ಒಂದು ಪೈಸೆ ಖರ್ಚಿಲ್ಲದೆ ನಿತ್ಯ 150 ಕಿ.ಮೀ ಓಡುವ ಹೊಸ ಸ್ಕೂಟರ್: ಬೆಲೆಯೆಷ್ಟು, ವಿಶೇಷತೆಗಳೇನು?

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಝೀಲಿಯೋ ಇ (ZELIO E) ಕಂಪನಿಯು, ಇತ್ತೀಚೆಗೆ ಹೊಸ ಲೋ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದನ್ನು 'ಲೆಜೆಂಡರ್ ಕಡಿಮೆ ವೇಗ'ದ (Legender Low speed ev) ಎಲೆಕ್ಟ್ರಿಕ್ ಸ್ಕೂಟರ್ ಎಂದು ಕರೆಯಲಾಗುತ್ತದೆ. ಹೊಸ ಸ್ಕೂಟರ್ ಮೂರು ವಿಭಿನ್ನ ಬ್ಯಾಟರಿ ಪ್ಯಾಕ್ ಹಾಗೂ ಮೂರು ಹೊಸ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದರ ಆರಂಭಿಕ ಬೆಲೆಯು ರೂ. 65,000 ಇದೆ. ಈ ಅಗ್ಗದ ಇವಿ ಕುರಿತ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ZELIO ಕಂಪನಿಯು ವಿಶೇಷ ಪರಿಚಯಾತ್ಮಕ ಪ್ರಯೋಜನವನ್ನು ನೀಡುತ್ತಿದ್ದು, ಮೊದಲ 1,000 ಗ್ರಾಹಕರು ಉಚಿತ ಸುರಕ್ಷತಾ ಹೆಲ್ಮೆಟ್ ಅನ್ನು ಪಡೆಯಬಹುದು. ಹಾಗೆಯೇ ಕಂಪನಿಯು ಈ ವಾಹನದ ಮೇಲೆ 2 ವರ್ಷಗಳ ಮತ್ತು ಎಲ್ಲಾ ಬ್ಯಾಟರಿ ವೇರಿಯೆಂಟ್‌ಗಳ ಮೇಲೆ 1 ವರ್ಷದ ಸಮಗ್ರ ವಾರೆಂಟಿಯನ್ನು ನೀಡುತ್ತಿರುವುದಾಗಿ ಹೇಳಿದೆ.

legender-low-speed-electric-scooter-top-things

ಲೆಜೆಂಡರ್ ಲೋ-ಸ್ಪೀಡ್ ಇವಿ ವಿಶೇಷತೆಗಳು

ಈ ಸ್ಕೂಟರ್ ಕೀಲೆಸ್ ಎಂಟ್ರಿ, ಫಾಲೋ - ಮಿ - ಹೋಮ್ ಲೈಟ್‌ಗಳು, SOS ಅಲರ್ಟ್‌ಗಳು, ಕ್ರ್ಯಾಶ್ ಮತ್ತು ಫಾಲ್ ಡಿಟೆಕ್ಷನ್, ಮೊಬೈಲ್ ಚಾರ್ಜಿಂಗ್, ಆಂಟಿ - ಥೆಫ್ಟ್ ಡಿಟೆಕ್ಷನ್, ಪ್ರಾಕ್ಸಿಮಿಟಿ ಲಾಕ್ - ಅನ್‌ಲಾಕ್, ಪಾರ್ಕ್ ಅಸಿಸ್ಟ್, ವೆಹಿಕಲ್ ಡಯಾಗ್ನೋಸ್ಟಿಕ್ಸ್ ಲೆಜೆಂಡರ್ ಅನ್ನು ನಗರ ಪ್ರಯಾಣಕ್ಕೆ ಸ್ಮಾರ್ಟ್ ಮತ್ತು ವಿಶ್ವಾಸಾರ್ಹ ಆಯ್ಕೆಯನ್ನಾಗಿ ಮಾಡುತ್ತದೆ.

ಹೊಸ ಡಿಸೈನ್, ಸುಧಾರಿತ ಫೀಚರ್ಸ್ ಮತ್ತು ಆಕರ್ಷಕ ಬಣ್ಣದ ಆಯ್ಕೆಗಳನ್ನು ಬೆರೆಸಿ, ಫೇಸ್‌ಲಿಫ್ಟೆಡ್ ಲೆಜೆಂಡರ್ ಅನ್ನು ಆಧುನಿಕ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಮೂರು ವಿಭಿನ್ನ ಬ್ಯಾಟರಿ ಪ್ಯಾಕ್ ಹಾಗೂ ರಸ್ಟಿ ಆರೆಂಜ್, ಗ್ಲಾಸಿ ಗ್ರೀನ್ ಮತ್ತು ಗ್ಲಾಸಿ ಗ್ರೇ ಎಂಬ ಮೂರು ಹೊಸ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಸ್ಕೂಟರ್ 32AH ಜೆಲ್ ಬ್ಯಾಟರಿ ವೇರಿಯೆಂಟ್ ಅನ್ನು ಕೂಡ ಹೊಂದಿದ್ದು, ಇದರ ಬೆಲೆಯು ರೂ. 65,000 ಇದೆ.

60V/30A ವೇರಿಯೆಂಟ್ ಬೆಲೆಯು ರೂ. 75,000 ಇದ್ದು, 74V/32A ವೇರಿಯೆಂಟ್ ಬೆಲೆಯು ರೂ. 79,000 ಇದೆ. ಇವೆರಡು ವೇರಿಯೆಂಟ್‌ಗಳು ಲಿಥಿಯಂ - ಐಯಾನ್ ಬ್ಯಾಟರಿಗಳನ್ನು ಹೊಂದಿವೆ. ಇವು ಹೆಚ್ಚಿನ ಕಾರ್ಯಕ್ಷಮತೆಯ 60/72V BLDC ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಸ್ಕೂಟರ್‌ಗಳು 25 ಕಿ.ಮೀ ಗರಿಷ್ಠ ವೇಗ ಮತ್ತು ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ ನೀಡುತ್ತವೆ.

ಸ್ಕೂಟರ್ ಪ್ರತಿ ಚಾರ್ಜ್‌ಗೆ ಕೇವಲ 1.5 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ. ವೇರಿಯೆಂಟ್‌ಗಳ ಅನ್ವಯಿಸಿ ಚಾರ್ಜಿಂಗ್ ಸಮಯವು ಬದಲಾಗುತ್ತದೆ, ಲಿಥಿಯಂ-ಐಯಾನ್ ಮಾಡಲ್‌ಗಳು 4 ಗಂಟೆಗಳು ಮತ್ತು ಜೆಲ್ ಬ್ಯಾಟರಿ ಮಾಡಲ್ 08 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಹೊಸ ಲೆಜೆಂಡರ್ ಸುರಕ್ಷತೆ, ಸೌಕರ್ಯ ಮತ್ತು ದೈನಂದಿನ ಅನುಕೂಲತೆಯನ್ನು ಹೆಚ್ಚಿಸಲು ಹಲವು ವಿಶೇಷತೆಗಳಿಂದ ತುಂಬಿದೆ.

ಸ್ಕೂಟರ್‌ನ ಒಟ್ಟು ತೂಕ 98 ಕೆ.ಜಿ, 150 ಕೆ.ಜಿ ಲೋಡಿಂಗ್ ಸಾಮರ್ಥ್ಯ ಮತ್ತು 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಲೆಜೆಂಡರ್ ಅನ್ನು ನಿರ್ಮಿಸಲಾಗಿದೆ. ಇದು 90/90-12 ಟೈರ್‌ಗಳನ್ನು ಹೊಂದಿರುವ 12-ಇಂಚಿನ ಅಲಾಯ್ ವೀಲ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳು, ಸುಗಮ ಮತ್ತು ಸ್ಥಿರ ಸವಾರಿಗಳಿಗಾಗಿ ಪ್ರಬಲವಾದ ಹಿಂಭಾಗದ ಹಬ್ ಮೋಟಾರ್ ಅನ್ನು ಒಳಗೊಂಡಿದೆ.

ಸ್ಟೈಲಿಶ್ LED ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು ಮತ್ತು ಇಂಡಿಕೇಟರ್‌ಗಳು ಸ್ಕೂಟರ್‌ನ ಆಧುನಿಕ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಮುಂಭಾಗದ ಟೆಲಿಸ್ಕೋಪಿಕ್ ಮತ್ತು ಹಿಂಭಾಗದ ಡ್ಯುಯಲ್ ಸ್ಪ್ರಿಂಗ್-ಲೋಡೆಡ್ ಸಸ್ಪೆನ್ಷನ್ ಒರಟು ರಸ್ತೆಗಳಲ್ಲಿಯೂ ಉತ್ತಮ ರೈಡ್ ಅನ್ನು ನೀಡುತ್ತದೆ. ಹಾಗೆಯೇ ಇದರ ಡಿಜಿಟಲ್ ಡ್ಯಾಶ್‌ಬೋರ್ಡ್ ಸವಾರರಿಗೆ ಸಂಪೂರ್ಣ ಮಾಹಿತಿ ನೀಡುತ್ತದೆ.

More from DriveSpark

Article Published On: Friday, June 20, 2025, 11:40 [IST]
English summary
Legender low speed electric scooter top things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+