ಹೋಂಡಾ ಶೈನ್-ಹೀರೋ ಸ್ಪ್ಲೆಂಡರ್: ಮೈಲೇಜ್‌ನಲ್ಲಿ ಪ್ರಚಂಡ ಪ್ರತಿಸ್ಪರ್ಧಿಗಳು: ಯಾವುದು ಬೆಸ್ಟ್?
ಭಾರತದಲ್ಲಿ ಮೈಲೇಜ್ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಹೋಂಡಾ ಶೈನ್ (Honda Shine) ಹಾಗೂ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ನಂತಹ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತವೆ. ಇದೀಗ ಹೋಂಡಾ ಇತ್ತೀಚೆಗೆ 2025ರ ಶೈನ್ 100 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಹಲವು ಆಧುನಿಕ ಫೀಚರ್ಸ್‌ನೊಂದಿಗೆ ಮತ್ತಷ್ಟು ಮೈಲೇಜ್ ಹೆಚ್ಚಿಸಿಕೊಂಡು ಎಂಟ್ರಿಕೊಟ್ಟಿದೆ. ಹೋಂಡಾ ಶೈನ್ 100 ಬೈಕಿಗೆ ಪ್ರತಿಸ್ಪರ್ಧಿಯಾಗಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ಈ ಎರಡು 100 ಸಿಸಿ ಮೋಟಾರ್ ಸೈಕಲ್‌ಗಳಲ್ಲಿ ಯಾವುದು ಬೆಸ್ಟ್ ಇಲ್ಲಿ ನೋಡೋಣ.
ಹೊಸ ಹೋಂಡಾ ಶೈನ್ 100 ಮೋಟಾರ್‌ಸೈಕಲ್, 98.98 ಸಿಸಿ ಒಬಿಡಿ - 2ಬಿ ಪೆಟ್ರೋಲ್ ಎಂಜಿನ್ ಹೊಂದಿದೆ. 7.28 ಪಿಎಸ್ ಪವರ್ ಮತ್ತು 8.04 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 - ಸ್ಪೀಡ್ ಗೇರ್‌ಬಾಕ್ಸ್ ಅನ್ನು ಒಳಗೊಂಡಿದೆ. ಪ್ರತಿ ಲೀಟರ್‌ಗೆ 65 ಕಿ.ಮೀ ವರೆಗೆ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್, 97.2 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದೆ. 8.02 ಪಿಎಸ್ ಪವರ್ ಹಾಗೂ 8.05 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 4 - ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಪ್ರತಿ ಲೀಟರ್‌ಗೆ 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಹೊಸ ಹೋಂಡಾ ಶೈನ್ 100 ಮೋಟಾರ್‌ಸೈಕಲ್ ಬೆಲೆಯ ವಿಷಯಕ್ಕೆ ಬಂದರೆ, ಇದು ರೂ. 68,767 ಎಕ್ಸ್ - ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಮತ್ತೊಂದೆಡೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆ ವಿಷಯಕ್ಕೆ ಬಂದರೆ ರೂ. 74,931 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬೆಲೆಯ ವಿಷಯದಲ್ಲಿ ಹೋಂಡಾ ಶೈನ್ 100 ಹೆಚ್ಚು ಕೈಗೆಟುಕುವ ಮೋಟಾರ್ ಸೈಕಲ್ ಆಗಿದೆ.
ಹೊಸ ಶೈನ್ 100 ಮೋಟಾರ್‌ಸೈಕಲ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಬಲ್ಬ್-ಟರ್ನ್ ಇಂಡಿಕೇಟರ್‌ಗಳು, ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್-ಸ್ಟ್ಯಾಂಡ್ ಸೆನ್ಸರ್, ಸಿಂಗಲ್-ಪೀಸ್ ಸೀಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಬೈಕ್ 99 ಕೆ.ಜಿ ತೂಕವಿದ್ದು, 9 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಡ್ರಮ್ ಬ್ರೇಕ್ ಹಾಗೂ ಸಿಬಿಎಸ್ ಸಿಸ್ಟಮ್ ಹೊಂದಿದೆ.
ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಕೂಡ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಬರುತ್ತದೆ. ಬರೋಬ್ಬರಿ 112 ಕೆ.ಜಿ ತೂಕವಿದ್ದು, 9.8 ಲೀಟರ್‌ನ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಸವಾರರ ಸುರಕ್ಷತೆಗಾಗಿ ಮುಂಭಾಗ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗ ಸಾಮಾನ್ಯ ಡ್ರಮ್ ಬ್ರೇಕ್ ಸೆಟಪ್‌ನ್ನು ಒಳಗೊಂಡಿದೆ.

ಇನ್ನು ಎರಡೂ ಬೈಕ್‌ಗಳು ಒಂದೇ ರೀತಿಯ ಸಸ್ಪೆನ್ಷನ್ ಸೆಟಪ್ ಹೊಂದಿವೆ. ಸ್ಪ್ಲೆಂಡರ್‌ನ ದೊಡ್ಡ 18-ಇಂಚಿನ ಅಲಾಯ್ ವೀಲ್‌ಗಳು ಶೈನ್ 100 ನ 17-ಇಂಚಿನ ಅಲಾಯ್ ಚಕ್ರಗಳಿಗೆ ಹೋಲಿಸಿದರೆ ಒರಟು ರಸ್ತೆಗಳಲ್ಲಿ ಉತ್ತಮವಾಗಿರುತ್ತವೆ. ಜೊತೆಗೆ ಸ್ಪ್ಲೆಂಡರ್‌ನಲ್ಲಿರುವ ಅಲಾಯ್ ವೀಲ್‌ಗಳು ಟ್ಯೂಬ್‌ಲೆಸ್ ಆಗಿದ್ದರೆ, ಹೋಂಡಾ ಶೈನ್ 100 ಟ್ಯೂಬ್ ಜೊತೆಗೆ ಬರುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications