Hero: ಹೀರೋದ ಈ ಬೈಕ್‌ಗೆ ಫುಲ್ ಡಿಮ್ಯಾಂಡ್.. ಮುಗಿಬಿದ್ದ ಗ್ರಾಹಕರು, ಮನೆಗೆ ತರಲು ಇಷ್ಟೊಂದು ದಿನಗಳು ಬೇಕೇ?
ಹೀರೋ ಮೋಟೋಕಾರ್ಪ್ (Hero MotoCorp), ಸಾಮಾನ್ಯ ಬೈಕ್‌ಗಳೊಂದಿಗೆ ವಿವಿಧ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಕೂಡ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅದರಲ್ಲೂ ಎಕ್ಸ್‌ಟ್ರೀಮ್ 250ಆರ್, ಎಕ್ಸ್‌ಪಲ್ಸ್ 210 ಹಾಗೂ ಕರಿಜ್ಮಾ ಎಕ್ಸ್‌ಎಂಆರ್ 210 ಬೈಕ್‌ಗಳು ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಈ ಮೋಟಾರ್‌ಸೈಕಲ್‌ಗಳನ್ನು 'ಪ್ರೀಮಿಯಾ' ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸಲಾಗುತ್ತದೆ. ವಿಶೇಷವಾಗಿ ಪ್ರಖ್ಯಾತ 'ಎಕ್ಸ್‌ಟ್ರೀಮ್ 250ಆರ್'ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಗ್ರಾಹಕರು ಸಹ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ.
ಸದ್ಯ, ನೂತನ ಹೀರೋ ಎಕ್ಸ್‌ಟ್ರೀಮ್ 250ಆರ್ (Hero Xtreme 250R) ಮೋಟಾರ್‌ಸೈಕಲ್, ಕಾರುಗಳಂತೆ ಅತಿ ಹೆಚ್ಚಿನ ಕಾಯುವಿಕೆ ಅವಧಿಗೆ (Waiting Period) ಸಾಕ್ಷಿಯಾಗಿದೆ. ನೀವು ಈ ಬೈಕ್‌ನ್ನು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು ಸರಿ ಸುಮಾರು 60 ದಿನಗಳವರೆಗೆ ತಾಳ್ಮೆಯಿಂದ ಕಾಯಲೇಬೇಕು.

ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್, ಕೊಂಚ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ರೂ.1.80 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಪಡೆದಿದೆ. ಹೊರಭಾಗದಲ್ಲೂ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಇದು ನೋಡುಗರನ್ನು ಸೆಳೆಯುತ್ತದೆ. ಫೈರ್‌ಸ್ಟಾರ್ಮ್ ರೆಡ್, ಸ್ಟೆಲ್ತ್ ಬ್ಲ್ಯಾಕ್ ಮತ್ತು ನಿಯಾನ್ ಶೂಟಿಂಗ್ ಸ್ಟಾರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಹೀರೋ ಎಕ್ಸ್‌ಟ್ರೀಮ್ 250ಆರ್ ಮೋಟಾರ್‌ಸೈಕಲ್ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 249 ಸಿಸಿ ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 30 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 25 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. 37 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ನೂತನ ಎಕ್ಸ್‌ಟ್ರೀಮ್ 250ಆರ್ ಬೈಕ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್-ಬೈ-ಟರ್ನ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡಿದೆ. ಈ ಮೋಟಾರ್‌ಸೈಕಲ್ ಸರಿ ಸುಮಾರು 167.7 ಕೆಜಿ ತೂಕವಿದ್ದು, 11.5-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.
ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ ಮುಂಭಾಗ (ಫ್ರಂಟ್) ಯುಎಸ್‌ಡಿ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) 6-ಸ್ಟೆಪ್ ಪ್ರೆಲೋಡ್ ಅಡ್ಜಸ್ಟಬಲ್ ಮೊನೊಶಾಕ್ ಸಸ್ಪೆಸ್ಷನ್ ಸೆಪಟ್ ಆಯ್ಕೆಯನ್ನು ಹೊಂದಿದೆ. ಸವಾರರ ಸುರಕ್ಷತೆಗಾಗಿ ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೀರೋ ಕರಿಜ್ಮಾ ಎಕ್ಸ್ಎಂಆರ್ 210 ಪ್ರೀಮಿಯಂ ಮೋಟಾರ್‌ಸೈಕಲ್ ಕೂಡ ಖರೀದಿ ಲಭ್ಯ: ಇದು ರೂ.1.81 ಲಕ್ಷದಿಂದ ರೂ.2.01 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ. 210 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 41.55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 4.2-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಹೀರೋ ಎಕ್ಸ್‌ಪಲ್ಸ್ 210 ಸಹ ಗ್ರಾಹಕರಿಗೆ ಸಿಗುತ್ತದೆ: ಈ ಬೈಕ್ ರೂ.1.76 ಲಕ್ಷದಿಂದ ರೂ.1.86 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. 210 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 40 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








