KTM: ಸ್ಟ್ರೀಟ್ ಫೈಟರ್ ಯುವಕರಿಗೆ ಸಿಹಿಸುದ್ದಿ: ಕೆಟಿಎಂ 390 ಡ್ಯೂಕ್ ಬೆಲೆ 18,000 ಇಳಿಕೆ!

ವಿಶ್ವದ ಪ್ರೀಮಿಯಂ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಕೆಟಿಎಂ (KTM), ತನ್ನ ಪ್ರಮುಖ 390 ಡ್ಯೂಕ್ ಜೊತೆಗೆ ಭಾರತದಲ್ಲಿ ಯುವಕರ ಮನಗೆದ್ದಿದೆ. 390cc ಬೈಕ್ ವಿಭಾಗದಲ್ಲಿ ಈ ಮೋಟಾರ್‌ಸೈಕಲ್‌ನ ಅಬ್ಬರವನ್ನು ತಗ್ಗಿಸದೆ ಮುಂದುವರಿಸುತ್ತಿರುವ ಕಂಪನಿಯು ಈಗ ಬೆಲೆ ಇಳೆಕೆ ಮಾಡಿ ಯುವಕರಿಗೆ ಮತ್ತಷ್ಟು ಕೈಗೆಟುಕುವಂತೆ ಮಾಡಿದೆ. ಬರೋಬ್ಬರಿ 18,000 ರೂ. ಬೆಲೆ ಇಳಿಕೆ ಮಾಡಿ, ಬೈಕ್ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಹೊಸ ಕೆಟಿಎಂ 390 ಡ್ಯೂಕ್ ಕುರಿತ ಹೆಚ್ಚಿನ ವಿಶೇಷತೆಗಳನ್ನು ನೋಡೋಣ.

ಭಾರತದಲ್ಲಿ ಪ್ರಮುಖ ಸ್ಟ್ರೀಟ್‌ಫೈಟರ್ ಆಗಿರುವ ಜೆನ್-3 ಕೆಟಿಎಂ 390 ಡ್ಯೂಕ್‌ನ ಹೊಸ ಬೆಲೆಯು ಇಂದಿನಿಂದ ಅನ್ವಯವಾಗಲಿದ್ದು, ಈ ಹಿಂದೆಯಿದ್ದ ರೂ. 3.13 ಲಕ್ಷ ಬೆಲೆಯ ಬೈಕ್ ಈಗ ರೂ. 2.95 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. ಅಲ್ಲಿಗೆ ಕಂಪನಿಯು ರೂ. 18,000 ದಷ್ಟು ಬೆಲೆ ಇಳಿಕೆ ಘೋಷಿಸಿದೆ. ಇದು ಹೈ-ಪರ್ಫಾಮೆನ್ಸ್ ಮೋಟಾರ್‌ಸೈಕ್ಲಿಂಗ್ ಉತ್ಸಾಹಿಗಳಿಗೆ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.

ktm-announced-new-price-on-streetfighter-gen-3-390-duke

ಇತ್ತೀಚಿನ ಪೀಳಿಗೆಯ 399 ಸಿಸಿ ಎಲ್‌ಸಿ 4ಸಿ ಎಂಜಿನ್‌ನಿಂದ ನಡೆಸಲ್ಪಡುವ ಈ ಬೈಕ್ 46 ಪಿಎಸ್ ಪವರ್ ಮತ್ತು 39 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ವರ್ಗ ಪ್ರಮುಖ ಎಲೆಕ್ಟ್ರಾನಿಕ್ಸ್ ಮತ್ತು ವೈಶಿಷ್ಟ್ಯಗಳೊಂದಿಗೆ, ಸಾಟಿಯಿಲ್ಲದ ಸವಾರಿ ಅನುಭವವನ್ನು ನೀಡುತ್ತದೆ. 399 ಸಿಸಿ ಬೈಕ್ ವೀಭಾಗದಲ್ಲಿ ಸದ್ಯ ಈ ಮಟ್ಟದ ಪವರ್ ಹೊಂದಿರುವ ಟಾಪ್ ಮೋಟಾರ್‌ಸೈಕಲ್ ಆಗಿದೆ.

