ಭಾರತದ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್... 38 ಸಾವಿರ ಬೆಲೆ... ಕಾರಿನಂತಹ ಫೀಚರ್ಸ್!
ಪುಣೆ ಮೂಲದ ಇ-ಮೊಬಿಲಿಟಿ ಸಂಸ್ಥೆಯಾದ ಇಮೋಟೊರಾಡ್, ಡಿಸೆಂಬರ್ 2, 2025 ರಂದು ಇಂಟಿಗ್ರೇಟೆಡ್ ಬ್ಲೂಟೂತ್ ಮತ್ತು ಐಚ್ಛಿಕ ಜಿಪಿಎಸ್ ಸಂಪರ್ಕದೊಂದಿಗೆ ಭಾರತದ ಮೊದಲ ಸ್ಮಾರ್ಟ್ ಕನೆಕ್ಟೆಡ್ ಎಲೆಕ್ಟ್ರಿಕ್ ಸೈಕಲ್ ಆಗಿರುವ ಟಿ-ರೆಕ್ಸ್ ಸ್ಮಾರ್ಟ್ ಅನ್ನು ಬಿಡುಗಡೆ ಮಾಡಿದೆ. ಈ ಹಾರ್ಡ್‌ಟೈಲ್ MTB-ಶೈಲಿಯ ಇ-ಸೈಕಲ್ ನಗರ ಪ್ರಯಾಣಿಕರು ಮತ್ತು ಕುಟುಂಬಗಳಿಗಾಗಿ ಪರಿಚಯಿಸಿದ್ದು, AMIIGO NXT ಪ್ಲಾಟ್‌ಫಾರ್ಮ್ ಮೂಲಕ ಸುರಕ್ಷತೆ, ಟ್ರ್ಯಾಕಿಂಗ್ ಮತ್ತು ಅಪ್ಲಿಕೇಶನ್ ಏಕೀಕರಣಕ್ಕೆ ಒತ್ತು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
ಟಿ-ರೆಕ್ಸ್ ಸ್ಮಾರ್ಟ್ ವಿಶೇಷತೆಗಳು: ಇದನ್ನು ಪ್ರಾಯೋಗಿಕವಾಗಿಸಲು, ಇ-ಸೈಕಲ್ ಪೂರ್ಣ-ಮೆಟಲ್ ಮಡ್‌ಗಾರ್ಡ್‌ಗಳು, ಇಂಟಿಗ್ರೇಟೆಡ್ ಹಾರ್ನ್‌ನೊಂದಿಗೆ ಫ್ರಂಟ್ ಲೈಟ್, ಸ್ವಿಚ್ ಪ್ಯಾನಿಯರ್ ಬ್ಯಾಗ್ ಮತ್ತು ಸುರಕ್ಷಿತ ಎಕ್ಸ್‌ಕೇಪ್ ಲಾಕ್‌ಸೇಫ್ ಸಿಸ್ಟಮ್, ರಿಯರ್ - ವ್ಯೂ ಮಿರರ್‌ಗಳು, EM ಮೊಬೈಲ್ ಹೋಲ್ಡರ್, ಕ್ಯಾರಿಯರ್ ಅನ್ನು ಒಳಗೊಂಡಿದೆ. 110KG ವರೆಗೆ ತೂಕದ ಸಾಮರ್ಥ್ಯ ಹೊಂದಿದ್ದು, ಫ್ರೇಮ್ ಮೇಲೆ 5 ವರ್ಷಗಳ ವಾರೆಂಟಿ ನೀಡಲಾಗಿದೆ.

29-ಇಂಚಿನ ಪಂಕ್ಚರ್-ನಿರೋಧಕ ಟೈರ್‌ಗಳು ಮತ್ತು 100 mm ಫ್ರಂಟ್ ಫೋರ್ಕ್ ಹ್ಯಾಂಡಲ್, ಆಟೋ ಕಟ್-ಆಫ್‌ನೊಂದಿಗೆ ಮೆಕ್ಯಾನಿಕಲ್ ಡಿಸ್ಕ್ ಬ್ರೇಕ್‌ಗಳು ಸ್ಥಿರವಾದ, ಆತ್ಮವಿಶ್ವಾಸದ ನಿಲುಗಡೆಯನ್ನು ನೀಡುತ್ತವೆ. ಇಮೋಟೊರಾಡ್‌ನ ಹೈ - ಟೆನ್ಸೈಲ್ ಸ್ಟೀಲ್‌ನಿಂದ ನಿರ್ಮಾಣಗೊಂಡ ಹಾರ್ಡ್‌ಟೈಲ್ MTB ಫ್ರೇಮ್, ಭಾರತೀಯ ರಸ್ತೆಗಳಿಗೆ ಸಾಕಷ್ಟು ದೃಢವಾಗಿರುತ್ತದೆ.
