HERO: 66 ಕಿ.ಮೀ ಮೈಲೇಜ್.. ಈ ಹೀರೋ ಬೈಕ್‌ನ ಹೊಸ ವೇರಿಯೆಂಟ್ ಬಿಡುಗಡೆ.. ಬೆಲೆಯೂ ಅಗ್ಗ, ವಿಶೇಷತೆಗಳೇನು?
ಹೀರೋ ಎಕ್ಸ್‌ಟ್ರೀಮ್ 125ಆರ್ (Hero Xtreme 125R) ಪ್ರಮುಖ ಮೋಟಾರ್‌ಸೈಕಲ್ ಆಗಿದೆ. ಸದ್ಯ, ಈ ಬೈಕ್‌ನ ಹೊಸ ರೂಪಾಂತರವಾದ (ವೇರಿಯೆಂಟ್) 'ಡುಯಲ್ ಚಾನೆಲ್ ಎಬಿಎಸ್'ನ್ನು ಬಿಡುಗಡೆಗೊಳಿಸಲಾಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸಲು ನೆರವಾಗಲಿದೆ. ಜೊತೆಗಿದು ಕೈಗೆಟುಕುವ ದರದಲ್ಲೂ ಮಾರಾಟಕ್ಕೆ ಬಂದಿದೆ. ಬನ್ನಿ, ನೂತನ ಬೈಕ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ನೂತನ ಹೀರೋ ಎಕ್ಸ್‌ಟ್ರೀಮ್ 125ಆರ್ ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ರೂಪಾಂತರ, ರೂ.1.04 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಪಡೆದಿದೆ. ಸ್ವಲ್ಪ ಮಟ್ಟಿಗೆ ಗ್ರಾಫಿಕ್ಸ್ ಬದಲಾಗಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ ಹಾಗೂ ಸ್ಪ್ಲಿಟ್-ಸೀಟ್ ಸೆಟಪ್‌ನ್ನು ಹೊಂದಿದೆ. ಬ್ಲ್ಯಾಕ್ ಪರ್ಲ್ ರೆಡ್, ಬ್ಲ್ಯಾಕ್ ಮ್ಯಾಟ್ ಶಾಡೋ ಗ್ರೇ ಹಾಗೂ ಬ್ಲ್ಯಾಕ್ ಲೀಫ್ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಬೈಕ್ ಹೆಚ್ಚು ವಿಶಾಲ ಗಾತ್ರದಲ್ಲಿದೆ. 2,009 ಮಿ.ಮೀ ಉದ್ದ, 793 ಮಿ.ಮೀ ಅಗಲ ಮತ್ತು 1,051 ಮಿ.ಮೀ ಎತ್ತರವಿದೆ. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1319 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 136 ಕೆಜಿ ತೂಕವಿದೆ.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 124.7 ಸಿಸಿ ಏರ್-ಕೂಲ್ಡ್, 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 8250 ಆರ್‌ಪಿಎಂನಲ್ಲಿ 11.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6500 ಆರ್‌ಪಿಎಂನಲ್ಲಿ 10.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ನೂತನ 'ಹೀರೋ ಎಕ್ಸ್‌ಟ್ರೀಮ್ 125ಆರ್' ಮೋಟಾರ್‌ಸೈಕಲ್ ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. 66 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. 95 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 6.3 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಈ ಬೈಕ್ 4.2 ಇಂಚಿನ ಕಲರ್ ಎಲ್‍ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಐಡಲ್ ಸ್ಟಾರ್ಟ್-ಸ್ಟಾಪ್ ಟೆಕ್ನಾಲಜಿ, ಎಂಜಿನ್ ಕಿಲ್ ಸ್ವಿಚ್ ಹಾಗೂ ಸ್ಯಾರಿ ಗಾರ್ಡ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸೀಟ್ ಎತ್ತರ 794 ಮಿ.ಮೀ ಇದೆ. 17 ಇಂಚಿನ ಅಲಾಯ್ ವೀಲ್‌ಗಳು ಮತ್ತು ಉತ್ತಮವಾದ ಟೈರ್‌ಗಳನ್ನು ಪಡೆದಿದೆ.
ಹೊಸ ಹೀರೋ ಎಕ್ಸ್‌ಟ್ರೀಮ್ 125ಆರ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಡುಯಲ್ ಚಾನೆಲ್ ಎಬಿಎಸ್ ಮಾತ್ರವಲ್ಲದೆ, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹೈಡ್ರಾಲಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) 7-ಸ್ಟೆಪ್ ಅಡ್ಜಸ್ಟೇಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಡುಯಲ್ ಚಾನೆಲ್ ಎಬಿಎಸ್ ಉಪಯೋಗವೇನು:
ಇದು ಬಹುಮುಖ್ಯವಾದ ಸುರಕ್ಷತಾ ವೈಶಿಷ್ಟ್ಯವಾಗಿದೆ. ಬೈಕ್ ಓಡಿಸುವಾಗ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ, ಅದರ ಎರಡು ವೀಲ್ ಲಾಕ್ ಆಗುವುದನ್ನು ತಪ್ಪಿಸುತ್ತದೆ. ವಾಹನದ ಮೇಲೆ ಪೂರ್ತಿ ಹಿಡಿತ ಸಾಧಿಸಲು ನೆರವಾಗಲಿದ್ದು, ಸ್ಕಿಡ್ ಆಗುತ್ತದೆ ಎಂಬ ಭಯವಿರುವುದಿಲ್ಲ. ಹಾಗೆಯೇ ಅಪಘಾತವಾಗುವ ಸಾಧ್ಯತೆಯನ್ನು 35 ರಿಂದ 45% ಕಡಿಮೆಗೊಳಿಸುತ್ತದೆ.
ಹೀರೋ ಎಕ್ಸ್‌ಟ್ರೀಮ್ 125ಆರ್ ಇತರೆ ವೇರಿಯೆಂಟ್‌ಗಳು ಯಾವುವು:
ಈ ಬೈಕ್ 'ಡುಯಲ್ ಚಾನೆಲ್ ಎಬಿಎಸ್'ನೊಂದಿಗೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಅವುಗಳೆಂದರೆ ಎಬಿಎಸ್ ಸಿಂಗಲ್ ಸೀಟ್ (ರೂ.92,500), ಎಬಿಎಸ್ ಸ್ಪ್ಲಿಟ್-ಸೀಟ್ (ರೂ.92,500) ಹಾಗೂ ಐಬಿಎಸ್ (ರೂ.89,000). ಇವು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿವೆ.


Click it and Unblock the Notifications








