Kinetic: ಲೆಜೆಂಡರಿ ಕೈನೆಟಿಕ್ ಮತ್ತೆ 3 ಹೊಸ ಸ್ಕೂಟರ್‌ಗಳ ಬಿಡುಗಡೆಗೆ ಸಜ್ಜು: ಓಲಾ, ಎಥರ್‌ಗೆ ನಡುಕ!

ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಕೈನೆಟಿಕ್ ಗ್ರೀನ್ ಮುಂದಿನ 18 ತಿಂಗಳುಗಳಲ್ಲಿ ಮೂರು ಹೊಸ ಇ-ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಪ್ಲಾನ್ ಮಾಡಿದೆ. ಮೊದಲ ಮಾಡಲ್ 2025ರ ದ್ವಿತಿಯಾರ್ಧದ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಇಟಲಿಯ ಟೊರಿನೊ ಡಿಸೈನ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಹೊಸ ಶ್ರೇಣಿಯ ಅಲ್ಟ್ರಾ - ಫ್ಯೂಚರಿಸ್ಟಿಕ್ ಸ್ಕೂಟರ್‌ಗಳನ್ನು ಸಹ - ರಚಿಸಿದೆ, ಇದು ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಶ್ರೇಣಿಯ ಶೈಲಿ ಮತ್ತು ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಪಡೆಯಲಿದೆ.

ಭಾರತೀಯ ಇ-ಸ್ಕೂಟರ್ ಮಾರುಕಟ್ಟೆ ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ, ಮುಂದಿನ ಐದು ವರ್ಷಗಳಲ್ಲಿ ಇವಿ ಮಾರಾಟವು 15% ರಿಂದ 70% ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ಮಾರುಕಟ್ಟೆ ಗಾತ್ರವು ರೂ. 40,000 ಕೋಟಿ ತಲುಪುವುದಾಗಿ ಅಂದಾಜಿಸಲಾಗಿದೆ. ಇದನ್ನು ಮನಗಂಡಿರುವ ಹಲವು ಇವಿ ಕಂಪನಿಗಳಂತೆಯೇ ಕೈನೆಟಿಕ್ ಕೂಡ ತನ್ನ ಇವಿಗಳನ್ನು ವೇಗವಾಗಿ ಪರಿಚಯಿಸಲು ಸಜ್ಜಾಗುತ್ತಿದೆ.

kinetic-green-planning-to-launch-three-new-e-scooters

ಹೊಸ ಮಾಡಲ್‌ಗಳ ಬಗ್ಗೆ ಪ್ರಮುಖ ವಿವರಗಳು ಹೀಗಿವೆ

ಮೂರು ಹೊಸ ಇ-ಸ್ಕೂಟರ್‌ಗಳಲ್ಲಿ ಮೊದಲನೆಯದು ರೆಟ್ರೊ-ಪ್ರೇರಿತ ವಿನ್ಯಾಸ ಅಂಶಗಳನ್ನು ಹೊಂದಿರುವ ಫ್ಯಾಮಿಲಿ ಸ್ಕೂಟರ್ ಆಗಿರಬಹುದು, ಬಹುಶಃ ಐಕಾನಿಕ್ ಕೈನೆಟಿಕ್ ಹೋಂಡಾ DX ನ ಮರುಕಲ್ಪಿತ ಆವೃತ್ತಿಯಾಗಿರಲಿದೆ. ಇದು TFT ಡಿಸ್ಪ್ಲೇ, ಜಿಯೋ ಥಿಂಗ್ಸ್‌ನೊಂದಿಗೆ ಅಭಿವೃದ್ಧಿಪಡಿಸಿದ IoT ಸಂಪರ್ಕ, ವೇಗದ ಚಾರ್ಜಿಂಗ್ ಆಯ್ಕೆಗಳು ಮತ್ತು ವಿಭಿನ್ನ ಬಜೆಟ್‌ಗಳಿಗೆ ಸರಿಹೊಂದುವಂತೆ ಬಹು ಬ್ಯಾಟರಿ ವೇರಿಯೆಂಟ್‌ಗಳಂತಹ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರಲಿದೆ.

