ಹಳೆಯ ಲೆಜೆಂಡ್ ಹೊಸ ಲುಕ್‌ನಲ್ಲಿ ಬಿಡುಗಡೆ: ಕೈನೆಟಿಕ್ ಇವಿ ಸ್ಕೂಟರ್ ವಿಶೇಷತೆಗಳು

ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜುಲೈ 2025 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಐಕಾನಿಕ್ ಕೈನೆಟಿಕ್ ಹೋಂಡಾ ಡಿಎಕ್ಸ್‌ನ ಮರಳುವಿಕೆಯನ್ನು ಸೂಚಿಸುತ್ತದೆ. ಆದರೆ ಇದು ಇಂಧನ ಚಾಲಿತ ಸ್ಕೂಟರ್ ಅಲ್ಲ, ಆಧುನಿಕ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಿದೆ. ಈ ಸ್ಕೂಟರ್ ಡಿಎಕ್ಸ್ ಮತ್ತು ಡಿಎಕ್ಸ್+ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಕ್ರಮವಾಗಿ ರೂ. 1.11 ಲಕ್ಷದಿಂದ ರೂ. 1.17 ಲಕ್ಷದವರೆಗೆ (ಎಕ್ಸ್-ಶೋರೂಂ) ಬೆಲೆ ಇದೆ. ಪ್ರಮುಖ ವೈಶಿಷ್ಟ್ಯಗಳು ಹಾಗೂ ವಿಶೇಷತೆಗಳು ಇಲ್ಲಿವೆ.

DX+ ಅನ್ನು ಐದು ಬಣ್ಣಗಳಲ್ಲಿ ನೀಡಲಾಗುತ್ತದೆ ರೆಡ್, ಬ್ಲೂ, ವೈಟ್, ಸಿಲ್ವರ್ ಮತ್ತು ಬ್ಲಾಕ್ ಹಾಗಯೇ DX ಅನ್ನು ಸಿಲ್ವರ್ ಮತ್ತು ಬ್ಲಾಕ್ ಬಣ್ಣಗಳಲ್ಲಿ ನೀಡಲಾಗುತ್ತಿದೆ. ಕೇವಲ 35,000 ಯೂನಿಟ್‌ ವಾಹನಗಳಿಗೆ ಸೀಮಿತವಾದ ಬುಕಿಂಗ್‌ಗಳೊಂದಿಗೆ, ವಿತರಣೆಗಳು ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭವಾಗುತ್ತವೆ. ಗ್ರಾಹಕರು ರೂ. 1000 ನೀಡಿ ಕಂಪನಿಯ ವೆಬ್‌ಸೈಟ್‌ನಲ್ಲಿ ತಮ್ಮ DX ಅನ್ನು ಬುಕ್ ಮಾಡಬಹುದು.

kinetic-dx-electric-scooter-top-things

ಡಿಎಕ್ಸ್+ ವೇರಿಯೆಂಟ್ ಒಮ್ಮೆ ಚಾರ್ಜ್ ಮಾಡಿದರೆ 116 ಕಿ.ಮೀ ವರೆಗೆ ಕ್ಲೈಮ್ ಮಾಡಲಾದ ಐಡಿಸಿ ರೇಂಜ್ ನೀಡುತ್ತದೆ. ಇದು 2.6 ಕಿ.ವ್ಯಾ ಎಲ್‌ಎಫ್‌ಪಿ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. 4.8 khw ಹಬ್-ಮೌಂಟೆಡ್ ಬಿಎಲ್‌ಡಿಸಿ ಮೋಟಾರ್ ಹೊಂದಿದ್ದು, 80 ಕಿ.ಮೀ ಟಾಪ್ ಸ್ಪೀಡ್ ಮತ್ತು ಡಿಎಕ್ಸ್+ 90 ಕಿ.ಮೀ/ಗಂ ಗರಿಷ್ಠ ವೇಗವನ್ನು ಹೊಂದಿದೆ.