ರೈಡರ್‌ಗಳು ರೀಚಾರ್ಜ್ ಮಾಡುವ ಮೊದಲು ಪೆಡಲ್ ಅಸಿಸ್ಟ್‌ನಲ್ಲಿ 50 ಕಿ.ಮೀ ಅಥವಾ ಥ್ರೊಟಲ್‌ನಲ್ಲಿ ಸುಮಾರು 40 ಕಿ.ಮೀ ವರೆಗೆ ಹೋಗಬಹುದು. 36V 10.2Ah ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿರುವ ಈ ಸೈಕಲ್, EMotorad 36V 250W ರಿಯರ್-ಹಬ್ ಮೋಟಾರ್‌ನಿಂದ ಪವರ್ ಪಡೆಯುತ್ತದೆ. ಕ್ಲಸ್ಟರ್ C5 ಡಿಜಿಟಲ್ ಡಿಸ್ಪ್ಲೇ, ಶಿಮಾನೋ TY300 7 - ಸ್ಪೀಡ್ ಡ್ರೈವ್‌ಟ್ರೇನ್ ಮತ್ತು ಐದು ಪೆಡಲ್ - ಅಸಿಸ್ಟ್ ಮಟ್ಟಗಳನ್ನು ಒದಗಿಸಲಾಗಿದೆ.
ಇಮೋಟೊರಾಡ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಕುನಾಲ್ ಗುಪ್ತಾ ಮಾತನಾಡಿ, ಟಿ-ರೆಕ್ಸ್ ಸ್ಮಾರ್ಟ್‌ನೊಂದಿಗೆ ಜನರನ್ನು ಸಂಪರ್ಕಿಸುವ ಮತ್ತು ಅವರನ್ನು ಸುರಕ್ಷಿತವಾಗಿರಿಸುವ ಹೊಸ ಉತ್ಪನ್ನವನ್ನು ರಚಿಸಿದ್ದೇವೆ. ಇದನ್ನು ಭಾರತದಲ್ಲಿ ನಿರ್ಮಿಸಲಾಗಿದ್ದು, ಉತ್ತಮ ತಂತ್ರಜ್ಞಾನವು ದೈನಂದಿನ ಜೀವನವನ್ನು ಸದ್ದಿಲ್ಲದೆ ಉತ್ತಮಗೊಳಿಸಬೇಕು ಎಂಬ ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.
ಟಿ-ರೆಕ್ಸ್ ಸ್ಮಾರ್ಟ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯ: ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿರುವ ಈ ಅಪ್ಲಿಕೇಶನ್, ಸವಾರರು ತಮ್ಮ ಮಾರ್ಗದ ಹಿಸ್ಟರಿ ಪರಿಶೀಲಿಸಲು ಮತ್ತು ಕಾರ್ಯಕ್ಷಮತೆಯ ಮೇಲೆ ಕಣ್ಣಿಡಲು ಅನುಮತಿಸುತ್ತದೆ. ಸ್ಮಾರ್ಟ್ ಇ-ಸೈಕಲ್' ಇಮೋಟೊರಾಡ್ ಅಭಿವೃದ್ಧಿಪಡಿಸಿದ AMIIGO NXT ಅಪ್ಲಿಕೇಶನ್‌ನೊಂದಿಗೆ ಸರಾಗವಾಗಿ ಕನೆಕ್ಟ್ ಆಗುತ್ತದೆ. ರೂ. 37,999 ಬೆಲೆಯಲ್ಲಿ ಬ್ಲೂಟೂತ್ ಮಾಡಲ್ ಮತ್ತು ರೂ. 45,999 ಬೆಲೆಯಲ್ಲಿ ಬ್ಲೂಟೂತ್ + ಜಿಪಿಎಸ್ ಮಾಡಲ್ ಸಿಗಲಿದೆ.
ಚೈಲ್ಡ್ ಲಾಕ್ ಗರಿಷ್ಠ ಥ್ರೊಟಲ್ ವೇಗವನ್ನು ಹೊಂದಿಸುತ್ತದೆ, ಮಕ್ಕಳು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಸವಾರಿ ಮಾಡುವಂತೆ ಮಾಡಬಲ್ಲದು. ಟಿ-ರೆಕ್ಸ್ ಸ್ಮಾರ್ಟ್ ಸುರಕ್ಷತೆಯ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದೆ, ಜಿಯೋಫೆನ್ಸ್ ನಂತಹ ವೈಶಿಷ್ಟ್ಯಗಳು ಸವಾರರಿಗೆ ಪೂರ್ವನಿರ್ಧರಿತ ಗಡಿಯನ್ನು ಸೃಷ್ಟಿಸುತ್ತವೆ. ಟ್ರ್ಯಾಕಿಂಗ್ ಜೊತೆಗೆ, ಈ ವ್ಯವಸ್ಥೆಯು ಕಳ್ಳತನದ ಎಚ್ಚರಿಕೆ, ರಿಮೋಟ್ ನಿಶ್ಚಲತೆ, ತುರ್ತು SOS, ರೈಡರ್ ಹಿಸ್ಟರಿ ಮತ್ತು ಬೆಳೆಯುತ್ತಿರುವ ರೈಡಿಂಗ್ ಸಮುದಾಯದಂತಹ ವೈಶಿಷ್ಟ್ಯಗಳನ್ನು ತರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








