18,000 ಬೆಲೆ ಇಳಿಕೆಯೊಂದಿಗೆ ಬಿಡುಗಡೆಯಾದ ಕೆಟಿಎಂ ಸ್ಟ್ರೀಟ್ ಫೈಟರ್ 390 ಡ್ಯೂಕ್ ವಿಶೆಷತೆಗಳು!
ಭಾರತದಲ್ಲಿ 390cc ಬೈಕ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಕೆಟಿಎಂ 390 ಡ್ಯೂಕ್, ಸ್ಟ್ರೀಟ್‌ಫೈಟರ್ ಜೆನ್-3 ವೇಷದಲ್ಲಿ ಬೆಲೆ ಇಳಿಕೆಯೊಂದಿಗೆ ಬಿಡುಗಡೆಯಾಗಿದೆ. ಭಾರತದಲ್ಲಿ ಪ್ರಮುಖ ಸ್ಟ್ರೀಟ್‌ಫೈಟರ್ ಆಗಿರುವ ಜೆನ್-3 ಕೆಟಿಎಂ 390 ಡ್ಯೂಕ್‌ನ ಹೊಸ ಬೆಲೆಯು ಇಂದಿನಿಂದ ಅನ್ವಯವಾಗಲಿದ್ದು, ಬರೋಬ್ಬರಿ 18,000 ರೂ. ಬೆಲೆ ಇಳಿಕೆ ಮಾಡಿ, ಬೈಕ್ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಹೊಸ ಬೆಲೆಯೊಂದಿಗೆ ಇದು ಹೈ-ಪರ್ಫಾಮೆನ್ಸ್ ಮೋಟಾರ್‌ಸೈಕ್ಲಿಂಗ್ ಉತ್ಸಾಹಿಗಳಿಗೆ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಬೈಕ್ ಕುರಿತ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.
ಇದು ವರ್ಗ ಪ್ರಮುಖ ಎಲೆಕ್ಟ್ರಾನಿಕ್ಸ್ ಮತ್ತು ವೈಶಿಷ್ಟ್ಯಗಳೊಂದಿಗೆ, ಸಾಟಿಯಿಲ್ಲದ ಸವಾರಿ ಅನುಭವವನ್ನು ನೀಡುತ್ತದೆ. 399 ಸಿಸಿ ಬೈಕ್ ವೀಭಾಗದಲ್ಲಿ ಸದ್ಯ ಈ ಮಟ್ಟದ ಪವರ್ ಹೊಂದಿರುವ ಟಾಪ್ ಮೋಟಾರ್‌ಸೈಕಲ್ ಆಗಿದೆ. ಇತ್ತೀಚಿನ ಪೀಳಿಗೆಯ 399 ಸಿಸಿ ಎಲ್‌ಸಿ 4ಸಿ ಎಂಜಿನ್‌ನಿಂದ ನಡೆಸಲ್ಪಡುವ ಈ ಬೈಕ್, 46 ಪಿಎಸ್ ಪವರ್ ಮತ್ತು 39 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಹಿಂದೆಯಿದ್ದ ರೂ. 3.13 ಲಕ್ಷ ಬೆಲೆಯ ಬೈಕ್ ಈಗ ರೂ. 2.95 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. ಅಲ್ಲಿಗೆ ಕಂಪನಿಯು ರೂ. 18,000 ದಷ್ಟು ಬೆಲೆ ಇಳಿಕೆ ಘೋಷಿಸಿದೆ. 390cc ಬೈಕ್ ವಿಭಾಗದಲ್ಲಿ ಈ ಮೋಟಾರ್‌ಸೈಕಲ್‌ನ ಅಬ್ಬರವನ್ನು ತಗ್ಗಿಸದೆ ಮುಂದುವರಿಸುತ್ತಿರುವ ಕಂಪನಿಯು ಈಗ ಬೆಲೆ ಇಳೆಕೆ ಮಾಡಿ ಯುವಕರಿಗೆ ಮತ್ತಷ್ಟು ಕೈಗೆಟುಕುವಂತೆ ಮಾಡಿದೆ.