ವಿನ್ಯಾಸದ ವಿಷಯಕ್ಕೆ ಬಂದರೆ ಕೈನೆಟಿಕ್ ಕ್ಲಾಸಿಕ್ ಡಿಎಕ್ಸ್‌ನಿಂದ ಸ್ಫೂರ್ತಿ ಪಡೆದಿದೆ, ಭಾರತದಲ್ಲಿ ತಯಾರಿಸಿದ ಈ ಸ್ಕೂಟರ್‌ನ ಮೂಲ ಡಿಸೈನ್‌ ಅನ್ನು ಹೊಸ ಲುಕ್‌ನೊಂದಿಗೆ ಅಭಿವೃದ್ಧಿಪಡಿಸಲು ಇಟಾಲಿಯನ್ ವಿನ್ಯಾಸಕರೊಂದಿಗೆ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಈಗ ಆಧುನಿಕ ವಿನ್ಯಾಸದೊಂದಿಗೆ ಇದರಲ್ಲಿ ಫುಲ್ಲಿ ಎಲ್ಇಡಿ ಲೈಟಿಂಗ್, 12-ಇಂಚಿನ ವೀಲ್‌ಗಳು ಮತ್ತು ದೊಡ್ಡ ಅಂಡರ್ ಸೀಟ್ ಸ್ಟೋರೇಜ್ ಸೇರಿವೆ.

kinetic-dx-electric-scooter-top-things

ಹೊಸ ಕೈನೆಟಿಕ್ DX EV, 37-ಲೀಟರ್ ಅಂಡರ್-ಸೀಟ್ ಸ್ಟೋರೇಜ್‌ ಹೊಂದಿದ್ದು, ಇದರಲ್ಲಿ 1 ಪೂರ್ಣ ಮತ್ತು 1 ಅರ್ಧ ಹೆಲ್ಮೆಟ್ ಜೊತೆಗೆ ಕೆಲವು ದೈನಂದಿನ ಅಗತ್ಯ ವಸ್ತುಗಳನ್ನು ಸಾಗಿಸಬಹುದು. ಬಲವಾದ ಮೆಟಲ್ ಬಾಡಿ ಮತ್ತು ವಿಶಾಲವಾದ ಫ್ಲೋರ್‌ ಬೋರ್ಡ್‌ ಹೊಂದಿದೆ. ಈ ಸ್ಕೂಟರ್‌ಗಳು ರೇಂಜ್, ಪವರ್ ಮತ್ತು ಟರ್ಬೊ ಎಂಬ ಮೂರು ರೈಡ್ ಮೋಡ್‌ಗಳನ್ನು ನೀಡಲಾಗಿದೆ.

ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಬ್ಲೂಟೂತ್‌ನೊಂದಿಗೆ 8.8-ಇಂಚಿನ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹಿಲ್ ಹೋಲ್ಡ್, ರಿವರ್ಸ್ ಅಸಿಸ್ಟ್ ಮತ್ತು ಪುನರುತ್ಪಾದಕ ಬ್ರೇಕಿಂಗ್, ನೈಜ-ಸಮಯದ ಸವಾರಿ ಅಂಕಿಅಂಶಗಳು ಮತ್ತು ವಾಹನ ಡೇಟಾ, ಜಿಯೋ-ಫೆನ್ಸಿಂಗ್, ಇಂಟ್ರೂಡರ್ ಎಚ್ಚರಿಕೆ, ಫೈಂಡ್ ಮೈ ಕೈನೆಟಿಕ್, ಟ್ರ್ಯಾಕ್ ಮೈ ಕೈನೆಟಿಕ್ ಸೇರಿದಂತೆ ಇನ್ನೂ ಅನೇಕ ಸುಧಾರಿತ ಟೆಲಿಕೈನೆಟಿಕ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

kinetic-dx-electric-scooter-top-things

ಎರಡೂ ವೇರಿಯೆಂಟ್‌ಗಳು ಬ್ಲೂಟೂತ್ ಮೂಲಕ ತ್ವರಿತ CRM ಸಂಪರ್ಕಕ್ಕಾಗಿ ಮೀಸಲಾದ ಕೈನೆಟಿಕ್ ಅಸಿಸ್ಟ್ ಸ್ವಿಚ್‌ನೊಂದಿಗೆ ಸಜ್ಜುಗೊಂಡಿವೆ. ಸ್ಕೂಟರ್‌ಗೆ ಮೈ ಕಿನಿ ಕಂಪ್ಯಾನಿಯನ್ ವಾಯ್ಸ್ ಅಲರ್ಟ್‌ಗಳನ್ನು ನೀಡಲಾಗಿದ್ದು, ಇದರಲ್ಲಿ ಸ್ಕೂಟರ್ ಬಳಕೆದಾರರನ್ನು ಸುರಕ್ಷತೆ, ಕ್ರಿಯಾತ್ಮಕತೆಯ ಬಗ್ಗೆ ಸ್ವಾಗತಿಸುತ್ತದೆ ಮತ್ತು ಎಚ್ಚರಿಸುತ್ತದೆ. ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ಕೂಡ ಹೇಳುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, August 8, 2025, 9:30 [IST]
English summary
Kinetic dx electric scooter top things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+