'ಲೂನಾ ಮೇಲೆ ನನ್ನ ಮೈನಾ' ಎಂದು ಹಾಡುವ ಕಾಲ ಸನಿಹಕ್ಕೆ.. ಕೈನೆಟಿಕ್ ಇ-ಲೂನಾಗೆ ರೂ.36,000 ಆಫರ್ ಘೋಷಣೆ!
ಕನ್ನಡದ ದಿಗ್ವಿಜಯ ಸಿನಿಮಾದ 'ಲೂನಾ ಮೇಲೆ ನನ್ನ ಮೈನಾ' ಎಂಬ ಹಾಡು ಯಾರಿಗೆ ನೆನಪಿಲ್ಲ ಹೇಳಿ.. ಈ ಹಾಡಿನಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಪ್ರಣಯ ರಾಜ ಶ್ರೀನಾಥ್ ಹಾಗೂ ನಟಿ ಅಂಬಿಕಾ ಕಾಣಿಸಿಕೊಂಡಿದ್ದರು.. ಆ ಕಾಲದಲ್ಲಿ 'ಕೈನೆಟಿಕ್ ಲೂನಾ ಎಂಬುದು ಮಧ್ಯಮ ವರ್ಗದ ಜನರ ನೆಚ್ಚಿನ ದ್ವಿಚಕ್ರ ವಾಹನವಾಗಿ ಹೊರಹೊಮ್ಮಿತ್ತು. ಆದರೆ, ಹಲವು ಕಾರಣಗಳಿಗೆ ಲೂನಾ ಮಾರಾಟವನ್ನು ದಶಕಗಳ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು. 2024ರಲ್ಲಿ ಕೈನೆಟಿಕ್ ಲೂನಾವನ್ನು ಎಲೆಕ್ಟ್ರಿಕ್ ರೂಪದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಸದ್ಯ, ಇ-ಲೂನಾ ಖರೀದಿ ಮೇಲೆ ಭರ್ಜರಿ ಆಫರ್‌ನ್ನು ಘೋಷಣೆ ಮಾಡಲಾಗಿದೆ.
ಪುಣೆಯ ಕೈನೆಟಿಕ್ ಗ್ರೀನ್ (Kinetic Green) ಕಂಪನಿ ಇ-ಲೂನಾ ಮಾರಾಟಕ್ಕೆ ಹೆಸರುವಾಸಿಯಾಗಿದ್ದು, ಸೀಮಿತ ಅವಧಿಯ ಕೊಡುಗೆಯಾಗಿ ಗ್ಯಾರಂಟಿ ಬೈ ಬ್ಯಾಕ್ ಆಫರ್‌ನ್ನು ಘೋಷಿಸಿದೆ. ಇದರ ಅನ್ವಯ ಇ-ಲೂನಾ ಖರೀದಿ ಮೇಲೆ ರೂ.36,000 ಮೌಲ್ಯದ ಬೈ ಬ್ಯಾಕ್ ಸೌಲಭ್ಯವು ಲಭ್ಯವಾಗಲಿದೆ. ಆದರೆ, ಈ ಪ್ರಯೋಜನ 3 ವರ್ಷಗಳವರೆಗೆ ವಾಹನ ಮಾಲೀಕತ್ವ ಪೂರ್ಣಗೊಳಿಸಿದ ಗ್ರಾಹಕರಿಗೆ ಮಾತ್ರ ಸಿಗಲಿದೆ. ಆಫರ್ ಕುರಿತಂತೆ ಯಾವುದೇ ಗೊಂದಲವಿದ್ದರೂ ನಿಮ್ಮ ಸಮೀಪದ ಇ-ಲೂನಾ ಶೋರೂಂಗೆ ಭೇಟಿ ನೀಡಿರಿ.

ಕೈನೆಟಿಕ್ ಇ-ಲೂನಾ (Kinetic E-Luna) ವಿಶೇಷತೆಗಳೇನು: ಇದು ಅತಿ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಮೊಪೆಡ್ ಆಗಿದ್ದು, ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಬಳಕೆ ಮಾಡಲು ಹೆಚ್ಚು ಯೋಗ್ಯವಾಗಿದೆ. ಹಿರಿಯ ನಾಗರಿಕರು ಹಾಗೂ ಮಹಿಳೆಯರು ಕೂಡ ಸುಲಭವಾಗಿ ಚಾಲನೆ ಮಾಡಬಹುದು. ಈ ಕೈನೆಟಿಕ್ ಇ-ಲೂನಾ ಎಕ್ಸ್2 (X2) ಹಾಗೂ ಎಕ್ಸ್3 (X3) ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ.
ಕೈನೆಟಿಕ್ ಇ-ಲೂನಾ ಎಕ್ಸ್2 ಮಾಡೆಲ್, ರೂ.69,990 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 110 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇದರ ಬ್ಯಾಟರಿ ಪ್ಯಾಕ್ 4 ಗಂಟೆಗಳಲ್ಲಿ ಭರ್ತಿಯಾಗಿ ಚಾರ್ಜ್ ಆಗಿ ಬಿಡುತ್ತದೆ.
ಮತ್ತೊಂದು ಇ-ಲೂನಾ ಎಕ್ಸ್3 ಮಾಡೆಲ್, ರೂ.72,490 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 120 ಕಿ.ಮೀ ಕ್ರಮಿಸುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಇದರಲ್ಲಿರುವ ಬ್ಯಾಟರಿಯು 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
ಕೈನೆಟಿಕ್ ಇ-ಲೂನಾ ಮಾಡೆಲ್‌ಗಳೆರಡು ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಬಹುಮುಖ್ಯವಾಗಿ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೈಡ್ ಸ್ಟ್ಯಾಂಡ್ ಸೆನ್ಸರ್ ಬ್ಯಾಗ್ ಹುಕ್, ಸ್ಯಾರಿ ಗಾರ್ಡ್ ಹಾಗೂ ಸೇಫ್ಟಿ ಲಾಕ್ ಅನ್ನು ಹೊಂದಿವೆ. ಜೊತೆಗೆ 96 ಕೆಜಿ ತೂಕವಿದ್ದು, 6-ಇಂಚಿನ ವೀಲ್‌ಗಳನ್ನು ಒಳಗೊಂಡಿವೆ.
ಈ ಕೈನೆಟಿಕ್ ಇ-ಲೂನಾ ಮಾಡೆಲ್‌ಗಳು ಸವಾರರ ಸುರಕ್ಷತೆಗಾಗಿ ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್ ಹಾಗೂ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿವೆ. ಓಷನ್ ಬ್ಲೂ, ಪರ್ಲ್ ಯೆಲ್ಲೋ, ಸ್ಪಾರ್ಕ್ಲಿಂಗ್ ಗ್ರೀನ್ ಮತ್ತು ನೈಟ್ ಸ್ಟಾರ್ ಎಂಬ 5 ಆಕರ್ಷಕ ಬಣ್ಣಗಳೊಂದಿಗೂ ಗ್ರಾಹಕರ ಖರೀದಿಗೆ ದೊರೆಯುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications