Mileage bikes: ಅತಿ ಹೆಚ್ಚು ಮಾರಾಟ ಕಾಣುವ ಭಾರತೀಯರ ಫೇವರೆಟ್ ಮೈಲೇಜ್ ಬೈಕ್‌ಗಳು!

ಪ್ರಸ್ತುತ ಭಾರತದಲ್ಲಿ ಹೀರೋ, ಟಿವಿಎಸ್, ಬಜಾಜ್ ಮತ್ತು ಹೋಂಡಾದಂತಹ ಕಂಪನಿಗಳು ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಮೋಟಾರ್‌ ಸೈಕಲ್‌ಗಳನ್ನು ನೀಡುತ್ತಿವೆ. ಇವು ಸಾಮಾನ್ಯರಿಗೆ ಮಾತ್ರವಲ್ಲದೆ ಮುಖ್ಯವಾಗಿ ರ್ಯಾಪಿಡೋ, ಸ್ವಿಗ್ಗಿ, ಜೊಮ್ಯಾಟೋಗಳಲ್ಲಿ ಕೆಲಸ ಮಾಡುವವರ ಬದುಕಿನ ಬಂಡಿಗಳಾಗಿವೆ. ಹಾಗಾಗಿಯೇ ಭಾರತದಲ್ಲಿ ಹೆಚ್ಚು ಮೈಲೇಜ್ ನೀಡುವ ಕಮ್ಯೂಟರ್ ಬೈಕ್‌ಗಳಿಗೆ ಸಖತ್ ಬೇಡಿಕೆ ಇದೆ. ಸದ್ಯ ಅತ್ಯಂತ ಕೈಗೆಟುಕುವ ಬೆಲೆಗೆ ಲಭ್ಯವಿರುವ ಮೈಲೇಜ್ ಬೈಕುಗಳ ಪಟ್ಟಿ ಇಲ್ಲಿದೆ.

ಟಿವಿಎಸ್ ರೇಡಿಯಾನ್ (TVS Radeon): ಟಿವಿಎಸ್ ರೇಡಿಯಾನ್ ಬೈಕ್ ಬೇಸ್ ಎಡಿಷನ್ ಬೈಕಿನ ಬೆಲೆಯು ರೂ.59,880ಗಳಾಗಿದೆ. ಈ ಬೇಸ್ ಎಡಿಷನ್, ಡಿಜಿ ಡ್ರಮ್ ಮತ್ತು ಡಿಜಿ ಡಿಸ್ಕ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುವುದು. ಡಿಜಿ ಡಿಸ್ಕ್ ಮಾದರಿಯ ಬೆಲೆಯು ರೂ.81,394ಗಳಾಗಿದರೆ, ಡಿಜಿ ಡ್ರಮ್ ರೂಪಾಂತರದ ಬೆಲೆಯು ರೂ.77,394ಗಳಾಗಿದೆ (ಎಲ್ಲವು ಎಕ್ಸ್ ಶೋರೂಂ ಬೆಲೆಗಳು).

mileage-bikes-hero-splendor-bajaj-ct-110x-tvs-sport

ಈ ಬೆಲೆಗಳಲ್ಲಿ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಹಾಗೂ ಬಡ ವರ್ಗದವರಿಗೆ ಹೇಳಿ ಮಾಡಿಸಿದ ಬೈಕ್ ಆಗಿ ಟಿವಿಎಸ್ ರೇಡಿಯಾನ್ ಜನಪ್ರಿಯತೆ ಪಡೆಇಯುತ್ತಿದೆ. ಈ ಬೈಕ್ 109.7 cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 10 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 73 ಕಿ.ಮೀ ಮೈಲೇಜ್ ನೀಡುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus): ಹೀರೋ ಸ್ಪ್ಲೆಂಡರ್ ಪ್ಲಸ್ 4 ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು 97.2 ಸಿಸಿ, ಏರ್ ಕೂಲ್ಡ್, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್, OHC ಎಂಜಿನ್ ಹೊಂದಿದೆ. ಭಾರತದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್‌ನ ಬೆಲೆಯು ರೂ.77,176 ರಿಂದ ಪ್ರಾರಂಭವಾಗಿ ರೂ.79,926 ಗಳವರೆಗೆ ಇದೆ. 9.8 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯದ್ದು, 70 ಕಿ.ಮೀ ಮೈಲೇಜ್ ನೀಡುತ್ತದೆ.

mileage-bikes-hero-splendor-bajaj-ct-110x-tvs-sport

ಹೋಂಡಾ ಸಿಡಿ 110 ಡ್ರೀಮ್ (Honda CD 110 Dream): ಈ ಬೈಕ್ ಬೆಲೆಯು ರೂ. 76,401 ಎಕ್ಸ್‌ ಶೋರೂಂ ಇದೆ. ಇದಕ್ಕೆ 9.1 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯದ್ದು, 65 ಕಿ.ಮೀ ಮೈಲೇಜ್ ನೀಡುತ್ತದೆ. ಪ್ರಸ್ತುತ 1 ವೆರಿಯೆಂಟ್ ಹೊಂದಿದ್ದು, 4 ಬಣ್ಣಗಳಲ್ಲಿ ಲಭ್ಯವಿದೆ. ಇದು 109.51 ಸಿಸಿ ಬಿಎಸ್-6 ಎಂಜಿನ್ ಹೊಂದಿದೆ.

ಬಜಾಜ್ ಸಿಟಿ 110ಎಕ್ಸ್ (Bajaj CT 110X ): ಈ ಬೈಕ್ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಎಲೆಕ್ಟ್ರಾನಿಕ್ ಕಾರ್ಬ್ಯುರೇಟರ್ ಹೊಂದಿರುವ 115.45cc ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಬೈಕ್‌ನ್ನು ಕೇವಲ ಒಂದು ರೂಪಾಂತರದಲ್ಲಿ ಮಾರಾಟ ಮಾಡುತ್ತಿದ್ದು, ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.69,216ಗಳಾಗಿದೆ. 11 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯದ್ದು, 70 ಕಿ.ಮೀ ಮೈಲೇಜ್ ನೀಡುತ್ತದೆ.

ಟಿವಿಎಸ್ ಸ್ಪೋರ್ಟ್ (TVS Sport): ಈ ಬೈಕ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಮೂರು ಡ್ಯುಯಲ್ ಟೋನ್ ಬಣ್ಣಗಳನ್ನು ಒಳಗೊಂಡಿದೆ. ಇದು ಬಿಎಸ್ 6-ಕಾಂಪ್ಲೈಂಟ್ 109.7 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಹೊಂದಿದೆ. ಸೆಲ್ಫ್ ಸ್ಟಾರ್ಟ್ ES ಮತ್ತು ಸೆಲ್ಫ್ ಸ್ಟಾರ್ಟ್ ELS ಬೆಲೆ ಕ್ರಮವಾಗಿ ರೂ.59,881 ಮತ್ತು ರೂ.71,223 (ಎಕ್ಸ್ ಶೋರೂಂ) ಇದೆ. 10 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯದ್ದು, 70 ಕಿ.ಮೀ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 14, 2025, 20:38 [IST]
English summary
Mileage bikes hero splendor bajaj ct 110x tvs sport
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+