ಜಿದ್ದಾಜಿದ್ದಿಗೆ ಬಿದ್ದಿವೆ ಹೋಂಡಾ & ಹೀರೋ.. ಶೀಘ್ರದಲ್ಲೇ 3 ಹೊಸ ಬೈಕ್‌ಗಳು ಬಿಡುಗಡೆ, ಬೆಲೆಯೂ ಅಗ್ಗ?

ಭಾರತವು ಅತಿದೊಡ್ಡ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆ ಹೊಂದಿದ್ದು, ಹತ್ತಾರು ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ 100 ಸಿಸಿ ಹಾಗೂ 125 ಸಿಸಿ ಬೈಕ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಹಾಗೂ ಹೀರೋ ಮೋಟೊಕಾರ್ಪ್ ಮೂರು ಹೊಚ್ಚ ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೋಂಡಾ ಸಿಬಿ125 ಹಾರ್ನೆಟ್ (Honda CB125 Hornet):

ಇದು ಸ್ಪೋರ್ಟಿ ಬೈಕ್ ಆಗಿದ್ದು, ಈಚೆಗೆ ಅನಾವರಣಗೊಳಿಸಲಾಗಿತ್ತು. ನಾಳೆಯೇ (ಆಗಸ್ಟ್ 1) ಅದ್ದೂರಿಯಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರೂ.95,000 ರಿಂದ ರೂ.1 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದ್ದು, ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟುಕಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Honda And Hero Launch Soon New 3 Bikes Details

ನೂತನ ಹೋಂಡಾ ಸಿಬಿ125 ಹಾರ್ನೆಟ್ ಮೋಟಾರ್‌ಸೈಕಲ್‌, 123.94 ಸಿಸಿ, 4-ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 11 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 11.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಕೇವಲ 5.4 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಹೊಸ ಸಿಬಿ125 ಹಾರ್ನೆಟ್ ಬೈಕ್ 4.2-ಇಂಚಿರುವ ಟಿಎಫ್‌ಟಿ ಡಿಸ್‌ಪ್ಲೇ, ಹೋಂಡಾ ರೋಡ್‌ಸಿಂಕ್ ಅಪ್ಲಿಕೇಶನ್, ಬ್ಲೂಟೂತ್ ಕನೆಕ್ಟಿವಿಟಿ, ಎಂಜಿನ್ ಸ್ಟಾಪ್ ಸ್ವಿಚ್ ಹಾಗೂ ಯುಎಸ್‌‍ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಯುಎಸ್‌ಡಿ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) 5-ಸ್ಟೆಪ್ ಅಡ್ಜಸ್ಟೇಬಲ್ ಮೊನೊ-ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Honda And Hero Launch Soon New 3 Bikes Details

ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX):

ನಾಳೆ (ಆಗಸ್ಟ್ 1) ಈ ಮೋಟಾರ್‌ಸೈಕಲ್‌ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ರೂ.75,000 ದಿಂದ ರೂ.80,000 (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಇದನ್ನು ಕೆಲವೇ ದಿನಗಳ ಮೊದಲು ಪರಿಚಯಿಸಲಾಗಿತ್ತು. ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಹಾಗೂ ಜೆನಿ ಗ್ರೇ ಮೆಟಾಲಿಕ್ ಎಂಬ ಬಣ್ಣಗಳನ್ನು ಒಳಗೊಂಡಿದೆ.

ನೂತನ ಹೋಂಡಾ ಶೈನ್ 100 ಡಿಎಕ್ಸ್ ಬೈಕ್ 98.98 ಸಿಸಿ ಒಬಿಡಿ2ಬಿ ಸಿಂಗಲ್-ಸಿಲಿಂಡರ್ ಫ್ಯುಯೆಲ್-ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ ಮತ್ತು 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ & ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕ್ ಸಿಸ್ಟಮ್) ಹಾಗೂ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

Honda And Hero Launch Soon New 3 Bikes Details

ಹೀರೋ ಗ್ಲಾಮರ್ 125 (Hero Glamour 125):

ಅತಿ ಶೀಘ್ರದಲ್ಲೇ ಕೆಲವೊಂದು ನವೀಕರಣಗಳಿಗೆ ಒಳಪಟ್ಟ 'ಹೀರೋ ಗ್ಲಾಮರ್ 125' ಮೋಟಾರ್‌ಸೈಕಲ್‌ನ್ನು ಸಹ ಬಿಡುಗಡೆಗೊಳಿಸಲಾಗುತ್ತದೆ ಎನ್ನಲಾಗಿದೆ. ಆದರೆ, ನಿಖರವಾದ ದಿನಾಂಕದ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಇದು ಪ್ರಾಯೋಗಿಕ ಸಂಚಾರ ನಡೆಸುವಾಗಲು ಕಾಣಿಸಿಕೊಂಡಿದೆ. ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌‍ಬಿ ಚಾರ್ಜಿಂಗ್ ಸಾಕೆಟ್ ಹಾಗೂ ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ.

ಈ ಬೈಕ್‌ ರೂ. 85,000 ರಿಂದ ರೂ. 95,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಇದರ ಪವರ್‌ಟ್ರೇನ್ ಆಯ್ಕೆಯಲ್ಲಿ ಯಾವುದೇ ಬದಲಾವಣಿಗಳಿರುವುದಿಲ್ಲ ಎಂದು ಹೇಳಲಾಗಿದೆ. 124.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದೆ. 65 ಕಿ.ಮೀ ವರೆಗೂ ಮೈಲೇಜ್ ನೀಡಬಹುದು ಅಂದಾಜಿಸಲಾಗಿದೆ.

Article Published On: Thursday, July 31, 2025, 12:44 [IST]
English summary
Honda and hero launch soon new 3 bikes details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+