ಭಾರತದಲ್ಲಿ ಸ್ಕೂಟರ್‌ಗಳ ಕಿಂಗ್: 25 ವರ್ಷಗಳಿಂದ ನಂ.1 ಸ್ಥಾನ: ಬಡವರ ಫೇವರೆಟ್
ಭಾರತದಲ್ಲಿ ಸ್ಕೂಟರ್ ವಿಭಾಗವನ್ನು ಆಳುತ್ತಿರುವ ಏಕೈಕ ವಾಹನವೆಂದರೆ ಹೋಂಡಾ ಆಕ್ಟಿವಾ (Honda Activa), ಇದು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ನಂ.1 ಸ್ಕೂಟರ್ ಆಗಿ ಮುಂದುವರೆಯುತ್ತಿದೆ. ಈ ಸ್ಕೂಟರ್ ಮಾರುಕಟ್ಟೆಗೆ ಬಂದು 25 ವರ್ಷಗಳಾಗಿದ್ದು, ಇಂದಿಗೂ ತನ್ನ ಬೇಡಿಕೆಯಲ್ಲಿ ಕುಸಿತ ಕಂಡಿಲ್ಲ. ನೀವು ಕೂಡ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ ಸದ್ಯ 2025 ರ ಹೋಂಡಾ ಆಕ್ಟಿವಾ 125 ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.
ಬೆಂಗಳೂರಿನಲ್ಲಿ ಹೋಂಡಾ ಆಕ್ಟಿವಾ 125 ಆನ್ - ರೋಡ್ ಬೆಲೆಯು ರೂ.1,13,996 ರಿಂದ ಪ್ರಾರಂಭವಾಗುತ್ತದೆ. ಆಕ್ಟಿವಾ 125 ಭಾರತದಲ್ಲಿ 3 ಆವೃತ್ತಿಗಳು ಮತ್ತು 8 ಬಣ್ಣಗಳಲ್ಲಿ ಲಭ್ಯವಿದೆ. ಬೆಂಗಳೂರಿನಲ್ಲಿ ಟಾಪ್ ಎಂಡ್ ವೇರಿಯಂಟ್ ಆನ್ - ರೋಡ್ ಬೆಲೆಯು ರೂ.1,18,321 ಗಳಾಗಿದೆ. ಆಕ್ಟಿವಾ 125 ಇಎಂಐ ಆಯ್ಕೆಯಲ್ಲೂ ಲಭ್ಯವಿದ್ದು, ಬೆಂಗಳೂರಿನಲ್ಲಿ ಇಎಂಐ ರೂ.3,911 ರಿಂದ ಪ್ರಾರಂಭವಾಗುತ್ತದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್, 123.92cc BS6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8.3 bhp ಪವರ್ ಮತ್ತು 10.5 Nm ಟಾರ್ಕ್ ಹೊರಹಾಕುತ್ತದೆ. ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ಗಳೊಂದಿಗೆ, ಹೋಂಡಾ ಆಕ್ಟಿವಾ 125 ಎರಡೂ ಚಕ್ರಗಳ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಈ ಆಕ್ಟಿವಾ 125 ಸ್ಕೂಟರ್ 106 ಕೆ.ಜಿ ತೂಗುತ್ತದೆ ಮತ್ತು 5.3 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.
ಹೋಂಡಾ ಆಕ್ಟಿವಾ 125 ಅನ್ನು ಡ್ರಮ್, ಡ್ರಮ್ ಅಲಾಯ್, ಡಿಸ್ಕ್ ಮತ್ತು H - ಸ್ಮಾರ್ಟ್ ವೇರಿಯೆಂಟ್‌ಗಳಲ್ಲಿ ಸಿಗುತ್ತದೆ. ಬಾಡಿ-ಕಲರ್ ಕೌಲ್, ಏಪ್ರನ್ - ಮೌಂಟೆಡ್ ಫ್ರಂಟ್ ಟರ್ನ್ ಇಂಡಿಕೇಟರ್‌ಗಳು, ಬಾಡಿ-ಕಲರ್ ಫ್ರಂಟ್ ಫೆಂಡರ್ ಮತ್ತು ಬಾಡಿ ಪ್ಯಾನೆಲ್ ಮತ್ತು ಏಪ್ರನ್‌ನ ಮೇಲೆ ಕ್ರೋಮ್ ಅಕ್ಸೆಂಟ್‌ನೊಂದಿಗೆ ಸಿಂಗಲ್-ಪಾಡ್ ಹೆಡ್‌ಲೈಟ್‌ನೊಂದಿಗೆ ಬರುತ್ತವೆ.

ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಹೆವಿ ಗ್ರೇ ಮೆಟಾಲಿಕ್ (ಡ್ರಮ್ ರೂಪಾಂತರದಲ್ಲಿ ಲಭ್ಯವಿಲ್ಲ), ರೆಬೆಲ್ ರೆಡ್ ಮೆಟಾಲಿಕ್, ಪರ್ಲ್ ಪ್ರೆಷಿಯಸ್ ವೈಟ್ ಮತ್ತು ಮಿಡ್‌ನೈಟ್ ಬ್ಲೂ ಮೆಟಾಲಿಕ್ ಎಂಬ ಬಣ್ಣಗಳಲ್ಲಿ ಸಿಗಲಿದೆ. LED ಪೊಸಿಷನ್ ಲ್ಯಾಂಪ್‌ಗಳು, ವರ್ಧಿತ ಸ್ಮಾರ್ಟ್ ಪವರ್ (eSP) ತಂತ್ರಜ್ಞಾನ, ACG ಸ್ಟಾರ್ಟರ್, ಐಡ್ಲಿಂಗ್ ಸ್ಟಾಪ್ ಸಿಸ್ಟಮ್, ಸೈಡ್ ಸ್ಟ್ಯಾಂಡ್ ಎಂಜಿನ್ ಇನ್ಹಿಬಿಟರ್ ಫಂಕ್ಷನ್ ಮತ್ತು ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ ಒಳಗೊಂಡಿದೆ.
ಆಕ್ಟಿವಾ 125 ನಲ್ಲಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೆಮಿ - ಡಿಜಿಟಲ್ ಮಾಡ್ಯೂಲ್ ಅನ್ನು ಹೊಂದಿದ್ದು, ಇದರಲ್ಲಿ ಓಡೋಮೀಟರ್, ಗಡಿಯಾರ, ಇಕೋ ಇಂಡಿಕೇಟರ್ ಮತ್ತು ಸರ್ವಿಸ್ ಡ್ಯೂ ಇಂಡಿಕೇಟರ್ ಕುರಿತು ಮಾಹಿತಿಯನ್ನು ಒದಗಿಸುತ್ತದೆ. H-ಸ್ಮಾರ್ಟ್ ವೇರಿಯೆಂಟ್ ಸ್ಮಾರ್ಟ್ ಕೀ ಸಿಸ್ಟಮ್ ಪಡೆದಿದೆ, ಇದು ಸ್ಕೂಟರ್‌ಗೆ ಸ್ಮಾರ್ಟ್ ಫೈಂಡ್, ರಿಮೋಟ್ ಅನ್‌ಲಾಕ್, ಕೀಲೆಸ್ ಇಗ್ನಿಷನ್ ಮತ್ತು ಆಂಟಿ-ಥೆಫ್ಟ್ ಸಿಸ್ಟಮ್ ನೀಡುತ್ತದೆ.

H-ಸ್ಮಾರ್ಟ್ ವೇರಿಯೆಂಟ್‌ನಲ್ಲಿರುವ ಸ್ಮಾರ್ಟ್ ಕೀಯನ್ನು ಇಂಧನ ಮುಚ್ಚಳವನ್ನು ತೆರೆಯಲು ಮತ್ತು ಸೀಟಿನ ಕೆಳಗಿನ ಸಂಗ್ರಹಣೆಯನ್ನು ಬಳಸಲು ಸಹ ಬಳಸಬಹುದು. ಟೆಲಿಸ್ಕೋಪಿಕ್ ಮುಂಭಾಗದ ಫೋರ್ಕ್ ಅಂಡರ್‌ಬೋನ್ ಫ್ರೇಮ್ ಮತ್ತು ಮೂರು-ಹಂತದ ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಸ್ಪ್ರಿಂಗ್ ಸಸ್ಪೆನ್ಷನ್ ಹೊಂದಿದೆ. ಸ್ಕೂಟರ್ 12 - ಇಂಚಿನ ಮುಂಭಾಗ ಮತ್ತು 10 - ಇಂಚಿನ ಹಿಂಭಾಗದ ವೀಲ್‌ಗಳನ್ನು ಹೊಂದಿದೆ.
ಬೇಸ್ ವೇರಿಯೆಂಟ್‌ಗಳಲ್ಲಿ ಎರಡೂ ವೀಲ್‌ಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ. ಆದರೆ ಟಾಪ್ ವೇರಿಯೆಂಟ್‌ಗಳು ಮುಂಭಾಗದಲ್ಲಿ 190mm ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130mm ಡ್ರಮ್ ಬ್ರೇಕ್ ಹೊಂದಿವೆ. ಆಕ್ಟಿವಾ 125 ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಜುಪಿಟರ್ 125, ಹೀರೋ ಡೆಸ್ಟಿನಿ 125, ಯಮಹಾ ಫ್ಯಾಸಿನೊ 125 ಮತ್ತು ಸುಜುಕಿ ಆಕ್ಸೆಸ್ 125 ನಂತಹವುಗಳಿಗೆ ಪ್ರತಿಸ್ಪರ್ಧಿಯಾಗಿದೆ.


Click it and Unblock the Notifications