ಜೆನ್-3 ಕೆಟಿಎಂ 390 ಈ ಬಾರಿಯ ಪ್ರಮುಖ ಫೀಚರ್ಸ್: ಬೈಕ್ ಬಾರಿ ಲಾಂಚ್ ಕಂಟ್ರೋಲ್ ಮತ್ತು ಕ್ವಿಕ್‌ಶಿಫ್ಟರ್+, ಸೂಪರ್ ಮೊಟೊ ಎಬಿಎಸ್ ಮತ್ತು ಕಾರ್ನರಿಂಗ್ ಎಬಿಎಸ್ ಅನ್ನು ನೀಡಲಾಗಿದೆ. ಸ್ಟ್ರೀಟ್ ಮತ್ತು ರೈನ್ ರೈಡ್ ಮೋಡ್‌ಗಳೊಂದಿಗೆ ಟ್ರಾಕ್ಷನ್ ಕಂಟ್ರೋಲ್ (ಎಂಟಿಸಿ) ಅನ್ನು ಮೋಟಾರ್‌ಸೈಕಲ್ ಪಡೆದುಕೊಂಡಿರುವುದು ವಿಶೇಷ ಎಂದು ಹೇಳಬಹುದು.

ಇದೀಗ ಪರ್ಫಾಮೆನ್ಸ್ ಪ್ರಿಯರಿಗೆ ಇನ್ನೂ ಬೆಲೆ ಇಳಿಸಿ ಕೈಗೆಟುಕುವಂತೆ ಮಾಡಿದೆ. ಹೊಸ ಬೆಲೆ ಇಳೆಕೆಯು ಮೋಟಾರ್‌ಸೈಕಲ್ ಮಾರಾಟವನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಕಂಪನಿಯಿದೆ. ಸದ್ಯ ಮಾರುಕಟ್ಟೆಯಲ್ಲಿ 390 ಸಿಸಿ ಮೋಟಾರ್‌ಸೈಕಲ್ ವಿಭಾಗವನ್ನು ಆಳುತ್ತಿರುವ ಕೆಟಿಎಂ 390, ಕಳೆದ ಹಲವು ವರ್ಷಗಳಿಂದ ಪ್ರತಿಸ್ಪರ್ಧಿ ಬೈಕ್‌ಗಳಿಗೆ ನಿದ್ದೆಗೆಡಿಸಿದೆ.
ಜೆನ್-3 ಪ್ಲಾಟ್‌ಫಾರ್ಮ್‌ನ ಅನ್‌ಸ್ಪ್ರಂಗ್ ಮಾಸ್, ಸುಧಾರಿತ ನಿರ್ವಹಣೆ ಮತ್ತು ಉತ್ತಮ ಟ್ರಾಕ್ಷನ್ ಕಂಟ್ರೋಲ್‌ನೊಂದಿಗೆ ಡೈನಾಮಿಕ್ಸ್ ಅನ್ನು ಹೆಚ್ಚಿಸುತ್ತದೆ. ತನ್ನ ಆಕ್ರಮಣಕಾರಿ ಸ್ಟೈಲಿಂಗ್, ರೇಜರ್ - ಶಾರ್ಪ್ ಹ್ಯಾಂಡ್ಲಿಂಗ್ ಮತ್ತು ಅಡ್ರಿನಾಲಿನ್ - ಪಂಪಿಂಗ್ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾದ ಕೆಟಿಎಂ 390 ಡ್ಯೂಕ್ ಉತ್ಸಾಹಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
'ದಿ ಕಾರ್ನರ್ ರಾಕೆಟ್' ಎಂದು ಕರೆಯಲ್ಪಡುವ ಕೆಟಿಎಂ 390 ಡ್ಯೂಕ್, ನಿಖರವಾದ ಬ್ರೇಕಿಂಗ್ ಮತ್ತು ಉತ್ತಮ ನಿಯಂತ್ರಣಕ್ಕಾಗಿ ವಿಶೇಷವಾಗಿ ತೀಕ್ಷ್ಣವಾದ ತಿರುವುಗಳಲ್ಲಿ ಸೂಪರ್‌ಮೊಟೊ ಎಬಿಎಸ್ ಮತ್ತು ಕಾರ್ನರಿಂಗ್ ಎಬಿಎಸ್ ಅನ್ನು ಒಳಗೊಂಡಿದೆ. ಬಹು ರೈಡ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಎಬಿಎಸ್ ಸೇರಿದಂತೆ ರೈಡರ್ ಏಡ್‌ಗಳು ಸಾಟಿಯಿಲ್ಲದ ರೈಡಿಂಗ್ ಅನುಭವವನ್ನು ಖಚಿತಪಡಿಸುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