ಕೆಟಿಎಂ 390 ಫೀಚರ್ಸ್: ತನ್ನ ಆಕ್ರಮಣಕಾರಿ ಸ್ಟೈಲಿಂಗ್, ರೇಜರ್ - ಶಾರ್ಪ್ ಹ್ಯಾಂಡ್ಲಿಂಗ್ ಮತ್ತು ಅಡ್ರಿನಾಲಿನ್ - ಪಂಪಿಂಗ್ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾದ ಕೆಟಿಎಂ 390 ಡ್ಯೂಕ್ ಉತ್ಸಾಹಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಜೆನ್-3 ಪ್ಲಾಟ್‌ಫಾರ್ಮ್‌ನ ಅನ್‌ಸ್ಪ್ರಂಗ್ ಮಾಸ್, ಸುಧಾರಿತ ನಿರ್ವಹಣೆ ಮತ್ತು ಉತ್ತಮ ಟ್ರಾಕ್ಷನ್ ಕಂಟ್ರೋಲ್‌ನೊಂದಿಗೆ ಡೈನಾಮಿಕ್ಸ್ ಅನ್ನು ಹೆಚ್ಚಿಸುತ್ತದೆ.

ktm-announced-new-price-on-streetfighter-gen-3-390-duke

ಬಹು ರೈಡ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಎಬಿಎಸ್ ಸೇರಿದಂತೆ ರೈಡರ್ ಏಡ್‌ಗಳು ಸಾಟಿಯಿಲ್ಲದ ರೈಡಿಂಗ್ ಅನುಭವವನ್ನು ಖಚಿತಪಡಿಸುತ್ತವೆ. 'ದಿ ಕಾರ್ನರ್ ರಾಕೆಟ್' ಎಂದು ಕರೆಯಲ್ಪಡುವ ಕೆಟಿಎಂ 390 ಡ್ಯೂಕ್, ನಿಖರವಾದ ಬ್ರೇಕಿಂಗ್ ಮತ್ತು ಉತ್ತಮ ನಿಯಂತ್ರಣಕ್ಕಾಗಿ ವಿಶೇಷವಾಗಿ ತೀಕ್ಷ್ಣವಾದ ತಿರುವುಗಳಲ್ಲಿ ಸೂಪರ್‌ಮೊಟೊ ಎಬಿಎಸ್ ಮತ್ತು ಕಾರ್ನರಿಂಗ್ ಎಬಿಎಸ್ ಅನ್ನು ಒಳಗೊಂಡಿದೆ.

ಜೆನ್-3 ಕೆಟಿಎಂ 390 ಈ ಬಾರಿಯ ಪ್ರಮುಖ ಫೀಚರ್ಸ್: ಸ್ಟ್ರೀಟ್ ಮತ್ತು ರೈನ್ ರೈಡ್ ಮೋಡ್‌ಗಳೊಂದಿಗೆ ಟ್ರಾಕ್ಷನ್ ಕಂಟ್ರೋಲ್ (ಎಂಟಿಸಿ) ಅನ್ನು ಮೋಟಾರ್‌ಸೈಕಲ್ ಪಡೆದುಕೊಂಡಿದೆ. ಅಲ್ಲದೇ ಲಾಂಚ್ ಕಂಟ್ರೋಲ್ ಮತ್ತು ಕ್ವಿಕ್‌ಶಿಫ್ಟರ್+, ಸೂಪರ್‌ಮೊಟೊ ಎಬಿಎಸ್ ಮತ್ತು ಕಾರ್ನರಿಂಗ್ ಎಬಿಎಸ್ ಅನ್ನು ಪಡೆದುಕೊಂಡಿರುವುದು ವಿಶೇಷ ಎಂದು ಹೇಳಬಹುದು.

ಸದ್ಯ ಮಾರುಕಟ್ಟೆಯಲ್ಲಿ 390 ಸಿಸಿ ಮೋಟಾರ್‌ಸೈಕಲ್ ವಿಭಾಗವನ್ನು ಆಳುತ್ತಿರುವ ಕೆಟಿಎಂ 390, ಕಳೆದ ಹಲವು ವರ್ಷಗಳಿಂದ ಪ್ರತಿಸ್ಪರ್ಧಿ ಬೈಕ್‌ಗಳಿಗೆ ನಿದ್ದೆಗೆಡಿಸಿದೆ. ಇದೀಗ ಪರ್ಫಾಮೆನ್ಸ್ ಪ್ರಿಯರಿಗೆ ಇನ್ನೂ ಬೆಲೆ ಇಳಿಸಿ ಕೈಗೆಟುಕುವಂತೆ ಮಾಡಿದೆ. ಹೊಸ ಬೆಲೆ ಇಳೆಕೆಯು ಮೋಟಾರ್‌ಸೈಕಲ್ ಮಾರಾಟವನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಕಂಪನಿಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 14, 2025, 15:32 [IST]
English summary
Ktm announced new price on streetfighter gen 3 390 duke
Read more on ktm ಕೆಟಿಎಂ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+