ಬಡವರು ತೆಗೆದುಕೊಳ್ಳಬಹುದು: ಅತಿ ಕಡಿಮೆ ಬೆಲೆಗೆ ಹೊಸ Hero VIDA VX2 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ಭರ್ಜರಿ ವೈಶಿಷ್ಟ್ಯಗಳು!

ಹೀರೋ ಮೋಟೊಕಾರ್ಪ್ (Hero MotoCorp), ವಿಶ್ವಾಸಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿಡಾ ವಿ2 (Vida V2) ಎಲೆಕ್ಟ್ರಿಕ್ ಸ್ಕೂಟರ್‌ನ್ನು ವಿವಿಧ ರೂಪದಲ್ಲಿ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಹೊಚ್ಚ ಹೊಸ ವಿಡಾ ವಿಎಕ್ಸ್2 (Vida Vx2) ಇ-ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಅತಿ ಕಡಿಮೆ ಬೆಲೆಯಲ್ಲಿ ಕೂಡ ಲಭ್ಯವಿದೆ. ಜೊತೆಗೆ ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ನೂತನ ಹೀರೋ ವಿಡಾ ವಿಎಕ್ಸ್2 (Hero Vida Vx2) ಎಲೆಕ್ಟ್ರಿಕ್ ಸ್ಕೂಟರ್, ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ ವಿಎಕ್ಸ್2 ಗೋ (Vx2 Go) ಹಾಗೂ ವಿಎಕ್ಸ್2 ಪ್ಲಸ್ (Vx2 Plus). ಇವೆರೆಡು ಸ್ಕೂಟರ್‌ಗಳು ಸ್ಟ್ಯಾಂಡರ್ಡ್ ಹಾಗೂ ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್ - BaaS) ಪ್ಲ್ಯಾನ್‌ನಡಿ ಗ್ರಾಹಕರ ಖರೀದಿಗೆ ಲಭ್ಯವಿವೆ.

Hero VIDA VX2 Electric Scooter Launched Rs 59 490 Starting Price Details

ಸ್ಟ್ಯಾಂಡರ್ಡ್ ಆಗಿ ಹೊಸ ವಿಡಾ ವಿಎಕ್ಸ್2 ಗೋ ಇ-ಸ್ಕೂಟರ್ ರೂ.99,490 ಹಾಗೂ ವಿಡಾ ವಿಎಕ್ಸ್2 ಪ್ಲಸ್ ರೂ.1.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಹಾಗೆಯೇ ಬಾಸ್ ಪ್ಲ್ಯಾನ್‌ನಡಿ ವಿಡಾ ವಿಎಕ್ಸ್2 ಗೋ ರೂ.59,490 ಹಾಗೂ ವಿಡಾ ವಿಎಕ್ಸ್2 ಪ್ಲಸ್ ರೂ.64,990 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಆದರೆ ಬ್ಯಾಟರಿ ಬಳಕೆಗೆ ಅನುಗುಣವಾಗಿ ಗ್ರಾಹಕರು ಪ್ರತಿ ಕಿಲೋಮೀಟರ್‌ಗೆ ರೂ.0.96 ಶುಲ್ಕವನ್ನು ಪಾವತಿ ಮಾಡಬೇಕು.

ವಿಡಾ ವಿಎಕ್ಸ್2 ಗೋ ಇ-ಸ್ಕೂಟರ್ 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 92 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ವಿಡಾ ವಿಎಕ್ಸ್2 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ 3.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 142 ಕಿಲೋಮೀಟರ್ ಕ್ರಮಿಸುತ್ತದೆ.

Hero VIDA VX2 Electric Scooter Launched Rs 59 490 Starting Price Details

ಹೊಸ ಹೀರೋ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಪ್ಯಾಕ್, ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಶೇಕಡ 0 ರಿಂದ 80% ಚಾರ್ಜ್ ಆಗಲು 1 ಗಂಟೆ ತೆಗೆದುಕೊಳುತ್ತದೆ. ಹಾಗೆಯೇ ನಾರ್ಮಲ್ ಚಾರ್ಜರ್ ಉಪಯೋಗ ಮಾಡಿದಾಗ, ಅಷ್ಟೇ ಪ್ರಮಾಣ ಚಾರ್ಜ್ ಆಗುವುದಕ್ಕೆ 6 ಗಂಟೆ ಬೇಕಾಗುತ್ತದೆ.

ನೂತನ ವಿಡಾ ವಿಎಕ್ಸ್2 ಇ-ಸ್ಕೂಟರ್‌ ತುಂಬಾ ಅಚ್ಚುಕಟ್ಟಾದ ಸರಳವಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾದ ಹೆಡ್‌ಲೈಟ್ ಹಾಗೂ ಡಿಆರ್‌ಎಲ್‌ಗಳನ್ನು ಹೊಂದಿದೆ. ಇದರೊಂದಿಗೆ ಗ್ರೇ, ಬ್ಲೂ, ರೆಡ್ ಯೆಲ್ಲೋ ಹಾಗೂ ಬ್ಲ್ಯಾಕ್ ಎಂಬ 7 ಆಕರ್ಷಕವಾದ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿದಾರರಿಗೆ ದೊರೆಯುತ್ತದೆ.

Hero VIDA VX2 Electric Scooter Launched Rs 59 490 Starting Price Details

ಈ ಹೀರೋ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್, ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್, ಕ್ಲೌಡ್ ಕನೆಕ್ಟಿವಿಟಿ, ಅಂಡರ್ ಸೀಟ್ ಸ್ಟೋರೇಜ್, ರೇರ್ ಪಿಲಿಯನ್ ಬ್ಯಾಕ್‌ರೆಸ್ಟ್, ಡೈಮಂಡ್ ಕಟ್ ಫಿನಿಶ್ ಅಲಾಯ್ ವೀಲ್‌ಗಳು ಮತ್ತು ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಪ್ರಸ್ತುತ ಖರೀದಿಗೆ ದೊರೆಯುವ ಹೀರೋ ವಿಡಾ ವಿ2 ಇ-ಸ್ಕೂಟರ್ ವಿಶೇಷತೆಗಳೇನು:

ಇದು ವಿ2 ಲೈಟ್, ವಿ2 ಪ್ಲಸ್ & ವಿ2 ಪ್ರೊ ಎಂಬ 3 ವಿಧದಲ್ಲಿ ಗ್ರಾಹಕರ ಖರೀದಿಗೆ ಸಿಗುತ್ತದೆ. ರೂ.96,000 ರಿಂದ ರೂ.1.35 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್), 3.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 3.94 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 94 ರಿಂದ 165 ಕಿಲೋಮೀಟರ್ ಓಡುತ್ತದೆ. ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

More from DriveSpark

Article Published On: Wednesday, July 2, 2025, 8:33 [IST]
English summary
Hero vida vx2 electric scooter launched rs 59490 starting price details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+