ಇವು ಹಬ್ - ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ಗಳಾಗಿರಲಿದ್ದು , ಫ್ರಂಟ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಡ್ಯುಯಲ್ ರಿಯರ್ ಶಾಕ್‌ಗಳನ್ನು ಹೊಂದಿರಲಿವೆ. ಸುಮಾರು 80 ಕಿ.ಮೀ ಟಾಪ್ ಸ್ಪೀಡ್ ಮತ್ತು ದೊಡ್ಡ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಹಲವು ವಸ್ತುಗಳನ್ನು ಶೇಕರಿಸಿಡುವ ಜಾಗವನ್ನು ಹೊಂದಿರುತ್ತದೆ.

kinetic-green-planning-to-launch-three-new-e-scooters

ಕೈನೆಟಿಕ್ ಗ್ರೀನ್ ಈಗಾಗಲೇ 80,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ 400 ವಿಶೇಷ ಡೀಲರ್‌ಗಳ ಜಾಲವನ್ನು ನಿರ್ಮಿಸಿದೆ. ಬ್ರಾಂಡ್‌ನ ಜನಪ್ರಿಯತೆಯಿಂದಾಗಿ ಗ್ರಾಹಕರು ಕೂಡ ಉತ್ತಮವಾಗಿ ಸ್ಪಂದಿಸುತ್ತಿರುವ ಕಾರಣ EV ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಆಕ್ರಮಣಕಾರಿ ವಿಸ್ತರಣೆಗೆ ಕಂಪನಿಯು ತಯಾರಿ ನಡೆಸುತ್ತಿದೆ.

ಕಂಪನಿಯು 2016 ರಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳೊಂದಿಗೆ ತನ್ನ EV ಪ್ರಯಾಣವನ್ನು ಪ್ರಾರಂಭಿಸಿತು. 2022 ರಲ್ಲಿ ಕೊನೆಗೂ ದ್ವಿಚಕ್ರ ಇವಿ ವಾಹನ ಕ್ಷೇತ್ರವನ್ನು ಪ್ರವೇಶಿಸಿತು, 2024 ರಲ್ಲಿ E-Luna ಅನ್ನು ಬಿಡಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಗತವೈಭವವನ್ನು ಮರಳಿ ಪಡೆಯುತ್ತಿದೆ. ಇದು B2C ಮತ್ತು B2B ವಿಭಾಗಗಳಲ್ಲಿ ಯಶಸ್ಸನ್ನು ಕಂಡಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೈನೆಟಿಕ್ ಗ್ರೀನ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪೋರ್ಟ್‌ಫೋಲಿಯೊವನ್ನು ನವೀನ, ವಿನ್ಯಾಸ - ಮುಂದುವರೆದ ಸ್ಕೂಟರ್‌ಗಳೊಂದಿಗೆ ಆಕರ್ಷಕ ಫೀಚರ್ಸ್ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಿದೆ. ಈ ಆಧುನಿಕ ಸ್ಕೂಟರ್‌ಗಳ ಪ್ರಯಾಣ 2025 ರ ಕೊನೆಯಲ್ಲಿ ರೆಟ್ರೊ ಆಧುನಿಕ ಫ್ಯಾಮಿಲಿ ಇ - ಸ್ಕೂಟರ್ ಬಿಡುಗಡೆಯೊಂದಿಗೆ ಪ್ರಾರಂಭವಾಗಲಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಕೈನೆಟಿಕ್ ಗ್ರೀನ್ ಮುಂದಿನ 18 ತಿಂಗಳಲ್ಲಿ ಮೂರು ಇ-ಸ್ಕೂಟರ್ ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ವ್ಯವಹಾರವನ್ನು ವಿಸ್ತರಿಸಲು ಯೋಜಿಸಿದೆ. ಆದರೆ ಈಗಾಗಲೇ ಓಲಾ, ಎಥರ್, ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್ ಇವಿನಂತಹ ಪ್ರಮುಖ ಬ್ರಾಂಡ್‌ಗಳು ನೆಲೆಯೂರಿವೆ. ಈ ಬ್ರಾಂಡ್‌ಗಳನ್ನು ಎದುರಿಸಿ ಯಾವ ಮಟ್ಟಿಗೆ ಪೈಪೋಟಿ ನೀಡಲಿದೆ ಕಾದುನೋಡಬೇಕಿದೆ.

More from DriveSpark

Article Published On: Saturday, July 12, 2025, 12:17 [IST]
English summary
Kinetic green planning to launch three new e scooters
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+