ಇನ್ನು ಬಡವರು ತೆಗೆದುಕೊಳ್ಳಬಹುದು: ಮೊದಲೇ ಅಗ್ಗ.. Hero VIDA VX2 ಬೆಲೆ ರೂ.15,000 ಇಳಿಕೆ!
ಇತ್ತೀಚೆಗೆ ಹೀರೋ ವಿಡಾ ವಿಎಕ್ಸ್2 (Hero Vida Vx2) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇದು ಅತಿ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಬಂದಿದ್ದು, ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಸದ್ಯ, ಇದೇ 'ವಿಡಾ ವಿಎಕ್ಸ್2' ಇ-ಸ್ಕೂಟರ್‌ನ್ನು ಖರೀದಿ ಮಾಡಬೇಕೆಂದಿರುವ ಗ್ರಾಹಕರಿಗೆ ಭಾರೀ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ನೂತನ 'ಹೀರೋ ವಿಡಾ ವಿಎಕ್ಸ್2' ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ಸೀಮಿತ ಅವಧಿಯ ಕೊಡುಗೆಯಾಗಿ ರೂ.15,000 ವರೆಗೆ ಇಳಿಕೆ ಮಾಡಲಾಗಿದೆ. ಇನ್ಮುಂದೆ ವಿಡಾ ವಿಎಕ್ಸ್2 ಗೋ (Vida VX2 Go) ರೂಪಾಂತರ, ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್-BaaS) ಪ್ಲ್ಯಾನ್‌ನಡಿ, ರೂ.44,990 ಹಾಗೂ ಸ್ಟ್ಯಾಂಡರ್ಡ್ ಆಗಿ ರೂ.84,990 (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಈ ಮೊದಲು ಕ್ರಮವಾಗಿ 59,490 ಹಾಗೂ ರೂ.99,490 ದರವನ್ನು ಪಡೆದಿತ್ತು.

ಅದೇ ರೀತಿಯಲ್ಲಿ ವಿಡಾ ವಿಎಕ್ಸ್2 ಪ್ಲಸ್ (Vida VX2 Plus) ರೂಪಾಂತರ, ದರ ಕಡಿತದ ಬಳಿಕ, ಬಾಸ್ ಪ್ಲ್ಯಾನ್‌ನಡಿ ರೂ.57,990 ಹಾಗೂ ಸ್ಟ್ಯಾಂಡರ್ಡ್ ಆಗಿ ರೂ.99,990 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ ರೂಪಾಂತರ ಮಾರಾಟಕ್ಕೆ ಬಂದಾಗ ಕ್ರಮವಾಗಿ ರೂ.64,990 ಮತ್ತು ರೂ.1.10 ಲಕ್ಷ ದರವನ್ನು ಹೊಂದಿತ್ತು.
ಹೀರೋ ವಿಡಾ ವಿಎಕ್ಸ್2 ವಿಶೇಷತೆಗಳೇನು:
ಇದರ 'ಗೋ' ರೂಪಾಂತರ, 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 92 ಕಿ.ಮೀ ಕ್ರಮಿಸುತ್ತದೆ. ಮತ್ತೊಂದು 'ಪ್ಲಸ್' ರೂಪಾಂತರ, 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 142 ಕಿ.ಮೀ ಓಡುತ್ತದೆ.

ನೂತನ ಹೀರೋ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಪಡೆದಿದೆ. ಇದು ನೋಡುಗರನ್ನು ಸೆಳೆಯುತ್ತದೆ. ಅತ್ಯುತ್ತಮವಾದ ಹೆಡ್‌ಲೈಟ್ & ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಗ್ರೇ, ಬ್ಲೂ, ರೆಡ್ ಯೆಲ್ಲೋ ಮತ್ತು ಬ್ಲ್ಯಾಕ್ ಎಂಬ 7 ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ವಿಡಾ ವಿಎಕ್ಸ್2 ಇ-ಸ್ಕೂಟರ್‌ನ ಬ್ಯಾಟರಿ ಪ್ಯಾಕ್, ಫಾಸ್ಟ್ ಚಾರ್ಜರ್‌ನ್ನು ಉಪಯೋಗ ಮಾಡಿದಾಗ 0 ರಿಂದ 80% ಚಾರ್ಜ್ ಆಗಲು 1 ಗಂಟೆ ತೆಗೆದುಕೊಳುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 4.2 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಇದು ಹಲವು ನವೀನ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್, ಕ್ಲೌಡ್ ಕನೆಕ್ಟಿವಿಟಿ, ಅಂಡರ್ ಸೀಟ್ ಸ್ಟೋರೇಜ್, ಡೈಮಂಡ್ - ಕಟ್ ಫಿನಿಶ್ ಅಲಾಯ್ ವೀಲ್‌ಗಳು ಹಾಗೂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.
ಹೀರೋ ವಿಡಾ ವಿ2 ಇ-ಸ್ಕೂಟರ್ ಸಹ ಗ್ರಾಹಕರಿಗೆ ಸಿಗುತ್ತದೆ:
ಈ ಎಲೆಕ್ಟ್ರಿಕ್ ಸ್ಕೂಟರ್ ಬಜೆಟ್ ಬೆಲೆಯಲ್ಲಿಯೂ ಸಿಗಲಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಇದು ಕನಿಷ್ಠ ರೂ.96,000 ಹಾಗೂ ಗರಿಷ್ಠ ರೂ.1.35 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ. ಸಂಪೂರ್ಣ ಚಾರ್ಜ್‌ನಲ್ಲಿ 94 ರಿಂದ 165 ಕಿ.ಮೀ ವರೆಗೂ ರೇಂಜ್ ಕೊಡುತ್ತದೆ. ಇದರೊಂದಿಗೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ಹೊಸ 'ಹೀರೋ ವಿಡಾ ವಿಎಕ್ಸ್2' ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಈ ಸ್ಕೂಟರ್ ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡರೂ ಅಚ್ಚರಿಯಿಲ್ಲ ಎಂದು ಹೇಳಬಹುದು.


Click it and Unblock the Notifications








