2025ರ ಮೊದಲ ತಿಂಗಳೇ ಶುಭಾರಂಭ.. ಹೀರೋ ಕಂಪನಿಯನ್ನು ಹಿಂದಿಕ್ಕಿದ ಹೋಂಡಾ!

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, 2025ರ ಮೊದಲ ತಿಂಗಳೇ ಶುಭಾರಂಭ ಮಾಡಿದೆ. ಈ ಜನವರಿಯಲ್ಲಿ ಸರಿ ಸುಮಾರು 2,000 ಯುನಿಟ್‌ (ದೇಶೀಯ & ರಫ್ತು) ದ್ವಿಚಕ್ರ ವಾಹನಗಳನ್ನು ಹೆಚ್ಚುವರಿಯಾಗಿ ಮಾರಾಟಗೊಳಿಸುವ ಮೂಲಕ ಹೀರೋ ಮೋಟೋಕಾರ್ಪ್ (Hero MotoCorp) ಅನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಳೆದ ತಿಂಗಳು (ಜನವರಿ - 2025) ಹೋಂಡಾ ಮೋಟಾರ್‌ಸೈಕಲ್, ಬರೋಬ್ಬರಿ 4,44,847 ಯುನಿಟ್‌ ದ್ವಿಚಕ್ರ ವಾಹನಗಳನ್ನು (Two Wheeler) ಮಾರಾಟ ಮಾಡಿದೆ. ಇದೇ ಅವಧಿಯಲ್ಲಿ ಹೀರೋ ಮೋಟೋಕಾರ್ಪ್, ಒಟ್ಟು 4,42,873 ಯುನಿಟ್‌ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿದೆ. ಈ ಮೂಲಕ ಎರಡು ಕಂಪನಿಗಳ ನಡುವಿನ ಮಾರಾಟ ಅಂಕಿ ಸಂಖ್ಯೆಯ ವ್ಯತ್ಯಾಸವು 1,974 ಯುನಿಟ್‌ಗಳಷ್ಟಿದೆ.

Honda Motorcycle Overtakes Hero MotoCorp Total Sales In January 2025 Details

ಆದರೆ, ದೇಶೀಯ ಮಾರಾಟದಲ್ಲಿ ಮಾತ್ರ ಹೀರೋ ಮೋಟೋಕಾರ್ಪ್ ಮುಂದಿದೆ. ಸರಿ ಸುಮಾರು 4,12,378 ಯುನಿಟ್‌ಗಳನ್ನು ಭರ್ಜರಿಯಾಗಿ ಮಾರಾಟ ಮಾಡಿದೆ. ಅದಕ್ಕೆ ಹೋಲಿಕೆ ಮಾಡಿದರೆ, 4,02,977 ಯುನಿಟ್‌ಗಳನ್ನು ಹೋಂಡಾ ಮೋಟಾರ್‌ಸೈಕಲ್ ಮಾರಾಟಗೊಳಿಸಿದೆ. ರಫ್ತಿನ ವಿಚಾರಕ್ಕೆ ಬರುವುದಾದರೆ, ಹೋಂಡಾ 41,870 ಯುನಿಟ್‌ ಹಾಗೂ ಹೀರೋ 30,495 ಯುನಿಟ್‌ಗಳನ್ನು ವಿದೇಶಗಳಿಗೆ ರವಾನಿಸಿವೆ.

ಹೀರೋ ಮೋಟೋಕಾರ್ಪ್ ದೇಶೀಯವಾಗಿ ಸ್ಪ್ಲೆಂಡರ್ ಪ್ಲಸ್, ಪ್ಯಾಷನ್ ಪ್ಲಸ್, ಗ್ಲಾಮರ್, ಕರಿಜ್ಮಾ ಮತ್ತು ಪ್ಲೆಷರ್ ಪ್ಲಸ್ ಸೇರಿದಂತೆ ವಿವಿಧ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ. ಜನವರಿಯಲ್ಲಿ ಕಂಪನಿಯು ಹೊಚ್ಚ ಹೊಸ ಎಕ್ಸ್‌ಟ್ರೀಮ್ 250ಆರ್ ಹಾಗೂ ಎಕ್ಸ್‌ಪಲ್ಸ್ 210 ಬೈಕ್‌ಗಳನ್ನು ಪರಿಚಯಿಸಿತ್ತು ಇದರೊಟ್ಟಿಗೆ ಡೆಸ್ಟಿನಿ 125, ಜೂಮ್ 125 ಮತ್ತು ಜೂಮ್ 160 ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು.

Honda Motorcycle Overtakes Hero MotoCorp Total Sales In January 2025 Details

ಹೋಂಡಾ ಮೋಟಾರ್‌ಸೈಕಲ್ ಕೂಡ ಆಕ್ಟಿವಾ, ಡಿಯೋ, ಶೈನ್ 100, ಶೈನ್ 125, ಎಸ್‍ಪಿ 125, ಯುನಿಕಾರ್ನ್ ಹಾಗೂ ಎಸ್‍ಪಿ 160 ಹೆಸರಿನ ದ್ವಿಚಕ್ರ ವಾಹನಗಳನ್ನು ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಳಿಸುತ್ತಿದೆ. ಹೋದ ತಿಂಗಳು ಕಂಪನಿಯು ಕ್ಯೂಸಿ1 ಮತ್ತು ಆಕ್ಟಿವಾ ಇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶೀಯ ಗ್ರಾಹಕರಿಗಾಗಿ ಅದ್ದೂರಿಯಾಗಿ ಮಾರಾಟಕ್ಕೆ ತಂದಿತ್ತು.

ಹೋಂಡಾ ಕ್ಯೂಸಿ1 & ಆಕ್ಟಿವಾ ಇ-ಸ್ಕೂಟರ್ ವಿಶೇಷತೆಗಳೇನು: ನೂತನ ಕ್ಯೂಸಿ1 ಎಲೆಕ್ಟ್ರಿಕ್ ರೂ.90,000 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. 1.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಪೂರ್ತಿ ಚಾರ್ಜ್‌ನಲ್ಲಿ 80 ಕಿ.ಮೀ ಓಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಎಲ್‌ಸಿಡಿ ಡಿಸ್‌ಪ್ಲೇ ಮತ್ತು ಯುಎಸ್‌‍ಬಿ-ಟೈಪ್ ಸಿ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೋಂಡಾ ಆಕ್ಟಿವಾ ಇ-ಸ್ಕೂಟರ್, ರೂ.1.17 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1.5 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 102 ಕಿ.ಮೀ ಕ್ರಮಿಸುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ & ಹೆಚ್-ಸ್ಮಾರ್ಟ್ ಕೀ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 5, 2025, 10:00 [IST]
English summary
Honda motorcycle overtakes hero motocorp total sales in january 2025 details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+