಕೆ.. ಎಷ್ಟು?
ಹೀರೋ ವಿಡಾ ವಿ2 (Hero Vida V2) ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಸ್ಕೂಟರ್‌ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮುಂದಾಗಿದ್ದು, ವಿವಿಧ ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹೊಚ್ಚ ಹೊಸ 'ಹೀರೋ ವಿಡಾ ವಿ2' ಎಲೆಕ್ಟ್ರಿಕ್ ಸ್ಕೂಟರ್ ವಿ2 ಲೈಟ್, ವಿ2 ಪ್ಲಸ್ ಹಾಗೂ ವಿ2 ಪ್ರೊ ಎಂಬ ಮೂರು ಆಕರ್ಷಕ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದರ ವಿಡಾ ವಿ2 ಲೈಟ್ ಮಾಡೆಲ್ ದರ ಬರೋಬ್ಬರಿ ರೂ.11,000 ಕಡಿಮೆಯಾಗಿದೆ. ಬೆಲೆ ಇಳಿಕೆ ನಂತರ, ರೂ.74,000 ಎಕ್ಸ್-ಶೋರೂಂ ದರವನ್ನು ಹೊಂದಿದೆ.

ಮತ್ತೊಂದು ವಿಡಾ ವಿ2 ಪ್ಲಸ್ ಮಾಡೆಲ್ ಬೆಲೆ ಸರಿ ಸುಮಾರು ರೂ.15,000 ಇಳಿಕೆಯಾಗಿದ್ದು, ರೂ.82,800 ಎಕ್ಸ್-ಶೋರೂಂ ದರರಲ್ಲಿ ಖರೀದಿದಾರರು ಕೊಂಡುಕೊಳ್ಳಬಹುದು. ಆದರೆ, ಇನ್ನೊಂದು ವಿಡಾ ವಿ2 ಪ್ರೊ ಮಾಡೆಲ್ ಮಾತ್ರ ರೂ.4,700 ದರ ಏರಿಕೆಯನ್ನು ಪಡೆದುಕೊಂಡಿದ್ದು, ರೂ.1,20,300 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ.
ನೂತನ ಹೀರೋ ವಿಡಾ ವಿ2 ಲೈಟ್ ಎಂಟ್ರಿ-ಲೆವೆಲ್ ಮಾಡೆಲ್ ಆಗಿದೆ. ಇದು 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 94 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ಕೊಡುತ್ತದೆ. 69 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ಹೀರೋ ವಿಡಾ ವಿ2 ಪ್ಲಸ್ ಮಿಡ್-ಲೆವೆಲ್ ಮಾಡೆಲ್ ಎಂದೇ ಹೆಸರುವಾಸಿಯಾಗಿದೆ. ಈ ಸ್ಕೂಟರ್ 3.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 143 ಕಿಲೋಮೀಟರ್‌ವರೆಗೂ ಕ್ರಮಿಸಲಿದ್ದು, ಹತ್ತಿರದ ನಗರಗಳಿಗೆ ಸುಲಭವಾಗಿ ಓಡಾಟ ನಡೆಸಲು ಸಾಧ್ಯವಾಗಲಿದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ಹೊಸ ಹೀರೋ ವಿಡಾ ವಿ2 ಪ್ರೊ ಟಾಪ್-ಎಂಡ್ ಮಾಡೆಲ್ ಆಗಿದ್ದು, ಹೆಚ್ಚು ಶಕ್ತಿಯುತವಾದ ಸ್ಕೂಟರ್ ಎಂದೇ ಮನೆ ಮಾತಾಗಿದೆ. ಇದು 3.94 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಪೂರ್ತಿ ಚಾರ್ಜ್‌ನಲ್ಲಿ 165 ಕಿಲೋಮೀಟರ್‌ವರೆಗೂ ಓಡುತ್ತದೆ. 90 ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಹೀರೋ ವಿಡಾ ವಿ2 ಸ್ಕೂಟರ್‌ನ ಎಲ್ಲ ಮಾಡೆಲ್‌ಗಳು ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ. ಬಹುಮುಖ್ಯವಾಗಿ ಟಿಎಫ್‌ಟಿ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (7-ಇಂಚು), ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರೀ-ಜೆನ್ ಬ್ರೇಕಿಂಗ್, ಕೀಲೆಸ್ ಎಂಟ್ರಿ ಮತ್ತು ಕ್ರೂಸ್ ಕಂಟ್ರೋಲ್‌ನ್ನು ಒಳಗೊಂಡಿವೆ. ಇದರೊಟ್ಟಿಗೆ ಮ್ಯಾಟ್ ನೆಕ್ಸಸ್ ಬ್ಲೂ-ಗ್ರೇ & ಗ್ಲೋಸಿ ಸ್ಪೋರ್ಟ್ಸ್ ರೆಡ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿವೆ.
ಇನ್ನು, ನೂತನ ಹೀರೋ ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೂ ಕೂಡ ಹೆಚ್ಚಿನ ಖುಷಿ ತಂದಿದೆ. ಈ ಸ್ಕೂಟರ್ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಮುಂಬರುವ ದಿನಗಳಲ್ಲಿ ವಿಡಾ ವಿ2 ಸ್ಕೂಟರ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








