Honda: ಸದ್ದಿಲ್ಲದೇ ಹೋಂಡಾದಿಂದ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಲು ಸಿದ್ಧತೆ.. ಏನೆಲ್ಲಾ ವೈಶಿಷ್ಟ್ಯಗಳಿವೆ?

ಭಾರತದಲ್ಲಿ ಹೋಂಡಾ ಕಂಪನಿಯು ಇದೇ ಜನವರಿಯಲ್ಲಿ ಕ್ಯೂಸಿ1(QC1) ಹಾಗೂ ಆಕ್ಟಿವಾ ಇ (Activa e) ಇ-ಸ್ಕೂಟರ್‌ಗಳನ್ನು ಅದ್ದೂರಿ ಯಾಗಿ ಬಿಡುಗಡೆಗೊಳಿಸಿತ್ತು. ಇವೆರೆಡು ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ಸಿಗುತ್ತವೆ. ಸದ್ಯ, ಹೋಂಡಾ ಕಂಪನಿಯು ಹೊಚ್ಚ ಹೊಸ ಇ-ಮೋಟಾರ್‌ಸೈಕಲ್‌ವೊಂದನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲರು ಅಂದುಕೊಂಡಿರುವ ರೀತಿಯಲ್ಲಿ ಈ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ. ಮೊದಲಿಗೆ ನೆರೆಯ ಚೀನಾದಲ್ಲಿ ಮಾರಾಟಕ್ಕೆ ಬರಲಿದೆ.

ಜಪಾನ್ ಮೂಲದ ಹೋಂಡಾ (Honda), ಚೀನಾಗೆ ಸೇರಿರುವ ವುಯಾಂಗ್ (Wuyang) ಕಂಪನಿಯೊಂದಿಗೆ ವ್ಯಾಪಾರ ಪಾಲುದಾರಿಕೆಯನ್ನು ಹೊಂದಿದೆ. ಇವೆರೆಡು ಕಂಪನಿಗಳು ಜಂಟಿಯಾಗಿ 'ಡಬ್ಲ್ಯೂಹೆಚ್8000ಡಿ' ಕೋಡ್ ನೇಮ್ (ಸಂಕೇತ ನಾಮ) ಹೊಂದಿರುವ ನೂತನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ವೊಂದನ್ನು ಅಭಿವೃದ್ಧಿಪಡಿಸಿವೆ. ಇದು ಇ-ವೋ (E-VO) ಹೆಸರಿನಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

Honda E-VO Electric Bike Launch Soon Details

ಹೊಚ್ಚ ಹೊಸ ಹೋಂಡಾ ಇ-ವೋ ಎಲೆಕ್ಟ್ರಿಕ್ ಬೈಕ್ (Honda E-VO Electric Bike), ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕೂಡ ಸೋರಿಕೆಯಾಗಿವೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌, ಹೊರಭಾಗದಲ್ಲಿ ಹೆಚ್ಚು ಅತ್ಯಾಕರ್ಷಕವಾದ ರೆಟ್ರೋ ಶೈಲಿಯ ವಿನ್ಯಾಸವನ್ನು ಒಳಗೊಂಡಿದೆ. ಬಹುಮುಖ್ಯವಾಗಿ ರೌಂಡ್ ಹೆಡ್‌ಲ್ಯಾಂಪ್, ಸರ್ಕ್ಯುಲರ್ ಬಾರ್-ಎಂಡ್ ಮಿರರ್‌ಗಳು, ಪುಲ್ಡ್-ಬ್ಯಾಕ್ ಹ್ಯಾಂಡಲ್‌ಬಾರ್ ಹಾಗೂ ಸಿಂಗಲ್-ಪೀಸ್ ಟ್ಯಾನ್ ಸೀಟ್‌ನ್ನು ಪಡೆದಿದೆ.

ವಿಶೇಷವಾಗಿ ನೂತನ ಹೋಂಡಾ ಇ-ವೋ ಎಲೆಕ್ಟ್ರಿಕ್-ಮೋಟಾರ್‌ಸೈಕಲ್‌ನ್ನು ಹೆಚ್ಚಾಗಿ ನಗರ ಸಂಚಾರಕ್ಕೆ ಬಳಕೆ ಮಾಡಲು ಸಾಧ್ಯವಾಗುವಂತೆ ತಯಾರಿಸಲಾಗಿದೆ. ಇದು ಸಾಮಾನ್ಯ 150 ಸಿಸಿ ಪೆಟ್ರೋಲ್ ಬೈಕ್‌ನಂತೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, 11 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸಬಲ್ಲ ಎಲೆಕ್ಟ್ರಿಕ್ ಮೋಟಾರ್‌ನ್ನು ಸಹ ಹೊಂದಿರಲಿದೆ ಎಂದು ಹೇಳಲಾಗಿದೆ.

ಈ ಹೋಂಡಾ ಇ-ವೋ ಇ-ಬೈಕ್ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಬೇಸ್ ವೇರಿಯೆಂಟ್ 143 ಕೆಜಿ ತೂಕವಿರಲಿದ್ದು, 110 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿರಲಿದೆ. ಅದೇ ರೀತಿಯಲ್ಲಿ ಟಾಪ್-ಎಂಡ್ ವೇರಿಯೆಂಟ್ 157 ಕೆಜಿ ತೂಕವನ್ನು ಹೊಂದಿರಲಿದ್ದು, 120 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದುಕೊಂಡಿರಲಿದೆ ಎಂಬ ವಿಚಾರವು ಗೊತ್ತಾಗಿದೆ.

ಹೊಸ ಇ-ವೋ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ. ಇದು ಮುಂಭಾಗ (ಫ್ರಂಟ್) ಇನ್ವೆರ್ಟೆಡ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿರಲಿದೆ. ಇದರೊಟ್ಟಿಗೆ ಡಿಸ್ಕ್ ಬ್ರೇಕ್‌ಗಳು ಹಾಗೂ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಈ ಹೋಂಡಾ ಇ-ವೋ ಇ-ಬೈಕ್ ಶಕ್ತಿಯುತವಾದ ಬದಲಾಯಿಸಬಹುದಾದ (Swappable) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ. ಚೀನಾದಲ್ಲಿ ನೂತನ ಇ-ವೋ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗೆ ಸರ್ಕಾರದಿಂದ ಮಾನ್ಯತೆಯ ಪ್ರಮಾಣ ಪತ್ರವು ಲಭ್ಯವಾಗಿದೆ. ಮುಂಬರುವ ದಿನಗಳಲ್ಲಿ ಇದೇ ವಿನ್ಯಾಸವನ್ನು ಆಧರಿಸಿರುವ ಇ-ಬೈಕ್‌ನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಆದರೆ, ಈ ಕುರಿತಂತೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 2, 2025, 14:04 [IST]
English summary
Honda e vo electric bike launch soon details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+