ಜಿದ್ದಿಗೆ ಬಿದ್ದ ಸುಜುಕಿ & ಟಿವಿಎಸ್: ಹೋಂಡಾ ಆಕ್ಟಿವಾದ ನಂ.1 ಸ್ಥಾನಕ್ಕೆ ಕುತ್ತು? ಹೊಸ 2 ಸ್ಕೂಟರ್‌ಗಳು ಬಿಡುಗಡೆಗೆ ಸಜ್ಜು!
ಹೋಂಡಾ ಆಕ್ಟಿವಾ (Honda Activa) ನಂಬರ್ 1 ಸ್ಕೂಟರ್ ಆಗಿದೆ. ಇದರ ಜಾಗವನ್ನು ಆಕ್ರಮಿಸಿಕೊಳ್ಳಲು ಮತ್ತೊಂದು ಸ್ಕೂಟರ್‌ಗೆ ಸಾಧ್ಯವಾಗಿಲ್ಲ. '2026' ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದೆ. ಸುಜುಕಿ ಹಾಗೂ ಟಿವಿಎಸ್ ಕಂಪನಿಗಳಿಂದ 2 ಹೊಚ್ಚ ಹೊಸ ಸ್ಕೂಟರ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇವು ಮಾರಾಟಕ್ಕೆ ಬಂದ ಮೇಲೆ 'ಆಕ್ಟಿವಾ'ದೊಂದಿಗೆ ಸ್ಪರ್ಧಿಸಲಿದ್ದು, ಅದರ ಮೊದಲ ಸ್ಥಾನಕ್ಕೂ ಗಟ್ಟಿ ಪೈಪೋಟಿ ನೀಡಬಹುದು ಎಂದು ಹೇಳಲಾಗಿದೆ.
ಸುಜುಕಿ ಇ ಆಕ್ಸೆಸ್ (Suzuki e Access):
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಇದು 2026ರ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ರೂ.1 ಲಕ್ಷದಿಂದ ರೂ.1.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದ್ದು, ಎಲ್ಲ ವರ್ಗದವರು ಸುಲಭವಾಗಿ ಕೊಂಡುಕೊಳ್ಳಬಹುದಾಗಿದೆ.

ಇದು ತುಂಬಾ ಚೆನ್ನಾಗಿರುವ ಸರಳವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಇಂಡಿಕೇಟರ್‌ಗಳು ಮತ್ತು ಟೈಲ್ ಲೈಟ್‌ನ್ನು ಪಡೆದಿದೆ. ಜೊತೆಗೆ ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್, ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ, ಪರ್ಲ್ ಜೇಡ್ ಗ್ರೀನ್ & ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,305 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.
ನೂತನ 'ಇ ಆಕ್ಸೆಸ್' 3.07 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 95 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 71 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇರರಲ್ಲಿರುವ ಬ್ಯಾಟರಿಯು ಡಿಸಿ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಶೇಕಡ 0 ರಿಂದ 80% ಚಾರ್ಜ್ ಆಗಲು ಸರಿ ಸುಮಾರು 1 ಗಂಟೆ 12 ನಿಮಿಷ ತೆಗೆದುಕೊಳ್ಳುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ 4.2 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿಮೋಟ್ ಸ್ಟಾರ್ಟ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಕಾಯಿಲ್-ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.
ಟಿವಿಎಸ್ ಜೂಪಿಟರ್ ಸಿಎನ್‌ಜಿ (TVS Jupiter CNG):
ಇದು ವಿಶ್ವದ ಮೊದಲ 'ಸಿಎನ್‌ಜಿ' ಚಾಲಿತ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. 2026ರ ಏಪ್ರಿಲ್‌ನಲ್ಲಿ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.95,000 (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಈ ಸ್ಕೂಟರ್ ವಿನ್ಯಾಸವು ಸ್ಟ್ಯಾಂಡರ್ಡ್ 'ಜೂಪಿಟರ್ 125'ಗೆ ಬಹುತೇಕ ಹೋಲಿಕೆಯಾಗುತ್ತದೆ.
ಹೊಸ 'ಜೂಪಿಟರ್ ಸಿಎನ್‌ಜಿ' ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 124.8-ಸಿಸಿ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 7.1 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 9.4 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ಈ ಸ್ಕೂಟರ್ 2-ಲೀಟರ್‌ನಷ್ಟು ಪೆಟ್ರೋಲ್ ಹಾಗೂ 1.4 ಕೆಜಿಯಷ್ಟು ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. 226 ಕಿಲೋಮೀಟರ್‌ವರೆಗೆ ಕ್ರಮಿಸಬಲ್ಲದು. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಯುಎಸ್‌ಬಿ ಚಾರ್ಜರ್ ಹಾಗೂ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ಇಕೋ-ಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ & ಇಂಟೆಲಿಗೊ ಟೆಕ್ನಾಲಜಿಯನ್ನು ಪಡೆದಿದೆ.


Click it and Unblock the Notifications








