Ducati: ಕಾರನ್ನು ಮೀರಿಸುವ ಫೀಚರ್ಸ್.. ಹೊಸ ಡುಕಾಟಿ ಪ್ಯಾನಿಗೇಲ್ ವಿ2 ಬೈಕ್ ಬಿಡುಗಡೆ, ಬೆಲೆ ಎಷ್ಟು, ವಿಶೇಷತೆಗಳೇನು?
ಇಟಾಲಿ ಮೂಲದ ಡುಕಾಟಿ (Ducati) ಜನಪ್ರಿಯ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ವಿವಿಧ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಶ್ರೀಮಂತ ಗ್ರಾಹಕರು ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಒಂದಷ್ಟು ನವೀಕರಣಕ್ಕೆ ಒಳಪಡಿಸಲಾದ 2025ರ ಹೊಚ್ಚ ಹೊಸ 'ಪ್ಯಾನಿಗೇಲ್ ವಿ2' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು.. ಕಾರ್ಯಕ್ಷಮತೆ ಹೇಗಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ನೂತನ ಡುಕಾಟಿ ಪ್ಯಾನಿಗೇಲ್ ವಿ2 (Ducati Panigale V2) ದುಬಾರಿ ದರದಲ್ಲಿ ಲಭ್ಯವಿದೆ. ಕನಿಷ್ಠ ರೂ.19.12 ಲಕ್ಷ ಹಾಗೂ ಗರಿಷ್ಠ ರೂ.21.10 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ಬೆಲೆಯನ್ನು ಪಡೆದಿದೆ. ಸ್ಟ್ಯಾಂಡರ್ಡ್ ಪ್ಯಾನಿಗೇಲ್ ವಿ2 ಹಾಗೂ ಪ್ಯಾನಿಗೇಲ್ ವಿ2 ಎಸ್ ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಬೈಕ್ ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಒಳಗೊಂಡಿದೆ. ಅತ್ಯುತ್ತಮವಾದ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೇಲ್‌ಲೈಟ್ ಹಾಗೂ ಅಲ್ಯೂಮಿನಿಯಂ ವೀಲ್‌ಗಳನ್ನು ಒಳಗೊಂಡಿದೆ. ಏಕೈಕ ಡುಕಾಟಿ ರೆಡ್ (Ducati Red) ಎಂಬ ಬಣ್ಣದೊಂದಿಗೆ ಮಾತ್ರ ಖರೀದಿಗೆ ಸಿಗುತ್ತದೆ.
ಇದು ಹೆಚ್ಚು ವಿಶಾಲ ಗಾತ್ರದಲ್ಲಿದೆ. 2,050 ಮಿ.ಮೀ ಉದ್ದ, 770 ಮಿ.ಮೀ ಅಗಲ ಹಾಗೂ 1,130 ಮಿ.ಮೀ ಎತ್ತರವಿದೆ. 128 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,438 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 179 ಕೆಜಿ ತೂಕವಿದೆ.
ಹೊಸ ಡುಕಾಟಿ ಪ್ಯಾನಿಗೇಲ್ ವಿ2 ಮೋಟಾರ್‌ಸೈಕಲ್ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ನವೀನವಾದ 890 ಸಿಸಿ 90-ಡಿಗ್ರಿ ವಿ-ಟ್ವಿನ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 10,750 ಆರ್‌ಪಿಎಂನಲ್ಲಿ 120 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8,250 ಆರ್‌ಪಿಎಂನಲ್ಲಿ 93.3 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 16 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.
ಈ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 5-ಇಂಚಿನ ಫುಲ್ ಡಿಜಿಟಲ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ಜಿಪಿಎಸ್ ನ್ಯಾವಿಗೇಷನ್, ಡುಕಾಟಿ ಮಲ್ಟಿಮೀಡಿಯಾ ಸಿಸ್ಟಮ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡಿದೆ. ರೇಸ್, ಸ್ಪೋರ್ಟ್, ರೋಡ್ ಹಾಗೂ ವೆಟ್ ಎಂಬ 4 ರೈಡಿಂಗ್ ಮೋಡ್‌ಗಳನ್ನು ಪಡೆದಿದೆ.
ನೂತನ ಡುಕಾಟಿ ಪ್ಯಾನಿಗೇಲ್ ವಿ2 ಬೈಕ್ ಸುರಕ್ಷತೆಗೂ ಹೆಸರುವಾಗಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಮಾರ್ಜೋಚಿ ಫೋರ್ಕ್ ಹಾಗೂ ಹಿಂಭಾಗ (ರೇರ್) ಕಯಾಬಾ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಕಾರ್ನರಿಂಗ್ ಎಬಿಎಸ್, (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಡಿಟಿಸಿ (ಡುಕಾಟಿ ಟ್ರಾಕ್ಷನ್ ಕಂಟ್ರೋಲ್), ಡಿಡಬ್ಲ್ಯೂಸಿ (ಡುಕಾಟಿ ವೀಲಿ ಕಂಟ್ರೋಲ್), ಇಬಿಸಿ (ಎಂಜಿನ್ ಬ್ರೇಕ್ ಕಂಟ್ರೋಲ್) ಹಾಗೂ ಸ್ಲೈಡ್-ಬೈ-ಬ್ರೇಕ್ ಫಂಕ್ಷನಾಲಿಟಿಯನ್ನು ಹೊಂದಿದೆ.
ಒಟ್ಟಾರೆಯಾಗಿ, ಈ 'ಡುಕಾಟಿ ಪ್ಯಾನಿಗೇಲ್ ವಿ2' ಮೋಟಾರ್‌ಸೈಕಲ್ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 2026ರ ಜನವರಿ ಅಂತ್ಯದಿಂದ ವಿತರಣೆಗಳು ಶುರುವಾಗಲಿದೆ. ಆ ಬಳಿಕ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








